ಚುನಾವಣೆ ಅರ್ಜಿಗೊಂದು ಪೀಠ

Team Udayavani, Aug 31, 2018, 12:10 PM IST

chunavan.jpg

ಬೆಂಗಳೂರು: ಚುನಾವಣಾ ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳಲ್ಲಿ ವಿಶೇಷ ಪೀಠ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಹೇಳಿದರು.

ಶಾಸಕರ ಭವನದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ್ದ “ಭಾರತದಲ್ಲಿ ಚುನಾವಣಾ ಸುಧಾರಣೆಗಳು’ ಕುರಿತ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕವಾಗಿ ವಿಶೇಷ ಪೀಠಗಳನ್ನು ಸ್ಥಾಪಿಸಿದರೆ ಕಾಲಮಿತಿಯೊಳಗೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬಹುದು ಎಂದರು.

ಚುನಾವಣಾ ಅರ್ಜಿಗಳು, ಚುನಾವಣಾ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ಪ್ರತಿಪಾದಿಸಿದ ಸುದರ್ಶನ್‌, ಇವಿಎಂಗಳ ಬಗೆಗಿನ ಅನುಮಾನಗಳನ್ನು ಸಾಬೀತುಪಡಿಸಿ ಅನ್ನುವುದು ಆಯೋಗದ ಬೇಜವಾಬ್ದಾರಿ ಹೇಳಿಕೆ. ಎವಿಎಂಗಳ ಬಗ್ಗೆ ಅಷ್ಟೊಂದು ಪ್ರತಿರೋಧ ವ್ಯಕ್ತವಾಗುತ್ತಿರುವಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಲೋಪಗಳನ್ನು ಸರಿಪಡಿಸುವುದು ಆಯೋಗದ ಜವಾಬ್ದಾರಿ ಎಂದರು. 

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ವಿಧಾನಸಭೆ ಮತ್ತು ಲೋಕಸಭೆಗೆ ಏಕ ಕಾಲಕ್ಕೆ ಚುನಾವಣೆ ನಡೆಯಬೇಕು ಎಂಬ ಆಲೋಚನೆ ಅತ್ಯಂತ ಅಪಾಯಕಾರಿ. ಇದು ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕವಾದದ್ದು. ಚುನಾವಣಾ ಆಯುಕ್ತರ ನೇಮಕದಲ್ಲಿ ಆಡಳಿತಾರೂಢ ಪಕ್ಷದ ಪಾತ್ರ ಹೆಚ್ಚಾಗಿರುವುದರಿಂದ ಆ ಸ್ಥಾನಕ್ಕೆ ಬಂದವರು ಆಡಳಿತ ಪಕ್ಷದ ಮರ್ಜಿಯಲ್ಲಿ ಕೆಲಸ ಮಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಆದ್ದರಿಂದ ಚುನಾವಣಾ ಆಯುಕ್ತರ ನೇಮಕದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಸಮಾನ ಪಾತ್ರ ಇರಬೇಕು ಎಂದರು.

“ಒಂದೇ’ ಆಲೋಚನೆಗೆ ವಿರೋಧ: ಚುನಾವಣಾ ಸುಧಾರಣೆಗಳ ಜತೆಗೆ ರಾಜಕೀಯ ಪಕ್ಷಗಳಲ್ಲೂ ಸುಧಾರಣೆ ಆಗಬೇಕು. ಒಂದು ದೇಶಕ್ಕೆ ಒಬ್ಬ ನಾಯಕ, ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದೇ ಚುನಾವಣೆ ಎಂಬ ಆಲೋಚನೆಗಳ ವಿರುದ್ಧ ಪ್ರಬಲ ಜನಾಂದೋಲನ ನಡೆಯಬೇಕು. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‌ ಹಾಗೂ ವಿದೇಶಿ ದೇಣಿಗೆಯ ಅಪಾಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು.

ಈ ಎಲ್ಲ ವಿಚಾರಗಳ ಬಗ್ಗೆ ಅತಿದೊಡ್ಡ ವಿರೋಧಪಕ್ಷವಾಗಿರುವ ಕಾಂಗ್ರೆಸ್‌ ಪಕ್ಷದ ನಿಲುವು ಸ್ಪಷ್ಟವಾಗಿರಬೇಕು ಎಂಬ ಅಭಿಪ್ರಾಯಗಳು ಸಂವಾದದಲ್ಲಿ ಕೇಳಿ ಬಂದವು. ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್‌, ಸಿಪಿಎಂ ಮುಖಂಡ ವಿಜಿಕೆ ನಾಯರ್‌, ಜೆಡಿಯು (ಶರದ್‌ ಯಾದವ್‌) ಮುಖಂಡ ಡಾ. ಎಂ.ಪಿ. ನಾಡಗೌಡ ಮತ್ತಿತರರು ವಿಷಯದ ಕುರಿತು ಮಾತನಾಡಿದರು. 

ಮೈತ್ರಿ ಸರ್ಕಾರಕ್ಕೆ ಒಂದು ಚೌಕಟ್ಟು ಇರುತ್ತದೆ. ಆ ಚೌಕಟ್ಟಿನಲ್ಲೇ ಎಲ್ಲವೂ ನಡೆಯಬೇಕು. ಹಾಗಾದಾಗ ಮಾತ್ರ ಸಮ್ಮಿಶ್ರ ಸರ್ಕಾರ ಅವಧಿ ಪೂರೈಸಲು ಸಾಧ್ಯ. ಕೈ ಮೀರಿದ ಸಂದರ್ಭಗಳು ಸೃಷ್ಟಿಯಾದರೆ ಯಾರೂ, ಏನೂ ಮಾಡಲಿಕ್ಕಾಗದು.
-ವಿ.ಆರ್‌.ಸುದರ್ಶನ್‌, ಕೆಪಿಸಿಸಿ ಉಪಾಧ್ಯಕ್ಷ

ಟಾಪ್ ನ್ಯೂಸ್

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Mulki: ರಾಷ್ಟ್ರೀಯ ಹೆದ್ದಾರಿ; ಶೀಘ್ರ ಸರ್ವಿಸ್‌ ರಸ್ತೆ ಕಾಮಗಾರಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

5

Punjalkatte: ರಾಷ್ಟ್ರೀಯ ಹೆದ್ದಾರಿ ಬದಿ ಕಸದ ರಾಶಿ; ಕ್ರಮಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.