ಎಡ-ಬಲ ಹೆಸರಲ್ಲಿ ದಾರಿ ತಪ್ಪಿಸುವ ಕೆಲಸ

Team Udayavani, Jan 13, 2018, 11:51 AM IST

eda-bala.jpg

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲೂ ಯುವ ಬರಹಗಾರರನ್ನು ಎಡ-ಬಲ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸವಾಗುತ್ತಿದ್ದು, ಪುಸ್ತಕ ಬರೆದ ಕೂಡಲೇ ಅದು ಇಂತವರು ಬರೆದ ಪುಸ್ತಕ ಓದಬೇಡಿ, ಇದು ಓದಿ ಎಂದು ಪ್ರಚಾರ ಮಾಡುವ ಪ್ರವೃತ್ತಿ ಆರಂಭವಾಗಿದೆ ಎಂದು ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಗುರುವಾರ ನಗರದ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನೃಪತುಂಗ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾಲಯದಲ್ಲಿ ಪದ್ಯ ಬರೆಯಲು ಬಳಸಬೇಕಾದ ಭಾಷೆ, ಛಂದಸ್ಸು, ವ್ಯಾಕರಣ ಹೇಳಿಕೊಡುವ ಬದಲು ಎಡ – ಬಲ ಕುರಿತು ಯುವ ಬರಹಗಾರರಿಗೆ ತಿಳಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಸಾಹಿತಿಗಳಾಗಬೇಕಾದರು ದಾರಿ ತಪ್ಪುತ್ತಿದ್ದಾರೆ ಎಂದರು.

ಸಾಹಿತ್ಯ ಸಮ್ಮೇಳನಗಳಲ್ಲಿಯೂ ಯುವಬರಹಗಾರರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ರಷ್ಯಾದಲ್ಲಿ ಪ್ರತಿಯೊಬ್ಬ ಕೆಲಸಗಾರನೂ ಕೆಲಸದೊಂದಿಗೆ ಸಿದ್ಧಾಂತರ ಪ್ರಚಾರ ಮಾಡುವ ಕೆಲಸ ಮಾಡಬೇಕು ಎಂಬುದು ಕಮ್ಯುನಿಸ್ಟ್‌ ಸಿದ್ಧಾಂತವಾಗಿತ್ತು. ಅದರಂತೆ ಸಾಹಿತ್ಯದ ಮೂಲಕ ಸಮಾಜ ಉದ್ಧಾರ ಮಾಡಬೇಕು, ಕ್ರಾಂತಿ ತರಬೇಕು. ಸಾಹಿತ್ಯದ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅವರು ಸಾಹಿತಿಗಳೇ ಅಲ್ಲ ಎಂಬ ಪ್ರವೃತ್ತಿ ಭಾರತಕ್ಕೂ ಆಮದಾಗಿದೆ ಎಂದರು.

ಅದರೆ, ಆರೋಗ್ಯ ಸರಿಯಿಲ್ಲದಿದ್ದರೆ ವೈದ್ಯರ್ಯ ಚಿಕಿತ್ಸೆ ನೀಡುತ್ತಾರೆ, ನೀರಿನ ಸಮಸ್ಯೆಯನ್ನು ಎಂಜಿನಿಯರ್‌ಗಳು ಪರಿಹರಿಸುತ್ತಾರೆ, ಉದ್ಯೋಗ ಸಮಸ್ಯೆಗೆ ಸರ್ಕಾರಗಳು ಕ್ರಮಕೈಗೊಳ್ಳುತ್ತವೆಯೇ ಹೊರತು, ಇವೆಲ್ಲದರ ಕುರಿತು ಕಾದಂಬರಿ ಬರೆಯುವುದರಿಂದ ಸಮಾಜ ಬದಲಾಗುವುದಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.

ಸಮ್ಮೇಳನಗಳಲ್ಲಿಯೂ ಎಡ-ಬಲ: ಇಂದು ಸಾಹಿತ್ಯ ಸಮ್ಮೇಳನ ಎಂದರೂ ಎಡ-ಬಲ ಎಂತಾಗಿದ್ದು, ಒಂದು ಪಕ್ಷವನ್ನು ಬೆಂಬಲಿಸುವ ಮತ್ತು ಮತ್ತೂಂದನ್ನು ವಿರೋಧಿಸುವ ಕಾರ್ಯಕ್ರಮದಂತಾಗಿದೆ.  ಈ ಎಲ್ಲ ಗೌಜು-ಗದ್ದಲಗಳ ನಡುವೆಯೂ ತನ್ನ ದಾರಿ ಯಾವುದು, ಏನು ಮಾಡಬೇಕೆಂದು ಆರಂಭದ ದೆಸೆಯಲ್ಲಿರುವ ಯುವ ಬರಹಗಾರರಿಗೆ ಗೊಂದಲವಾಗುತ್ತದೆ ಎಂದರು.

1999ರಲ್ಲಿ ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಉತ್ಕೃಷ್ಟವಾದ ನನ್ನ 28 ಪುಟಗಳ ಶುದ್ಧ ಸಾಹಿತ್ಯದ ಗುಣಲಕ್ಷಗಳ ಕುರಿತ ಅಧ್ಯಕ್ಷೀಯ ಭಾಷಣವನ್ನು ಮೊದಲು ಮೆಚ್ಚಿಕೊಂಡು, ನಂತರದಲ್ಲಿ ಅದನ್ನು ಸುಟ್ಟು ಪ್ರಚಾರ ಪಡೆದುಕೊಂಡಿದ್ದರು. ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಅದಕ್ಕೆ “ಬೆಂಕಿ ಹಾಕುವುದು ಅವರ ಮಾಧ್ಯಮ, ಬರೆಯುವುದು ನನ್ನ ಮಾಧ್ಯಮ’ ಎಂದು ಉತ್ತರ ನೀಡಿದ್ದೆ ಎಂದು ಸ್ಮರಿಸಿದರು.

ನಾನು ಶುದ್ಧ ಸಾಹಿತ್ಯದಲ್ಲಿ ನಂಬಿಕೆ ಇರಿಸಿದ್ದು, ಎಲ್ಲ ಕಲಾ ಪ್ರಕಾರಗಳ ಪೈಕಿ ಸಂಗೀತದಲ್ಲಿ ಅದರಲ್ಲಿಯೂ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಇಂದಿಗೂ ಶುದ್ಧ ಭಾವನೆ ಜೀವಂತವಾಗಿದೆ. ಅದೇ ಶುದ್ಧತೆಯ ರಸ ಸಾಹಿತ್ಯದಲ್ಲಿ ಬರುವಾಗ ಜೀವನದ ಬೇರೆ ಬೇರೆ ಸಮಸ್ಯೆಗಳು ಸೇರಿ ಪರಿಶುದ್ಧವಾಗುವುದಿಲ್ಲ. ಯುವಕರು ಆ ಪರಿಶುದ್ಧತೆ ಮಟ್ಟವನ್ನು ತಲುಪಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. 

ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಲೇಖಕರನ್ನು ಉತ್ತೇಜಿಸಲು ಸಾಹಿತ್ಯ ಸಮಾವೇಶಕ್ಕೆ 25 ಲಕ್ಷ ರೂ. ಹಾಗೂ ಕನ್ನಡ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು. 

ಕಾರ್ಯಕ್ರಮದಲ್ಲಿ ಯುವ ಸಾಹಿತಿಗಳಾದ ಎಸ್‌.ರಾಮಲಿಂಗೇಶ್ವರ, ಡಾ.ಸಿ.ನಂದಿನಿ, ಶಾಂತಿ ಕೆ.ಅಪಣ್ಣ, ಗುರಪ್ಪ ಗಾಣಿಗೇರ ಅವರಿಗೆ ತಲಾ 25 ಸಾವಿರ ರೂ. ನಗದು ಸಹಿತ “ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನೃಪತುಂಗ ಸಾಹಿತ್ಯ ಪ್ರಶಸ್ತಿಯು 7 ಲಕ್ಷದ ಒಂದು ರೂ. ನಗದು ಒಳಗೊಂಡಿದೆ. 

ಈ ವೇಳೆ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌, ಸಾಹಿತಿ ಪ್ರಧಾನ ಗುರುದತ್‌, ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌, ಉಪಾಧ್ಯಕ್ಷ ಗೋವಿಂದರಾಜು, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹಾಜರಿದ್ದರು.

ಸ್ವಾತಂತ್ರ್ಯ ಉಳಿಯುತ್ತದೆಯೇ?: ನಮ್ಮ ಪರಂಪರೆಯ ಪ್ರಕಾರ ಮನುಷ್ಯನ ಸಂವೇದನೆಯನ್ನು ಸೂಕ್ಷ್ಮಗೊಳಿಸುವುದು ಸಾಹಿತ್ಯದ ಕೆಲಸವಾಗಿದ್ದು, ನಮ್ಮ ಆಲೋಚನೆಗಳು, ಭಾವನೆಗಳಿಗೆ ಹೊಸದೊಂದು ಸ್ವರೂಪ ನೀಡುವುದು ಸಾಹಿತ್ಯ ಗುರಿಯಾಗಿದೆ. ಅದು ಬಿಟ್ಟು ಎಲ್ಲವನ್ನೂ ನಾನೇ ಮಾಡುತ್ತೇನೆ, ಮಹದಾಯಿ ವಿವಾದವನ್ನೂ ಪರಿಹರಿಸುತ್ತೇವೆ ಎಂಬುದಕ್ಕೆ ಸಾಹಿತಿಗಳು ಬಿದ್ದರೆ, ರಾಜಕಾರಣಿಗಳಿಂದ ಅದು, ಇದು ಉಪಯೋಗ ಪಡೆಯಬೇಕಾಗುತ್ತದೆ. ಹೀಗೆ ಮಾಡಿದರೆ ಸಾಹಿತಿಯ ಸ್ವಾತಂತ್ರ್ಯ ಉಳಿಯುತ್ತದೆಯೇ ಎಂದು ಭೈರಪ್ಪ ಪ್ರಶ್ನಿಸಿದರು. 

ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ ಎಂದು ಈ ಹಿಂದೆ  ಸಚಿವರಾಗಿದ್ದ ಬಸವಲಿಂಗಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಕನ್ನಡ ಸಾಹಿತ್ಯವೇ ಬೂಸಾ ಎಂದಿದ್ದಾರೆಂದು ಹೋರಾಟ ಮಾಡಿ ರಾಜೀನಾಮೆ ನೀಡುವಂತೆ ಮಾಡಿದ್ದೆವು. ಆ ತಪ್ಪು ಇಂದು ನಮಗೆ ಅರಿವಾಗಿದೆ,  ಕ್ಷಮೆಯಾಚಿಸುತ್ತೇನೆ. 
-ಎಚ್‌.ಎಂ.ರೇವಣ್ಣ, ಸಚಿವ

ಟಾಪ್ ನ್ಯೂಸ್

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.