ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯ ಕೊಲೆ
Team Udayavani, Oct 21, 2017, 11:41 AM IST
ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲಿ ದಾರುಣವಾಗಿ ಹತ್ಯೆಗೈದಿರುವ ಘಟನೆ ಕೆ.ಜಿ.ಹಳ್ಳಿಯ ವಿನೋಬನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೆ.ಜಿ.ಹಳ್ಳಿಯ ಭಾರತ್ ಮಾತಾ ಲೇಔಟ್ ನಿವಾಸಿ ಸೈಯದ್ ಯೂಸೂಫ್ (25) ಹತ್ಯೆಯಾದ ವ್ಯಕ್ತಿ. ಘಟನೆಯಲ್ಲಿ ಸೈಯದ್ ಸಹೋದರ ಹುಸೇನ್ ಮತ್ತು ಆರೋಪಿ ರೌಡಿಶೀಟರ್ ನದೀಂಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಟೋ ಚಾಲಕನಾಗಿರುವ ಸೈಯದ್ ಯೂಸೂಫ್ ಇತ್ತೀಚೆಗೆ ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ. 15 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ನಾನು ಜೈಲು ಸೇರಲು ನೀನೇ ಕಾರಣ ಎಂದು ಆರೋಪಿ ರೌಡಿಶೀಟರ್ ನದೀಂ ಜತೆ ಗುರುವಾರ ಸಂಜೆ ಜಗಳ ತೆಗೆದು ಹಲ್ಲೆ ಕೂಡ ನಡೆಸಿದ್ದಾನೆ, ಇದರಿಂದ ಆಕ್ರೋಶಗೊಂಡ ನದೀಂ ತನ್ನ ಸಹಚರರ ಜತೆ ಬಂದು ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಯೂಸುಫ್ ಸಹೋದರ ಸೈಯದ್ ಹುಸೇನ್ ಜತೆ ಬಿಲಾಲ್ ಮಸೀದಿಗೆ ಹೋಗಿ ನಮಾಜ್ ಮುಗಿಸಿಕೊಂಡು ಬೈಕ್‌ನಲ್ಲಿ ಸಹೋದರರಿಬ್ಬರು ಮನೆಗೆ ಹೋಗುತ್ತಿದ್ದರು. ಇದೇ ವೇಳೆ ಹಿಂಬಾಲಿಸಿದ ನದೀಂ ಮತ್ತು ಸಹಚರರು ಯೂಸೂಫ್ ಬೈಕ್‌ಗೆ ಡಿಕ್ಕಿಯೊಡೆದು ಜಗಳ ತೆಗೆದಿದ್ದಾರೆ. ಈ ವೇಳೆ ಯೂಸೂಫ್ ಚಪಿx ನದೀಂ ತಲೆಗೆ ಹೊಡೆದಿದ್ದು, ಕೋಪಗೊಂಡ ನದೀಂ ಮತ್ತು ಸಹಚರರು ಮಾರಕಾಸ್ತ್ರಗಳಿಂದ ಯೂಸೂಫ್ ತಲೆ ಮತ್ತು ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಜಿ.ಹಳ್ಳಿ ಪೊಲೀಸರು ಸೈಯದ್ ಯೂಸೂಫ್ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಇನ್ನು ತಲೆಗೆ ಗಾಯಗೊಂಡಿರುವ ನದೀಂನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.