ಕಾಲುವೆ ಒತ್ತುವರಿದಾರರ ವಿರುದ್ಧ ಸ್ವಯಂ ಪ್ರೇರಿತ ದೂರು


Team Udayavani, Aug 22, 2017, 12:08 PM IST

kaluve-ottuvari.jpg

ಬೆಂಗಳೂರು: ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಆಗುತ್ತಿರುವ ಅನಾಹುತಗಳ ತಡೆಗೆ ಮುಂದಾಗಿರುವ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್) ಒತ್ತುವರಿದಾರರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ವಿಶೇಷ ತಂಡ ರಚಿಸಿದೆ.

ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆನೀರು ಮನೆಗಳಿಗೆ ನುಗ್ಗುತ್ತಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರನ್ನು ಗುರುತಿಸಿ ದೂರು ದಾಖಲಿಸಲು ತೀರ್ಮಾನಿಸಿದೆ. 

ಮಳೆಯಿಂದ ಇತ್ತೀಚೆಗೆ ಹಾನಿಗೊಳಗಾದ ಪ್ರದೇಶಗಳಲ್ಲಿನ ರಾಜಕಾಲುವೆ ಒತ್ತುವರಿ ಗುರುತಿಸಲು ಆರು ತಂಡಗಳನ್ನು ರಚನೆ ಮಾಡಲಾಗಿದೆ. ಈ ಆರು ತಂಡಗಳಿಗೆ ಒತ್ತುವರಿ ಗುರುತಿಸಲು ಸ್ಥಳಗಳನ್ನು ನೀಡಲಾಗಿದ್ದು, ಅದರಂತೆ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಪಾಲಿಕೆಯ ಮಳೆ ನೀರುಗಾಲುವೆ ಅಧಿಕಾರಿಗಳು ದೂರು ನೀಡಿದರೆ ಸ್ವೀಕರಿಸಲಿದ್ದು, ಇಲ್ಲದಿದ್ದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. 

ಡಿವೈಎಸ್‌ಪಿ ಬಿ.ಜಗನ್ನಾಥ ರೈ ಅವರ ತಂಡ ಕೋರಮಂಗಲ ವ್ಯಾಪ್ತಿಯ ಎಸ್‌.ಟಿ.ಬೆಡ್‌, 4ನೇ, 5ನೇ, 7ನೇ ಬ್ಲಾಕ್‌ ಹಾಗೂ ಖೊಡೆ ಸರ್ಕಲ್‌ ಭಾಗಗಳಲ್ಲಿ ಆಗಿರುವ ಒತ್ತುವರಿಯನ್ನು ಗುರುತಿಸಿ ದೂರು ದಾಖಲಿಸಿಕೊಳ್ಳಲಿದ್ದಾರೆ. ಉಳಿದಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಚ್‌.ಎಸ್‌.ಪರಮೇಶ್ವರ ನೇತೃತ್ವದ ತಂಡ ಜೆ.ಪಿ.ನಗರ ವ್ಯಾಪ್ತಿಯ ಡಾಲರ್ ಕಾಲೋನಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಸವಿತಾ ಅವರ ನೇತೃತ್ವದ ತಂಡ ಶಾಂತಿನಗರ ವ್ಯಾಪ್ತಿಯ ಆಸ್ಟಿನ್‌ ಟೌನ್‌, ಆಲಿ ಆಸ್ಕರ್‌ ರಸ್ತೆ, ಫ್ರೆಜರ್‌ ಟೌನ್‌ ಹಾಗೂ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ವಸತಿ ಗೃಹ ಭಾಗಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. 

ಅದೇ ರೀತಿ ಪಿಎಸ್‌ಐ ವಿ.ಆರ್‌.ದೀಪಕ್‌ ನೇತೃತ್ವದ ತಂಡ ಮಹದೇವಪುರ ವ್ಯಾಪ್ತಿಯ ಎಚ್‌.ಎ.ಎಲ್‌. ವಿಮಾನ ನಿಲ್ದಾಣ ವಾರ್ಡ್‌, ಮಾರುತಿನಗರ ವಾರ್ಡ್‌, ಮಾಧವನಗರ ವೈಟ್‌ಫೀಲ್ಡ್‌ ವಾರ್ಡ್‌, ವಿಜ್ಞಾನ ನಗರ 1ನೇ ಅಡ್ಡರಸ್ತೆ, ಗುಳ್ಳಪ್ಪ ಬಡಾವಣೆಗಳಿಗೆ ಭೇಟಿ ನೀಡಲಿದೆ. ಪಿಎಸ್‌ಐ ವಿ.ಶಿವಕುಮಾರ್‌ ನೇತೃತ್ವದ ತಂಡ ಬೆಳ್ಳಂದೂರು ವ್ಯಾಪ್ತಿಯ ಸರ್ಜಾರಪು ರಸ್ತೆ, ಬಿ.ಅಂಬೇಡ್ಕರ್‌ ನಗರ, ಬೆಳ್ಳಂದೂರು ತಲಕಾವೇರಿ ಬಡಾವಣೆ,

ಹೊಸನಗರ 1ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, ಕಾಳಪ್ಪ ಬಡಾವಣೆ, ಹೊಸನಗರ ಗುರುರಾಜ್‌ ಬಡಾವಣೆ, 1ನೇ ಮುಖ್ಯ ರಸ್ತೆ ದೊಡ್ಡನೆಕ್ಕುಂದಿ, ಕಾಜಾಗ್ರಾಂಡ್‌ ಅಪಾರ್ಟ್‌ಮೆಂಟ್‌, ಪ್ರಸ್ಟೀಜ್‌ ವ್ಯಾಲಿ ಹತ್ತಿರ, ಯಮಲೂರು ರಸ್ತೆಗೆ ಭೇಟಿ ನೀಡಲಿದ್ದಾರೆ. ಪಿಎಸ್‌ಐ ಎ.ಅಮರೇಶ್‌ಗೌಡ ನೇತೃತ್ವದ ತಂಡ ಜ್ಯೋತಿ ನಗರ 1ನೇ ಮುಖ್ಯ ರಸ್ತೆ, ತಿಪ್ಪಯ್ಯ ಬಡಾವಣೆ, ಬಸವನಗರ ವಾರ್ಡ್‌ನ ಎಂ.ಎಕೆ.ಡಿ.ಫ್ರೆಂಟ್‌ ಮೆಸ್‌ ಅಪಾರ್ಟ್‌ಮೆಂಟ್‌, ಶಿರಡಿಸಾಯಿ ಬಡಾವಣೆ, ಭಟ್ಟರಹಳ್ಳಿಗೆ ಭೇಟಿ ನೀಡಲಿದ್ದಾರೆ. 

ಜಂಟಿ ಆಯುಕ್ತರಿಗೆ ಸೂಚನೆ
ಪಾಲಿಕೆಯ ಎಂಟು ವಲಯದ ಜಂಟಿ ಆಯುಕ್ತರಿಗೆ ಈಗಾಗಲೇ ಬಿಎಂಟಿಎಫ್ ಅಧಿಕಾರಿಗಳು ರಾಜಕಾಲುವೆ ಪರಿಶೀಲನೆಯ ಕುರಿತು ಮಾಹಿತಿ ನೀಡಿದ್ದಾರೆ. ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಸಂಬಂಧಿಸಿದಂತೆ ದೂರುಗಳು ಅಥವಾ ಮಾಹಿತಿ ಇದ್ದಲ್ಲಿ ಬಿಎಂಟಿಎಫ್ ಅಧಿಕಾರಿಗಳಿಗೆ ಅಥವಾ ಕೇಂದ್ರ ಕಚೇರಿಗೆ ನೀಡುವಂತೆ ಬಿಎಂಟಿಎಫ್ ಎಡಿಜಿಪಿ ಪ್ರಶಾಂತ ಕುಮಾರ್‌ ಠಾಕೂರ್‌ ಸೂಚಿಸಿದ್ದಾರೆ.

ಟಾಪ್ ನ್ಯೂಸ್

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.