ರಾತ್ರಿ ರಸ್ತೆ ಬದಿ ಯುವತಿಯ ಜತೆ ನಿಂತಿದ್ದವನಿಗೆ ಗೂಸ
Team Udayavani, Jan 6, 2017, 12:11 PM IST
ಬೆಂಗಳೂರು: ಪ್ರೇಯಸಿಯೊಂದಿಗೆ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಸ್ಥಳಕ್ಕೆ ಬಂದ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಪಿ. ಆನಂದ್, ಅವರ ಪುತ್ರ, ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹೆಣ್ಣೂರು ನಿವಾಸಿ ಗಿರಿ ಕೇಶವನ್‌ಎಂಬುವರು ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಎಚ್‌ಬಿಆರ್ ವಾರ್ಡ್‌ನ ಪಾಲಿಕೆ ಸದಸ್ಯ ಪಿ. ಆನಂದ್ ದೂರು ನೀಡಿದ್ದು, ಗಿರಿ ಕೇಶವನ್ ರಸ್ತೆ ಬಳಿ ನಿಂತು ಯುವತಿ ಜತೆ ಅಸಭ್ಯ ವರ್ತನೆ ಮಾಡಿದ್ದಲ್ಲದೆ ಅದನ್ನು ಪ್ರಶ್ನಿಸಿದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ತಾನು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಬುಧವಾರ ರಾತ್ರಿ 9.45ರ ಸುಮಾರಿಗೆ ಪ್ರೇಯಸಿಯನ್ನು ದ್ವಿಚಕ್ರ ವಾಹನದಲ್ಲಿ ಆಕೆಯ ಮನೆ ಬಳಿ ಡ್ರಾಪ್ ಮಾಡಿ ಮಾತನಾಡುತ್ತಾ ನಿಂತಿದ್ದೆ. ಕೆಲ ದೂರದಲ್ಲೇ ಪಾಲಿಕೆ ಸದಸ್ಯ ಆನಂದ್ ಮನೆ ಇದ್ದು, ತಾವಿಬ್ಬರು ಮಾತನಾಡುತ್ತಿರುವುದನ್ನು ನೋಡಿ ಬಳಿಗೆ ಬಂದ ಅವರು ರಾತ್ರಿ ಇಷ್ಟೊತ್ತಿನಲ್ಲಿ ರಸ್ತೆಯಲ್ಲಿ ನಿಲ್ಲುವುದು ಸರಿಯಲ್ಲ ಎಂದು ಹೇಳಿ, ಬೈಕ್‌ನ ಫೋಟೋ ತೆಗೆದುಕೊಳ್ಳಲು ಮುಂದಾದರು.
ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿ ಫೋಟೋ ತೆಗೆದುಕೊಳ್ಳದಂತೆ ತಡೆದೆ. ಬಳಿಕ ಪ್ರೇಯಸಿಯನ್ನು ಮನೆಗೆ ಕಳುಹಿಸಿದೆ. ಅಷ್ಟರಲ್ಲಿ ಆನಂದ್ ಅವರ ಪುತ್ರ ಮತ್ತು ನಾಲ್ವರು ಬೆಂಬಲಿಗರು ಬಂದು ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದರು. ನನ್ನ ಮೇಲೆ ಹಲ್ಲೆ ನಡೆಸಿದ ವೇಳೆ ಪಾಲಿಕೆ ಸದಸ್ಯ ಮದ್ಯ ಸೇವಿಸಿದ್ದರು ಎಂದು ಗಿರಿ ಕೇಶವನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
n 30 ನಿಮಿಷವಾದರೂ ಕದಲಲಿಲ್ಲ: ಇದಕ್ಕೆ ಪ್ರತಿಯಾಗಿ ಆನಂದ್ ಅವರು, ಗಿರಿ ಕೇಶವನ್ ವಿರುದ್ಧ ದೂರು ನೀಡಿದ್ದು, ಯುವಕ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಯುಕವ ಹೋದ ಮೇಲೆ ಯುವತಿಗೆ ಬುದ್ಧಿ ಹೇಳ್ಳೋಣವೆಂದು ಕಾದು ನಿಂತಿದೆ. 30 ನಿಮಿಷವಾದರೂ ಇಬ್ಬರು ಸ್ಥಳದಿಂದ ಕದಲಲಿಲ್ಲ. ಹೀಗಾಗಿ ನಾನೇ ಸ್ಥಳಕ್ಕೆ ಹೋಗಿ ಯುವಕನನ್ನು ಪ್ರಶ್ನಿಸಿ ಬೈಕ್‌ನ ಫೋಟೋ ತೆಗೆಯಲು ಮುಂದಾದಾಗ, ಆತ ನನ್ನನ್ನು ತಳ್ಳಿದ ಎಂದು ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.
ದೂರು ಪಡೆಯಲು ಪೊಲೀಸರು ಹಿಂದೇಟು
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನನ್ನ ಮಾತ್ರ ಠಾಣೆಗೆ ಕರೆದುಕೊಂಡು ಹೋದರು. ಪಾಲಿಕೆ ಸದಸ್ಯನನ್ನು ಠಾಣೆಗೆ ಕರೆ ತರಲಿಲ್ಲ. ಈ ಮೂಲಕ ಮದ್ಯ ಸೇವಿಸಿದ್ದ ಪಾಲಿಕೆ ಸದಸ್ಯನನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸದೆ ರಕ್ಷಿಸಿದ್ದಾರೆ. ಠಾಣೆಗೆ ಕರೆದೊಯ್ದ ವೇಳೆ ತಕ್ಷಣಕ್ಕೆ ನನ್ನಿಂದ ದೂರು ಪಡೆಯಲು ಹಿಂದೇಟು ಹಾಕಿದರು. ರಾತ್ರಿ 1.30ರ ಸುಮಾರಿಗೆ ನನ್ನಿಂದ ದೂರು ಪಡೆದರು.
-ಗಿರಿ ಕೇಶವನ್, ಹಲ್ಲೆಗೊಳಗಾದವ
ಜನರು ತಳ್ಳಾಡಿದರು,
ನಾನು ಹಲ್ಲೆ ನಡೆಸಿಲ್ಲ ಯುವಕ ರಸ್ತೆ ಬದಿಯಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆತ ಹೋದ ಮೇಲೆ ಯುವತಿಗೆ ಬುದ್ದಿ ಹೇಳ್ಳೋಣವೆಂದು 30 ನಿಮಿಷ ಕಾದರೂ ಅವರು ಕದಲಲಿಲ್ಲ. ಹೀಗಾಗಿ ನಾನೇ ಸ್ಥಳಕ್ಕೆ ಹೋಗಿ ಯುವಕನನ್ನು ಪ್ರಶ್ನಿಸಿ ಬೈಕ್‌ನ ಫೋಟೋ ತೆಗೆಯಲು ಮುಂದಾದಾಗ ಆತ ನನ್ನನ್ನು ತಳ್ಳಿದ. ಇದನ್ನು ನೋಡಿದ ಕೆಲ ಸಾರ್ವಜನಿಕರು ಪಾಲಿಕೆ ಸದಸ್ಯರ ಮೇಲೆ ಹಲ್ಲೆ ನಡೆಸುತ್ತೀಯಾ? ಎಂದು ಆತನನ್ನು ಹಿಡಿದುಕೊಂಡರು. ಈ ಸಂದರ್ಭದಲ್ಲಿ ಯವಕನಿಗೆ ಗಾಯವಾಗಿರಬಹುದು. ನಾನು ಹಲ್ಲೆ ನಡೆಸಿಲ್ಲ.
-ಪಿ.ಆನಂದ್, ಎಚ್‌ಬಿಆರ್ ವಾರ್ಡ್ ಪಾಲಿಕೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.