ಆಧಾರ್ ಮಾಹಿತಿ ಸೋರಿಕೆ: ಎಫ್ಐಆರ್
Team Udayavani, Jul 28, 2017, 10:56 AM IST
ಬೆಂಗಳೂರು: ಆ್ಯಪ್ ಮೂಲಕ ಆಧಾರ್ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಆರೋಪ ಸಂಬಂಧ “ಕ್ವಾರ್ತ್ ಟೆಕ್ನಾಲಜಿಸ್ ಪ್ರೈವೇಟ್ ಲಿ. ಕಂಪೆನಿಯ’ ಅಭಿನವ್ ಶ್ರೀವಾಸ್ತವ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಯುಐಡಿಎಐನ ಪ್ರಾದೇಶಿಕ ಕಚೇರಿ ಉಪನಿರ್ದೇಶಕ ಅಶೋಕ್ ಲೆನಿನ್ ಅವರು ಇಂದಿರಾನಗರದ “ಕ್ವಾರ್ಥ್ ಟೆಕ್ನಾಲಜೀಸ್’ ಮಾಲೀಕ ಅಭಿನವ್ ಶ್ರೀವಾಸ್ತವ್ ವಿರುದ್ಧ ದೂರು ನೀಡಿದ್ದಾರೆ. ಆಧಾರ್ ಪ್ರಾಧಿಕಾರವೂ ನಾಗರಿಕರ ನೋಂದಣಿಗೆ ವಿವಿಧ ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಿದೆ. ನಗರದ 12 ಏಜೆನ್ಸಿಗಳು ಗುತ್ತಿಗೆ ಪಡೆದಿವೆ. ಈ ಪೈಕಿ ಕ್ವಾರ್ತ್ ಟೆಕ್ನಾಲಜೀಸ್ ಕೂಡಾ ಒಂದು. ಇವರಿಗೆ ಆಧಾರ್ ವೆಬ್‌ಸೈಟ್ ಜತೆಗೆ ಪ್ರತ್ಯೇಕ “ಕೀ’ ನೀಡಲಾಗಿತ್ತು. ಇದನ್ನು ಅಭಿನವ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವಾರ್ತ್ ಸಂಸ್ಥೆಗೆ ಜನರ ಮಾಹಿತಿ ಅಪ್‌ಲೋಡ್‌ಗೆ ನೀಡಲಾಗಿದ್ದ ಗೌಪ್ಯ “ಕೀ’ ಅನ್ನು ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಆ್ಯಪ್ ಡವಲಪರ್ ಜತೆ ಹಂಚಿಕೊಂಡಿದ್ದಾರೆ. ಏಜೆನ್ಸಿಯು ಆ್ಯಂಡ್ರೋಯ್ಡ ಪ್ಲೇ ಸ್ಟೋರ್‌ನಲ್ಲಿ “ಇ-ಕೆವೈಸಿ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿತ್ತು. ಈ ಆ್ಯಪ್‌ಗೆ ಆಧಾರ್ ವೆಬ್‌ಸೈಟ್‌ನ್ನು ಲಿಂಕ್ ಮಾಡಲಾಗಿತ್ತು. ನಾಗರಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆಧಾರ್ ವೆಬ್‌ಸೈಟ್‌ನಿಂದ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಈ ಮೂಲಕ ಕಾನೂನು ಬಾಹಿರವಾಗಿ ಅಭಿನವ್ ಆಧಾರ್ ಮಾಹಿತಿಯನ್ನು ಸೋರಿಕೆ ಮಾಡುತಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಹೈಗೌಂಡ್ಸ್ ಠಾಣೆ ಪೊಲೀಸರು ದೂರು ನೀಡಿದ್ದಾರೆ. ಈಸಂಬಂಧ ಆಧಾರ್ ಕಾಯ್ದೆ ಕಲಂ 37 ಮತ್ತು 38ರ ಜತೆಗೆ 29(2)ರ “ಆರ್ಥಿಕ ಮತ್ತು ಇತರ ಸಬ್ಸಿಡಿ, ಪ್ರಯೋಜನ ಹಾಗೂ ಇತರ ಸೇವೆಗಳ’ ಉಲ್ಲಂಘನೆಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.