ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ಎಬಿವಿಪಿ ಆಗ್ರಹ


Team Udayavani, Jun 10, 2018, 11:59 AM IST

harshil 1_1.jpg

ಬೆಂಗಳೂರು: ರಾಜ್ಯದ ಬಡ, ಪತ್ರಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವಂತೆ ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಶನಿವಾರ ಮಲ್ಲೇಶ್ವರದ 18ನೇ ಅಡ್ಡ ರಸ್ತೆಯ ಬಸ್‌ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ 2018-19ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈಗಿನ ಸರ್ಕಾರ  ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಿ, ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆ ಖಂಡಿಸಿ ಎವಿಬಿವಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರಸಕ್ತ ಸಾಲಿನಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ ಪಾಸ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಸರ್ಕಾರ ಅಂದಿನ ಅಂಕಿ-ಅಂಶಗಳ ಪ್ರಕಾರ 19.60ಲಕ್ಷ ವಿದ್ಯಾರ್ಥಿಗಳಿಗೆ 836.96 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಇಂದಿನ ಅಂಕಿ-ಅಂಶಗಳ ಪ್ರಕಾರ ಹೆಚ್ಚುವರಿಯಾಗಿ 629.32 ಕೋಟಿ ರೂ. ಬಿಡುಗಡೆಗೊಳಿಸಬೇಕಿದೆ.

ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು. ಹಣಕಾಸು ಇಲಾಖೆ ಅನುದಾನ ನೀಡಲು ನಿರಾಕರಿಸಿದೆ. ಹೀಗಾಗಿ ಉಚಿತ ಬಸ್‌ಪಾಸ್‌ ಸೌಲಭ್ಯ ಸ್ಥಗಿತಗೊಳಿಸಲಾಗಿದೆ ಎಂದು ಎಬಿವಿಪಿ ಬೆಂಗಳೂರು ಉತ್ತರ ವಿಭಾಗ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಆರೋಪಿಸಿದರು.

ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡುವಂತೆ ಆಗ್ರಹಿಸಿ ಸಾರಿಗೆ ಇಲಾಖೆ ಮತ್ತು ಅನುದಾನಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಜೆಟ್‌ ಘೋಷಣೆಯಂತೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಕಾರ್ಯಕರ್ತರಾದ ಸಚಿನ್‌, ಭುವನ್‌, ಸುಭಾಷ್‌, ಗಗನ್‌, ಪ್ರಸಾದ, ಮೋಹನ್‌, ಆದಿತ್ಯ, ಮರ್ಲಿಂಗ, ಅನುತಾ, ಹರ್ಷಿತಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

Jaya-Mrtuyunajay-swamiji

Reservation: ಚಳಿಗಾಲ ಅಧಿವೇಶನಕ್ಕೂ ಮುನ್ನ ಸರಕಾರ ನಿರ್ಧಾರ ಪ್ರಕಟಿಸಲಿ: ಜಯಮೃತ್ಯುಂಜಯ ಶ್ರೀ

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

14-bng

Namma Metro ಬಗ್ಗೆ ಸಿಎಜಿ ಆಡಿಟ್‌ ನಡೆಸಿ: ಸಂಸದ ತೇಜಸ್ವಿ

13-bng

Bengaluru: ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದು ಸಹೋದರರ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

Jaya-Mrtuyunajay-swamiji

Reservation: ಚಳಿಗಾಲ ಅಧಿವೇಶನಕ್ಕೂ ಮುನ್ನ ಸರಕಾರ ನಿರ್ಧಾರ ಪ್ರಕಟಿಸಲಿ: ಜಯಮೃತ್ಯುಂಜಯ ಶ್ರೀ

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-dcc

Udupi;ವಿಧಾನಪರಿಷತ್‌ ಉಪಚುನಾವಣೆ: ನಿಷೇಧಾಜ್ಞೆ ಜಾರಿ

man-a

Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.