ಸಹಜೀವನದ ಜೋಡಿ ದೂರ; ಈಗ ಅತ್ಯಾಚಾರದ ಆರೋಪ
Team Udayavani, Mar 11, 2017, 11:54 AM IST
ಬೆಂಗಳೂರು/ಕೆ.ಆರ್.ಪುರ: ಗೃಹೋಪಯೋಗಿ ವಸ್ತುಗಳ ಮಾರಾಟ ಕಂಪೆನಿ ಮಾಲೀಕರೊಬ್ಬರು ಅತ್ಯಾಚಾರ ತನ್ನ ಎಸಗಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ಇಪ್ಪತೈದು ವರ್ಷದ ಯುವತಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2016ರ ಫೆಬ್ರವರಿಯಲ್ಲಿ ಪರಿಚಯಸ್ಥರಾದ ಕಸ್ತೂರಿ ನಗರದ ನಿವಾಸಿ ಚಕ್ರಾಧರ ರೆಡ್ಡಿ ಎಂಬುವವರು (40) ಅತ್ಯಾಚಾರ ಎಸಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಮಾರ್ಚ್ 5ರಂದು ದೂರು ದಾಖಲಿಸಿದ್ದಾರೆ. ಅತ್ಯಾಚಾರ ನಡೆಸಿದ ವಿಡಿಯೋವನ್ನು ಮುಂದಿಟ್ಟುಕೊಂಡು ಚಕ್ರಾಧರ ರೆಡ್ಡಿ ತನ್ನ ಮೇಲೆ ದೌರ್ಜನ್ಯ ವೆಸಗಿದ್ದಾನೆ ಎಂದೂ ಯುವತಿ ತನ್ನ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಮಾರ್ಚ್ 5ರಂದು ದಾಖಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ಥ ಯುವತಿ ನೀಡಿದ ದೂರಿನ ಮೇರೆಗೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಇಬ್ಬರ ನಡುವೆಯೂ ಲೈಂಗಿಕ ಸಂಬಂಧ ನಡೆದಿರುವುದು ಧೃಡಪಟ್ಟಿದೆ. ಜತೆಗೆ ಆರೋಪಿ ಚಕ್ರಾಧರ ರೆಡ್ಡಿಯವರನ್ನು ವಿಚಾರಣೆಗೊಳಪಡಿಸಲಾಗಿದೆ.
“ಲಿವಿಂಗ್ ಟುಗೇದರ್ ರಿಲೇಶನ್‌ಶಿಪ್” ಬ್ರೇಕ್: ಸಂತ್ರಸ್ಥ ಯುವತಿ ಮುಂಬೈ ಮೂಲದವರಾಗಿದ್ದು, 2015ರಿಂದ ರೆಸಿಡೆನ್ಸಿ ರಸ್ತೆಯಲ್ಲಿರುವ “ತೋಪಾಲ್ಸ್’ ಬಾರ್‌ನಲ್ಲಿ ಬಾರ್‌ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪರಿಚಯವಾದ ಚಕ್ರಧಾರ ರೆಡ್ಡಿ ಜತೆ ಸ್ನೇಹ ಉಂಟಾಗಿದೆ, ಬಳಿಕ ಲಿವಿಂಗ್ ಟುಗೆದರ್‌ಸಂಬಂಧದಡಿ ಮುಂದುವರಿಯಲು ನಿರ್ಧರಿಸಿದ್ದಾರೆ.
ಕಸ್ತೂರಿನಗರದ ಚಕ್ರಾಧರ್ ಮನೆಯಲ್ಲಿ ಇಬ್ಬರೂ ಜತೆಯಲ್ಲಿ ವಾಸಿಸುತ್ತಿದ್ದರು. ಕೆಲ ತಿಂಗಳ ನಂತರ ಯುವತಿಯ ಸಹೋದರಿ, ತಾಯಿ ಹಾಗೂ ಪೋಷಕರು ಅದೇ ಮನೆಗೆ ಸೇರಿಕೊಂಡಿದ್ದರು. 2016ರ ಡಿಸೆಂಬರ್ ತಿಂಗಳಾಂತ್ಯದವರೆಗೂ ಎಲ್ಲರೂ ಒಟ್ಟಿಗೆ ಇದ್ದರು. ಒಂದೂವರೆ ವರ್ಷದ ಈ ಸಂಬಂಧದಲ್ಲಿ ಇಬ್ಬರ ನಡುವೆಯೂ ಲಕ್ಷಾಂತರ ರೂ. ಹಣದ ವ್ಯವಹಾರ, ವಿನಿಮಯ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಯುವತಿಗೆ ಮತ್ತೂಬ್ಬ ಬಾಯ್‌ಫ್ರೆಂಡ್: ಸಂತ್ರಸ್ಥ ಯುವತಿಯು ಸುರೇಶ್ ಎಂಬ ಮತ್ತೂಬ್ಬ ಯುವಕನ ಜತೆಯೂ ಪ್ರೀತಿ ಮುಂದುವರೆಸಿದ್ದಳು. ಈ ವಿಚಾರ ಚಕ್ರಾಧರರೆಡ್ಡಿಗೂ ಗೊತ್ತಿತ್ತು. ಅಲ್ಲದೆ ಇತ್ತೀಚೆಗೆ ಸುರೇಶ್ ಜತೆ ಮದುವೆಯಾಗಲು ಯುವತಿ ನಿರ್ಧರಿಸಿದ್ದಳು, ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದೆ, ಅಲ್ಲದೆ ವ್ಯವಹಾರಿಕ ನಷ್ಟ ಅನುಭವಿಸಿದ್ದ ಚಕ್ರಾಧರ ರೆಡ್ಡಿ ಸಂಕಷ್ಟಕ್ಕೆ ಸಿಲುಕಿದ್ದ. ಈ ಎಲ್ಲ ವಿಚಾರಗಳಿಂದ ಅಂತರ ಕಾಯ್ದುಕೊಂಡಿದ್ದ ಯುವತಿ ಡಿಸೆಂಬರ್ ತಿಂಗಳಿನಲ್ಲಿ ಸಂಬಂಧ ಮುರಿದುಕೊಂಡು, ಪ್ರತ್ಯೇಕವಾಗಿ ನೆಲೆಸಿದ್ದರು ಎಂದು ಚಕ್ರಾಧರ್ ವಿಚಾರಣೆ ವೇಳೆ ಗೊತ್ತಾಗಿದೆ.
ಪೊಲೀಸರಿಗೆ ದೂರು ನೀಡಿರುವ ಯುವತಿ, ಸುರೇಶ್ ಹಾಗೂ ನನ್ನ ಮಧ್ಯೆ ಸ್ನೇಹ ಮಾತ್ರ ಇತ್ತು. ಬೇರೆ ಸಂಬಂಧವಿರಲಿಲ್ಲ. ಚಕ್ರಾಧರ ರೆಡ್ಡಿ, 2016ರ ಫೆಬ್ರವರಿಯಲ್ಲಿ ಮೋಸದಿಂದ ವಂಚಿಸಿ ಅತ್ಯಾಚಾರ ಎಸಗಿದ್ದಾನೆ. ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ.
ಚಕ್ರಾಧರೆಡ್ಡಿ ಈ ಮೊದಲು ಒಂದು ವಿವಾಹವಾಗಿದ್ದು, ಪತ್ನಿ ಹಾಗೂ ಮಕ್ಕಳು ಪ್ರತ್ಯೇಕವಾಗಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.