ಅಂತರ್ಜಾತಿ ವಿವಾಹಕ್ಕೆ ವಿಶೇಷ ಯೋಜನೆ
Team Udayavani, Jan 30, 2017, 12:12 PM IST
ಬೆಂಗಳೂರು: “ಅಂತರ್ಜಾತಿ ವಿವಾಹಕ್ಕೆ ವಿಶೇಷ ಯೋಜನೆ ರೂಪಿ ಸುವ ಉದ್ದೇಶವಿದ್ದು, ಅದಕ್ಕಾಗಿ ಈಗಿರುವ ನಿಯಮಗಳನ್ನು ಮಾರ್ಪ ಡಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ,” ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಹಾಗೂ ಆರ್‌ಪಿಐನ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಾಳೆ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, “ಅಂತರ್ಜಾತಿ ವಿವಾಹವಾದವರಿಗೆ 2.50 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದನ್ನು 5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹಾಗೆಯೇ ಅಂತರ್ಜಾತಿ ವಿವಾಹವಾದವರಿಗೆ ಉದ್ಯೋಗ, ಗ್ರಾಮೀಣ ಪ್ರದೇಶದ ಲ್ಲಿದ್ದರೆ 5 ಎಕರೆ ಜಮೀನು ನೀಡುವ ಸಂಬಂಧ ಕೇಂದ್ರ ಸರ್ಕಾರ ಆಸಕ್ತಿ ತಾಳಲಿದೆ,” ಎಂದರು.
“ಒಂದೇ ಸಮುದಾಯದ ಬೇರೆ ಬೇರೆ ಉಪಪಂಗಡಗಳು ಮದುವೆ ಯಾದಲ್ಲಿ ಅದನ್ನು ಅಂತರ್ಜಾತಿ ಎಂದು ಪರಿಗಣಿಸುವುದಿಲ್ಲ. ಬೇರೆ ಬೇರೆ ಜಾತಿಯಲ್ಲಿ ಮದುವೆಯಾದಲ್ಲಿ ಮಾತ್ರ ಅದನ್ನು ಅಂತರ್ಜಾತಿ ವಿವಾಹ ಎಂದು ಪರಿಗಣಿಸಿ ಅವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ರಾಜ್ಯದಲ್ಲಿ ಅಂತರ್ಜಾತಿ ವಿವಾಹಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದನ್ನು ಸ್ವಾಗತಿಸುತ್ತೇನೆ.
ಯಾವುದಾದರೂ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿದೆ ಎಂದು ತಿಳಿದುಬಂದಲ್ಲಿ ಅಂತಹ ಜಿಲ್ಲೆಗೆ 25 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಈ ಅನುದಾನ ಬಳಕೆ ಮಾಡಿಕೊಂಡು ಉದ್ಯೋಗ, ಜಮೀನು ನೀಡುವುದು ಹಾಗೂ 5 ಲಕ್ಷ ರೂ. ಆರ್ಥಿಕ ನೆರವು ನೀಡುವುದಕ್ಕೆ ಬಳಕೆ ಮಾಡಿಕೊಳ್ಳಬಹುದು,” ಎಂದರು.
ಮೀಸಲು ಪ್ರಮಾಣ ಶೇ. 75ಕ್ಕೆ ಹೆಚ್ಚಿಸಬೇಕು: ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಬಡವರಿಗೆ ಮೀಸಲಾತಿ ಜಾರಿಗೆ ತರಲು ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಳ ಮಾಡುವುದು ಮತ್ತು ಆ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡುವ ಕುರಿತು ಮುಂದಿನ ಅಧಿವೇಶನದ ವೇಳೆ ಮಸೂದೆ ಮಂಡನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಶೇ. 49.5ರಷ್ಟು ಮೀಸಲಾತಿ ಇದೆ. ಇದನ್ನು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದವರಿಗೆ ವಿಸ್ತರಿಸಲು ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ದೇಶದೆಲ್ಲೆಡೆ ಮೀಸಲಾತಿ ಬೇಕು ಎಂದು ಅನೇಕ ಸಮುದಾಯಗಳು ಪ್ರತಿಭಟನೆ ಮಾಡತೊಡಗಿವೆ. ಹರ್ಯಾಣದಲ್ಲಿ ಜಾಟ್, ಗುಜರಾತ್‌ನಲ್ಲಿ ಪಟೇಲ್ ಸಮುದಾಯ, ಆಂಧ್ರದಲ್ಲಿ ಕಾಪು, ರೆಡ್ಡಿ ಜನಾಂಗದವರು ಪ್ರತಿಭಟನೆಗೆ ಇಳಿದಿದ್ದಾರೆ. ಕರ್ನಾಟಕದಲ್ಲಿ ಒಕ್ಕಲಿಗರು ಮೀಸಲಾತಿ ಬೇಕು ಎಂದಿದಾರೆ. ಹೀಗಾಗಿ ಬಡವರನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನೀಡಲಾಗುವುದು ಎಂದು ಸಚಿವ ಅಠಾವಳೆ ತಿಳಿಸಿದ್ದಾರೆ.
ನೋಟಿನ ಮೇಲೆ ಅಂಬೇಡ್ಕರ್ ಅವರ ಚಿತ್ರ ಹಾಕಿ
ನೋಟು ರದ್ಧತಿಗೆ ಆರ್‌ಪಿಐ ಬೆಂಬಲ ಇದೆ. ಪ್ರತಿ 10 ವರ್ಷಕ್ಕೊಮ್ಮೆ ನೋಟುಗಳ ಬದಲಾವಣೆ ಮಾಡುವ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಬೇಕು ಎಂದು ಅಂಬೇಡ್ಕರ್ ಕೂಡಾ ಹೇಳಿದ್ದರು. ದೇಶದಲ್ಲಿ ಇರುವ ನೋಟಿನಲ್ಲಿ ಮಹಾತ್ಮಗಾಂಧಿ ಭಾವಚಿತ್ರ ಇದೆ.
ಇದಕ್ಕೆ ಯಾರದೇ ತಕರಾರಿಲ್ಲ. ಆದರೆ, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಆಶಯಗಳು ಸದಾ ಕಾಲ ಇರಬೇಕಾಗುತ್ತದೆ. ಹೀಗಾಗಿ ಇರುವ ಕರೆನ್ಸಿಗಳ ಪೈಕಿ ಯಾವುದಾದರೂ ಒಂದು ನೋಟಿನ ಮೇಲೆ ಅಂಬೇಡ್ಕರ್ ಭಾವಚಿತ್ರ ಮುದ್ರಿಸಬೇಕು ಎಂದು ಅಠಾವಳೆ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.