ಅಂಚೆ ಮಾಹಿತಿಗೆ ಹೊಸ ತಂತ್ರ
Team Udayavani, Nov 9, 2018, 11:47 AM IST
ಬೆಂಗಳೂರು: ಅಂಚೆ ಇಲಾಖೆ ಮತ್ತಷ್ಟು ತಂತ್ರಜ್ಞಾನ ಸ್ನೇಹಿಯಾಗುತ್ತಿದ್ದು, ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್ ಸೇವೆ ಯಾವ ಹಂತದಲ್ಲಿದೆ (ಎಲ್ಲಿದೆ) ಹಾಗೂ ಯಾವ ಸಮಯಕ್ಕೆ ನಿಗದಿತ ಸ್ಥಳ ತಲುಪಲಿದೆ (ಟ್ರ್ಯಾಕ್ ಅಂಡ್ ಟ್ರೇಸ್) ಎಂಬುದರ ಪೂರ್ಣ ಮಾಹಿತಿ ಜನರಿಗೆ ಸಿಗಲಿದೆ.
ಇದಕ್ಕಾಗಿ ಟಾಟಾ ಕನ್ಸಲ್‌ಟೆನ್ಸಿ ಸರ್ವಿಸಸ್ (ಟಿಸಿಎಸ್)ಸಂಸ್ಥೆ ಕೋರ್ ಸಿಸ್ಟಂ ಇಂಟಗ್ರೇಟರ್(ಸಿಎಸ್‌ಐ) ಎಂಬ ನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅಂಚೆ ಇಲಾಖೆಗೆ ನೀಡಿದ್ದು, ಇತ್ತೀಚೆಗೆ ಈ ತಂತ್ರಜ್ಞಾನದ ಬಳಕೆಗೆ ಅಧಿಕೃತ ಚಾಲನೆ ನೀಡಲಾಯಿತು.
ಇದುವರೆಗೂ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆಗಾಗಿ ಅಂಚೆ ಸಿಬ್ಬಂದಿ ಬೇರೆ ಬೇರೆ ಅಪ್ಲಿಕೇಷನ್ ಬಳಸಬೇಕಿತ್ತು. ಅಲ್ಲದೆ ಈ ಮೂರು ವಿಭಾಗಗಳಲ್ಲಿಯೂ ಬೆಳಗ್ಗಿನಿಂದ ಸಂಜೆವರೆಗೂ ಬಂದಂತಹ ಸೇವೆಗಳ ಮಾಹಿತಿ ಸಂಗ್ರಹಿಸಿ ಅದನ್ನು ಅಂಚೆ ಇಲಾಖೆಯ ನ್ಯಾಷನಲ್ ಸಾರ್ಟಿಂಗ್ ಹಬ್ (ಎನ್‌ಎಸ್‌ಎಚ್)(ಸ್ಪೀಡ್ ಪೋಸ್ಟ್ ವಿಭಾಗ)ನಲ್ಲಿರುವ ಸ್ಥಳೀಯ ಸರ್ವರ್‌ಗೆ ಅಳವಡಿಸಬೇಕಿತ್ತು.
ಅಲ್ಲಿಂದ ಆ ಮಾಹಿತಿ ಮೈಸೂರಿನಲ್ಲಿರುವ ಅಂಚೆ ಇಲಾಖೆಯ ತಾಂತ್ರಿಕ ಅತ್ಯುನ್ನತ ಕೇಂದ್ರ (ಸಿಇಪಿಟಿ)ಕ್ಕೆ ರವಾನೆಯಾಗುತ್ತಿತ್ತು. ಅಲ್ಲಿನ ಸಿಬ್ಬಂದಿ ಈ ಮಾಹಿತಿಯನ್ನು ಇಂಡಿಯನ್ ಪೋಸ್ಟ್ ವೆಬ್‌ಸೈಟ್‌ಗೆ ಕಳುಹಿಸುತ್ತಿದ್ದರು. ನಂತರ ಜನರಿಗೆ ತಮ್ಮ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆ ಯಾವ ಹಂತದಲ್ಲಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಯುತ್ತಿತ್ತು.
ಖಾಸಗಿ ಪಾರ್ಸಲ್ ವಿಲೇವಾರಿ ಕಂಪನಿಗಳು ಯಾವ ಹಂತದಲ್ಲಿ ಸೇವೆಗಳಿವೆ ಎಂದು ಜನರಿಗೆ ಕ್ಷಣ ಕ್ಷಣದ ಮಾಹಿತಿ ನೀಡುವ ರೀತಿಯಲ್ಲಿ ಅಂಚೆ ಇಲಾಖೆ ಸೇವೆ ಇರಲಿಲ್ಲ. ಅಲ್ಲದೆ ಅಂಚೆ ಇಲಾಖೆಯ ಎನ್‌ಎಸ್‌ಎಚ್ ವಿಭಾಗದ ಸಿಬ್ಬಂದಿ ಮೈಸೂರಿನ ಸಿಇಪಿಟಿಗೆ ಮಾಹಿತಿ ರವಾನೆ ಮಾಡುವ ವೇಳೆ ಪ್ರತಿ 10 ನಿಮಿಷಕ್ಕೊಮ್ಮೆ ಸೇವೆಗಳು ಯಾವ ಹಂತದಲ್ಲಿದೆ ಎಂದು ಸಂವಹನ ನಡೆಸಬೇಕಿತ್ತು.
ಇದಕ್ಕಾಗಿ ಮತ್ತೂಂದು ಅಪ್ಲಿಕೇಷನ್ ಬಳಸಬೇಕಿತ್ತು. ಒಂದು ವೇಳೆ ಅಂಚೆ ಇಲಾಖೆ ಸಿಬ್ಬಂದಿ ಪ್ರತಿ 10 ನಿಮಿಷಕ್ಕೊಮ್ಮೆ ಸಂವಹನ ನಡೆಸುವುದನ್ನು ಮರೆತರೆ ಜನರಿಗೆ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆ ಯಾವ ಹಂತದಲ್ಲಿ ಇದೆ ಎಂದು ಮಾಹಿತಿ ಲಭಿಸುತ್ತಿರಲಿಲ್ಲ. ಮಾಹಿತಿ ಸಂಗ್ರಹ, ರವಾನೆ, ಸಂವಹನ ಎಲ್ಲವನ್ನು ಅಂಚೆ ಸಿಬ್ಬಂದಿಯೇ ಮಾಡಬೇಕಿತ್ತು.
ಈಗ ಸಿಎಸ್‌ಐ ತಂತ್ರಜ್ಞಾನ ಮೂಲಕ ಜನರು ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆ ಯಾವ ಹಂತದಲ್ಲಿದೆ ಎಂದು ಸುಲಭದಲ್ಲಿ ತಿಳಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆ ಮೂರಕ್ಕೂ ಸಿಎಸ್‌ಐ ತಂತ್ರಜ್ಞಾನ ಒಂದನ್ನೇ ಬಳಸಬಹುದು.
ಅಲ್ಲದೆ ಸೇವೆಗಳ ಮಾಹಿತಿಯನ್ನು ಎನ್‌ಎಸ್‌ಎಚ್ ಸಿಬ್ಬಂದಿ ಸ್ಥಳೀಯ ಸರ್ವರ್‌ಗೆ ಅಳವಡಿಸಿ ಮೈಸೂರಿನ ಸಿಇಪಿಟಿಗೆ ಕೇಂದ್ರಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಸಿಎಸ್‌ಐ ತಂತ್ರಜ್ಞಾನವೇ ಈ ಎಲ್ಲ ಕಾರ್ಯ ಮಾಡಲಿದ್ದು, ಜನರಿಗೆ ಸುಲಭದಲ್ಲಿ ತಮ್ಮ ಅಂಚೆ ಸೇವೆ ಯಾವು ಹಂತದಲ್ಲಿ ಎಂದು ತಿಳಿಸಲಿದೆ.
ಕಳೆದ ಎರಡುವರೆ ವರ್ಷಗಳಿಂದ ರಾಜ್ಯದ ವಿವಿಧ ಅಂಚೆ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಹಂತ ಹಂತವಾಗಿ ಸಿಎಸ್‌ಐ ತಂತ್ರಜ್ಞಾನ ಅಳವಡಿಸಲಾಗುತ್ತಿತ್ತು. ನಗರದ ಜಿಪಿಒನಲ್ಲಿ ನ್ಯಾಷನಲ್ ಸಾರ್ಟಿಂಗ್ ಹಬ್‌ನಲ್ಲಿ ಹಾಗೂ ರೈಲ್ವೆ ಅಂಚೆ ಸೇವೆಗಳ ಹಿರಿಯ ಅಧಿಕ್ಷರ ಕಚೇರಿಯಲ್ಲಿ ಸಿಎಸ್‌ಐ ತಂತ್ರಜ್ಞಾನದ ಬಳಕೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
-ಆರ್.ಎನ್.ತವಕರಿ, ಎನ್‌ಎಸ್‌ಎಚ್‌ನ ವ್ಯವಸ್ಥಾಪಕ (ಸ್ಪೀಡ್ ಪೋಸ್ಟ್)
* ಶ್ರುತಿ ಮಲೆನಾಡತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.