ಅನುಮಾನ ಮೂಡಿಸಿದ ಅಸಹಜ ಪ್ರಕ್ರಿಯೆ


Team Udayavani, Apr 17, 2019, 3:00 AM IST

anumana

ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅದರಂತೆ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಅಸಹಜವಾಗಿ ಮತದಾರರ ಹೆಸರು ಸೇರ್ಪಡೆ ಮತ್ತು ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆಯೋಗ ಪ್ರಕಟಿಸಿದ ಮತದಾರರ ಪಟ್ಟಿ ಪ್ರಕಾರ 2018ರ ಅಕ್ಟೋಬರ್‌ನಿಂದ 2019ರ ಜನವರಿವರೆಗೆ ಸುಮಾರು 99 ಸಾವಿರ ಮತದಾರರು ಸೇರ್ಪಡೆಯಾಗಿದ್ದರೆ, ಹೆಚ್ಚು-ಕಡಿಮೆ ಇದರ ದುಪ್ಪಟ್ಟು ಅಂದರೆ 1.76 ಲಕ್ಷ ಹೆಸರನ್ನು ನಾನಾ ಕಾರಣಗಳಿಗಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಅದೇ ರೀತಿ, 2019ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ 2.27 ಲಕ್ಷ ಮತದಾರರ ಹೆಸರು ಸೇರ್ಪಡೆಯಾಗಿದ್ದರೆ, ಕೇವಲ 26 ಸಾವಿರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮೇಲ್ನೋಟಕ್ಕೆ ಇದು ಸಮತೋಲನವಾಗಿ ಕಾಣದಿರುವುದು ಇಡೀ ಪ್ರಕ್ರಿಯೆ ಅನುಮಾನದಿಂದ ನೋಡುವಂತೆ ಮಾಡಿದೆ.

4,405 ಮತಗಟ್ಟೆಗಳ ತನಿಖೆಗೆ ಆಗ್ರಹ: ಚುನಾವಣಾ ಆಯೋಗದ ನಿಯಮದ ಪ್ರಕಾರ ಒಂದು ಮತಗಟ್ಟೆಯಲ್ಲಿ ಶೇ.2ಕ್ಕಿಂತ ಹೆಚ್ಚು ಹೆಸರು ತೆಗೆದುಹಾಕಿದರೆ (ಡಿಲೀಟ್‌ ಮಾಡಿದರೆ) ಅಥವಾ ಶೇ.4ಕ್ಕಿಂತ ಹೆಚ್ಚು ಮತದಾರರ ಸೇರ್ಪಡೆಯಾದರೆ ಅದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 8,514 ಮತಗಟ್ಟೆಗಳಿವೆ.

ಅದರಲ್ಲಿ 2,733 ಮತಗಟ್ಟೆಗಳಲ್ಲಿ ಶೇ.2ಕ್ಕಿಂತ ಹೆಚ್ಚು “ಡಿಲೀಷನ್‌’ಗಳು ಹಾಗೂ 2,557 ಮತಗಟ್ಟೆಗಳಲ್ಲಿ ಶೇ.4ಕ್ಕಿಂತ ಹೆಚ್ಚು ಮತದಾರರ ಹೆಸರು ಸೇರ್ಪಡೆ ಆಗಿದೆ. ವಿಚಿತ್ರವೆಂದರೆ ಒಂದು ನಿರ್ದಿಷ್ಟ ಬೂತ್‌ನಲ್ಲಿ ಗರಿಷ್ಠ ಶೇ.61.46ರಷ್ಟು ಡಿಲೀಷನ್‌ಗಳು ಹಾಗೂ ಒಂದು ನಿರ್ದಿಷ್ಟ ಬೂತ್‌ನಲ್ಲಿ ಗರಿಷ್ಠ ಶೇ.71.26ರಷ್ಟು ಸೇರ್ಪಡೆಯಾಗಿದೆ. ಹಾಗಾಗಿ, ಒಟ್ಟಾರೆ 4,405 ಮತಗಟ್ಟೆಗಳಲ್ಲಿ ತನಿಖೆಯ ಅವಶ್ಯಕತೆ ಇದೆ ಎಂದು ಚುನಾವಣಾ ವಿಶ್ಲೇಷಕ ವಿಂಗ್‌ ಕಮಾಂಡರ್‌ ಪಿ.ಜಿ.ಭಟ್‌ ಅಭಿಪ್ರಾಯಪಡುತ್ತಾರೆ.

“ಸಹಜವಾಗಿಯೇ ಮೊದಲ ಮೂರು ತಿಂಗಳ ಅವಧಿಯಲ್ಲಿ ನಾವು ನಕಲು, ಮೃತಪಟ್ಟವರು, ನಕಲಿ ಮತದಾರರ ಹೆಸರು ತೆಗೆದುಹಾಕುವುದಕ್ಕೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಂತರದಲ್ಲಿ ವಿಶೇಷ ಅಭಿಯಾನಗಳ ಫ‌ಲವಾಗಿ ಯುವ ಮತದಾರರು ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದಾರೆ.

ಅಸಹಜವಾಗಿ ಸೇರ್ಪಡೆ ಅಥವಾ ಡಿಲೀಷನ್‌ಗಳಾದಲ್ಲಿ ಅಧಿಕಾರಿಗಳು ವಿವಿಧ ಹಂತಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ, ಚುನಾವಣಾಧಿಕಾರಿ, ರೋಲಿಂಗ್‌ ಆಬ್ಸರ್ವರ್‌ಗಳು ಪರಿಶೀಲಿಸುತ್ತಾರೆ. ಕೊನೆಗೆ ನಾವು ಕೂಡ ತನಿಖೆ ಮಾಡುತ್ತೇವೆ’ ಎಂದು ವಿಶೇಷ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಇದು ಸರಿ ಅಲ್ಲ. ಇವೆರಡೂ ಪ್ರಕ್ರಿಯೆಗಳು ಸಮತೋಲನವಾಗಿ ನಡೆಯಬೇಕಾಗುತ್ತದೆ. ಹಾಗೂ ನಿರಂತರವಾಗಿ ಆಗಬೇಕು. ಚುನಾವಣೆ ಹೊಸ್ತಿಲಲ್ಲಿ ಇದ್ದಾಗ ಮಾತ್ರ ವಿಶೇಷ ಅಭಿಯಾನಗಳ ಮೂಲಕ ತರಾತುರಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಹಲವು ಎಡವಟ್ಟುಗಳು ಆಗುತ್ತಿವೆ. ಡಿಲೀಷನ್‌ ಮಾಡುವುದು ಒಳ್ಳೆಯದೇ. ಆದರೆ ಅರ್ಹರೂ ಆ ಪಟ್ಟಿಯಿಂದ ಕಳೆದುಹೋದರೆ, ಹಕ್ಕು ಕಿತ್ತುಕೊಂಡಂತಾಗುತ್ತದೆ ಎಂದೂ ಅವರು ಹೇಳುತ್ತಾರೆ.

721 ಕಡೆ 1,400ಕ್ಕಿಂತ ಹೆಚ್ಚು ಮತದಾರರು: ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 721 ಮತಗಟ್ಟೆಗಳಲ್ಲಿ ಆಯೋಗ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಮತದಾರರಿದ್ದಾರೆ. ಇದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ಪ್ರಕಾರ ಗ್ರಾಮೀಣ ಭಾಗದಲ್ಲಿ ಒಂದು ಮತಗಟ್ಟೆಯಲ್ಲಿ ಗರಿಷ್ಠ 1,200 ಹಾಗೂ ನಗರ ಪ್ರದೇಶಗಳಲ್ಲಿ ಒಂದು ಮತಗಟ್ಟೆಯಲ್ಲಿ ಗರಿಷ್ಠ 1,400 ಮತದಾರರು ಇರಬೇಕು. ಆದರೆ, ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಇರುವ 8,514 ಮತಗಟ್ಟೆಗಳ ಪೈಕಿ 721ರಲ್ಲಿ 1,400ಕ್ಕಿಂತ ಹೆಚ್ಚು ಮತದಾರರಿದ್ದಾರೆ.

“ಹೀಗೆ ಮತದಾರರು ಹೆಚ್ಚು ಇರುವ ಮತಗಟ್ಟೆಗಳಲ್ಲಿ ಸಹಜವಾಗಿ ಸರದಿ ಸಾಲು ಉದ್ದ ಇರುತ್ತದೆ. ಬೂತ್‌ಗೆ ಬರುವ ಮತದಾರರು “ಕ್ಯು’ ನೋಡಿ ವಾಪಸ್‌ ಹೋಗಬಹುದು. ಅಥವಾ ನಂತರ ಬಂದರಾಯ್ತು ಎಂದು ಹಿಂತಿರುಗುತ್ತಾರೆ. ಇದು ಮತದಾನ ಪ್ರಮಾಣ ಕಡಿಮೆ ಆಗುವುದಕ್ಕೆ ಕಾರಣವಾಗುತ್ತದೆ. ಈ ಹಿಂದೆ ನಡೆದ ಅಧ್ಯಯನಗಳೇ ಇದನ್ನು ಸಾಬೀತುಪಡಿಸಿವೆ’ ಎಂದೂ ಪಿ.ಜಿ.ಭಟ್‌ ತಿಳಿಸುತ್ತಾರೆ.

1400ಕ್ಕೂ ಅಧಿಕ ಮತದಾರರಿರುವ ಪ್ರಮುಖ 10 ಮತಗಟ್ಟೆಗಳ ವಿವರ
ಮತಗಟ್ಟೆ ಸಂಖ್ಯೆ ಮತಗಟ್ಟೆ ವಿಳಾಸ ಮತದಾರರು
-325 ತಿಮ್ಮರಾಯಸ್ವಾಮಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಆನೇಕಲ್‌ 1965
-303 ಬೆಂಗಳೂರು ಆಂಗ್ಲ ಪ್ರೌಢಶಾಲೆ, ಕೊಠಡಿ ಸಂಖ್ಯೆ-2, ನಾಗನಾಥಪುರ 1828
-195 ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-3, ಗರುಡಾಚಾರ್‌ಪಾಳ್ಯ 1,805
-297 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-1, ಸೆಂಟ್ರಲ್‌ ಜೈಲು 1,781
-434 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-1, ಹರಲೂರು 1,755
-248 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-1, ಯಲನಹಳ್ಳಿ 1,668
-250 ಸೆಂಟ್‌ ಥೆರೇಸಾ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-1, ಬೇಗೂರು 1,668
-370 ಯಶಸ್ವಿ ಅಂತರರಾಷ್ಟ್ರೀಯ ಶಾಲೆ, ಕೊಠಡಿ ಸಂಖ್ಯೆ-3, ತಲಘಟ್ಟಪುರ 1,665
-435 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-2, ಹರಲೂರು 1,656
-300 ಬೆಂಗಳೂರು ಆಂಗ್ಲ ಪ್ರೌಢಶಾಲೆ, ಕೊಠಡಿ ಸಂಖ್ಯೆ-1, ನಾಗನಾಥಪುರ 1,652

ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕಿದ ವಿವರ: 2018ರ ಅಕ್ಟೋಬರ್‌-2019ರ ಜನವರಿವರೆಗೆ
ಸೇರ್ಪಡೆ
-ಪುರುಷರು 48,604
-ಮಹಿಳೆಯರು 50,885
-ಒಟ್ಟಾರೆ 99,507

ಕೈಬಿಟ್ಟಿರುವುದು
-ಪುರುಷರು 92,699
-ಮಹಿಳೆಯರು 83,458
-ಒಟ್ಟಾರೆ 1,76,191

ಜನವರಿಯಿಂದ ಮಾರ್ಚ್‌ವರೆಗೆ
ಸೇರ್ಪಡೆ
-ಪುರುಷರು 1,13,921
-ಮಹಿಳೆಯರು 1,13,155
-ಒಟ್ಟಾರೆ 2,27,209

ಕೈಬಿಟ್ಟಿರುವುದು
-ಪುರುಷರು 14,033
-ಮಹಿಳೆಯರು 12,774
-ಒಟ್ಟಾರೆ 26,811

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.