ಇಂದಿನಿಂದ ಭಾರೀ ಸರಕು ವಾಹನಗಳ ನಗರ ಪ್ರವೇಶ ನಿಷೇಧ
Team Udayavani, Jan 5, 2017, 12:09 PM IST
ಬೆಂಗಳೂರು: ತುಮಕೂರು ರಸ್ತೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಜ.7ರಿಂದ ಮೂರು ದಿನಗಳ ಕಾಲ “ಪ್ರವಾಸಿ ಭಾರತೀಯ ದಿವಸ-2017′ ನಡೆಯುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರವೇಶಿಸುವ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
* ಗುರುವಾರ ಬೆಳಗ್ಗೆ 6 ಗಂಟೆಯಿಂದ ಜನವರಿ 10ರ ರಾತ್ರಿ 12 ಗಂಟೆ ವರೆಗೆ ಬೆಂಗಳೂರು- ತುಮಕೂರು ರಸ್ತೆ ಗೊರಗುಂಟೆಪಾಳ್ಯದಿಂದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ಹಾಗೂ ಯಶವಂತಪುರದಿಂದ ತುಮಕೂರು ಕಡೆಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹೊರತುಪಡಿಸಿ, ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
* ಹೆಬ್ಟಾಳ ಮಾರ್ಗವಾಗಿ ತುಮಕೂರು ಕಡೆಗೆ ತೆರಳುವ ಸರಕು ಸಾಗಣೆ ವಾಹನಗಳು ರಿಂಗ್‌ರಸ್ತೆಯಲ್ಲಿ ಗೊರಗುಂಟೆಪಾಳ್ಯ ಸಿಗ್ನಲ್‌ನಲ್ಲಿ ಸರ್ವೀಸ್ ರಸ್ತೆಗೆ ಬಲತಿರುವು ಪಡೆದು ಸಿಎಂಟಿಐ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ರಿಂಗ್ ರಸ್ತೆಯಲ್ಲಿ ಎಫ್ಟಿಐ, ಮೇಲ್ಸೇತುವೆ ಮೂಲಕ ಸುಮ್ಮನಹಳ್ಳಿ ಬಳಿ ಬಲತಿರುವು ಪಡೆದು ಮಾಗಡಿ ರಸ್ತೆಗೆ ತಲುಪಿ ನೈಸ್‌ರಸ್ತೆ ಜಂಕ್ಷನ್ ಮೂಲಕ ಸೊಂಡೆಕೊಪ್ಪ ಮಾರ್ಗವಾಗಿ ನೆಲಮಂಗಲ ತಲುಪಬಹುದು.
* ಯಶವಂತಪುರ ಕಡೆಯಿಂದ ತುಮಕೂರು ಕಡೆಗೆ ತೆರಳುವ ವಾಹನಗಳು ತುಮಕೂರು ಕಡೆಗೆ ಎಡಭಾಗದ ಸರ್ವೀಸ್ ರಸ್ತೆಯಲ್ಲಿ ಚಲಿಸಿ ಸಿಎಂಟಿಐ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ರಿಂಗ್‌ರಸ್ತೆಯಲ್ಲಿ ಎಫ್ಟಿಐ, ಮೇಲ್ಸೇತುವೆ ಮೂಲಕ ಸುಮ್ಮನಹಳ್ಳಿ ಬಳಿ ಬಲ ತಿರುವು ಪಡೆದು ಮಾಗಡಿ ರಸ್ತೆಯ ಮೂಲಕ ಸಂಚರಿಸಬಹುದು.
* ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮಾರ್ಗವಾಗಿ ರಿಂಗ್‌ರಸ್ತೆಯಲ್ಲಿ ಆರ್‌ಎಂಸಿ ಯಾರ್ಡ್ ಕಡೆಗೆ ತೆರಳುವ ವಾಹನಗಳು ರಿಂಗ್ ರಸ್ತೆ ಎಫ್ಟಿಐ ಸರ್ಕಲ್‌ನಲ್ಲಿ ಬಲತಿರುವು ಪಡೆದು ಕೃಷ್ಣಾನಂದನಗರ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಎಂಇಐ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಸರ್ವೀಸ್ ರಸ್ತೆಯಲ್ಲಿ ಆರ್‌ಎಂಸಿ ಯಾರ್ಡ್ ತಲುಪಬಹುದು.
* ಕೆ.ಆರ್. ಪುರ ಕಡೆಯಿಂದ ರಿಂಗ್ ರಸ್ತೆಯಲ್ಲಿ
ಬಂದು ತುಮಕೂರು ರಸ್ತೆ ತಲುಪುವ ವಾಹನಗಳು ಹೆಬ್ಟಾಳ ಮೇಲ್ಸೇತುವೆ ಕೆಳಭಾಗದಲ್ಲಿ ಬಲತಿರುವು ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪಾಪುರ, ಕೊಡಿಗೇಹಳ್ಳಿ, ಬ್ಯಾಟರಾಯನಪುರ ಮಾರ್ಗವಾಗಿ ಬೈಪಾಸ್ ಜಂಕ್ಷನ್ ಹಾಗೂ ಯಲಹಂಕ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆ ಮಾರ್ಗವಾಗಿ ಸಿಂಗನಾಯಕನಹಳ್ಳಿ ಮೂಲಕ ರಾಜಾನುಕುಂಟೆಯಿಂದ ಎಡತಿರುವು ಪಡೆದು ದೊಡ್ಡಬೆಳವಂಗಲ ಮುಖ್ಯರಸ್ತೆಗೆ ಪ್ರವೇಶಿಸಿ ನೇರವಾಗಿ ದಾಬಸ್‌ಪೇಟೆ ಅಥವಾ ನೆಲಮಂಗಲ ಕಡೆಗೆ ಸಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರವಾಸಿ ಭಾರತೀಯ ದಿವಸ್‌ಗೆ ನೋಟು ಅಮಾನ್ಯ “ಎಫೆಕ್ಟ್’
ಬೆಂಗಳೂರು: ರಾಜಧಾನಿಯಲ್ಲಿ ನಡೆಯಲಿ ರುವ ಮೂರು ದಿನಗಳ ಅಂತಾರಾಷ್ಟ್ರೀಯ ಪ್ರವಾಸಿ ದಿವಸ್ ಸಮ್ಮೇಳನಕ್ಕೂ ನೋಟು ಅಮಾನ್ಯ “ಎಫೆಕ್ಟ್’. ಹೌದು, ವಿಶ್ವಮಟ್ಟದ ಈ ಸಮ್ಮೇಳದಲ್ಲಿ ಭಾಗವಹಿಸುವ ವಿದೇಶಿ ಪ್ರತಿನಿಧಿಗಳಿಗೆ ಭಾರತದಲ್ಲಿ ನೋಟು ಅಮಾನ್ಯದ ಚಿಂತೆಯಾಗಿದ್ದು, ಇಲ್ಲಿ ಬಂದ ಮೇಲೆ ಸಮಸ್ಯೆಯಾಗಬಹುದೇ ಎಂಬ ಆತಂಕ ಕಾಡಿದೆ.
ಸಮ್ಮೇಳನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರತಿನಿಧಿಗಳು ಆಗಮಿಸುವುದರಿಂದ ಸಹಜವಾಗಿ ಇಂತದ್ದೊಂದು ಆತಂಕ ಎದುರಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ಬಳಿಯೂ ಹಲವರು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಪ್ರವಾಸಿ ದಿವಸ್ ಸಮ್ಮೇಳನದಲ್ಲಿ ಭಾಗವಹಿಸುವ ವಿದೇಶಿ ಗಣ್ಯರಿಗೆ ಕರೆನ್ಸಿ ಎಕ್ಸ್ ಚೇಂಜ್ ಮಾಡಿಕೊಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವಿನಿಮಯ ಕೇಂದ್ರಗಳನ್ನು ತೆರೆದು ಅಗತ್ಯ ಪ್ರಮಾಣದ ನೋಟು ಲಭ್ಯ ಇರುವಂತೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಈ ಬಗ್ಗೆ ಖುದ್ದು ಆಸಕ್ತಿ ವಹಿಸಿ ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ಚರ್ಚಿಸಿ ವಿಶೇಷ ವಿನಿಯಮ ಕೇಂದ್ರದ ವ್ಯವಸ್ಥೆಗೆ ಅನುಮತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐದು ವಿಶೇಷ ಹೆಲಿಕಾಪ್ಟರ್‌ಗಳ ವ್ಯವಸ್ಥೆ
ಈ ಮಧ್ಯೆ, ಪ್ರವಾಸಿ ದಿವಸ್ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವರು, 12 ಮುಖ್ಯಮಂತ್ರಿಗಳು ಬರುವ ಹಿನ್ನೆಲೆಯಲ್ಲಿ ಐದು ವಿಶೇಷ ಹೆಲಿಕಾಪ್ಟರ್‌ಗಳನ್ನು ಸಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಮ್ಮೇಳನ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿ ವಿದೇಶಿ ಗಣ್ಯರು ರಸ್ತೆ ಮೂಲಕ ಸಂಚರಿಸಿದರೆ ಸಂಚಾರ ದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.