ಸಿಮ್ ಕಾರ್ಡ್ ಕದ್ದು ಹಣ ದೋಚಿದವನ ಬಂಧನ
Team Udayavani, Aug 9, 2022, 2:16 PM IST
ಬೆಂಗಳೂರು: ಸಾರ್ವಜನಿಕರ ಸಿಮ್‌ಕಾರ್ಡ್ ಗಳನ್ನು ಕದ್ದು ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಕಾರು ಚಾಲಕ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಂಡ್ಯ ಜಿಲ್ಲೆ ದುದ್ದ ಹೋಬಳಿ ಗುನ್ನನಾಯಕಹಳ್ಳಿ ನಿವಾಸಿ ಪ್ರಕಾಶ್ (31) ಬಂಧಿತ. ಆರೋಪಿಯಿಂದ 1.30 ಲಕ್ಷ ರೂ. ನಗದು, 2 ಮೊಬೈಲ್‌ಗಳು, 1 ಬೈಕ್ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ದೂರುದಾರರ ವೃದ್ಧ ತಾಯಿಯ ಸಿಮ್ ಕಾರ್ಡ್ ಕದ್ದು ಮೇ 8ರಿಂದ ಮೇ 14ರ ಅವಧಿಯಲ್ಲಿ ಅವರ ಖಾತೆಯಿಂದ ತನ್ನ ಖಾತೆಗೆ 3.45 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದ. ಈ ಕುರಿತು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
“ಡ್ರೈವರ್ ವಿವ್ಯೂ’ ಆ್ಯಪ್‌ನಲ್ಲಿ ಕೆಲಸ, ವಂಚನೆ: ಮಂಡ್ಯ ಮೂಲದ ಆರೋಪಿ ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ಇದ್ದು, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ “ಡ್ರೈವರ್ ವ್ಯೂ’ ಎಂಬ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ಮೂಲಕ ತಾತ್ಕಾಲಿಕವಾಗಿ ದೂರುದಾರರ ಕಾರು ಚಾಲಕನಾಗಿ ಕಳೆದ ಮೇ ತಿಂಗಳಲ್ಲಿ ಹೋಗಿದ್ದ. ಈ ವೇಳೆ ದೂರುದಾರರ ವೃದ್ಧ ತಾಯಿ ನೆರೆ ಜಿಲ್ಲೆಗೆ ಹೋಗಿದ್ದರು. ಮಾರ್ಗ ಮಧ್ಯೆ ಹೋಟೆಲ್‌ಗೆ ಹೋದಾಗ ವೃದ್ಧೆ ತಮ್ಮ ಕಾರಿನಲ್ಲಿ ಮೊಬೈಲ್ ಬಿಟ್ಟು ಹೋಗಿದ್ದರು. ಆ ವೇಳೆ ಆರೋಪಿ ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದು ಬ್ಲಾಕ್ ಆಗಿರುವ ಏರ್‌ಟೆಲ್ ಸಿಮ್ ಕಾರ್ಡ್ ಹಾಕಿದ್ದಾನೆ. ಸಂಜೆ ವೇಳೆಗೆ ಪರಿಚಯಸ್ಥರಿಗೆ ಕರೆ ಮಾಡಲು ಹೋದಾಗ ಯಾವದೇ ಕರೆ ಹೋಗಿಲ್ಲ.
ಹೀಗಾಗಿ ಅವರ ಪುತ್ರನಿಗೆ ಮಾಹಿತಿ ನೀಡಿದಾಗ, ಅವರು ಒಂದೆರಡು ದಿನ ಮತ್ತೂಂದು ಮೊಬೈಲ್ ಬಳಸುವಂತೆ ಸೂಚಿಸಿ, ಮೇ 14ರಂದು ಸಿಮ್‌ಕಾರ್ಡ್ ಆಕ್ಟಿವೇಶನ್ ಮಾಡಿಸಿದಾಗ ಬ್ಯಾಂಕ್‌ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡ ಈಶಾನ್ಯ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ವೃದ್ಧೆಗೆ ಯುಪಿಐ ಬಳಸುವುದು ಗೊತ್ತಿಲ್ಲ. ಜತೆಗೆ ಯಾವುದೇ ಓಟಿಪಿಯಾಗಲಿ, ಆ್ಯಪ್ ಇನ್‌ಸ್ಟಾಲ್ ಕೂಡ ಮಾಡಿಲ್ಲ. ನೆಟ್ ಬ್ಯಾಂಕಿಂಗ್ ಸೇವೆ ಬಳಕೆ ಕೂಡ ತಿಳಿದಿಲ್ಲ ಎಂದೂ ಮಾಹಿತಿ ನೀಡಿದ್ದರು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಈಶಾನ್ಯ ವಿಭಾಗದ ಸೆನ್ ಠಾಣೆ ಇನ್‌ಸ್ಪೆಕ್ಟರ್ ಆರ್. ಸಂತೋಷ್ ರಾಮ್ ನೇತೃತ್ವದ ತಂಡ ವೃದ್ಧೆಯ ಮೊಬೈಲ್ ನಂಬರ್ ತಾಂತ್ರಿಕ ತನಿಖೆ ನಡೆಸಿದರು.
ಜತೆಗೆ ದೂರುದಾರರ ಜತೆ ಚರ್ಚಿಸಿದಾಗ ಇತ್ತೀಚೆಗೆ ಆರೋಪಿಯನ್ನು ತಾತ್ಕಾಲಿಕವಾಗಿ ಕಾರು ಚಾಲಕ ನಾಗಿ ನೇಮಿಸಿಕೊಂಡಿರುವ ವಿಚಾರ ಗೊತ್ತಾಗಿದೆ. ಬಳಿಕ ಆರೋಪಿಯ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕೆಲವೊಂದು ಮಾಹಿತಿ ಸಿಕ್ಕಿತ್ತು. ಬಳಿಕ ಸಾಕ್ಷ್ಯ ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಯುಪಿಐನಿಂದ ಹಣ ವರ್ಗಾವಣೆ : ಆರೋಪಿ ವೃದ್ಧೆಯ ಸಿಮ್ ಕಾರ್ಡ್ ಕಳವು ಮಾಡಿ, ಕೆಲ ಹೊತ್ತಿನಲ್ಲೇ ತನ್ನ ಮೊಬೈಲ್‌ಗೆ ಸಿಮ್‌ಕಾರ್ಡ್ ಹಾಕಿಕೊಂಡು, ಫೋನ್ ಪೇ, ಗೂಗಲ್ ಪೇ ಡೌನ್‌ಲೋಡ್ ಮಾಡಿಕೊಂಡು ಮೇ 8ರಿಂದ ಮೇ 14ರವರೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಈತನ ವಿಚಾರಣೆ ವೇಳೆ, ತನಗೆ ಮತ್ತ ತನ್ನ ತಾಯಿಗೆ ಅನಾರೋಗ್ಯ ಸಮಸ್ಯೆ ಇತ್ತು. ಜತೆಗೆ ತಾನು ಸಾಲ ಮಾಡಿಕೊಂಡಿದ್ದರಿಂದ ಈ ರೀತಿ ಕೃತ್ಯ ಎಸಗಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಸಲಹೆ :
- ನಿಮ್ಮ ಮೊಬೈಲ್ ಸಿಮ್‌ಕಾರ್ಡ್ ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿದ ಕೂಡಲೇ ಸಮೀಪದ ಸಿಮ್ ಸರ್ವಿಸ್ ಸೆಂಟರ್‌ಗೆ ಹೋಗಿ ಹೊಸ ಸಿಮ್ ಪಡೆಯಿರಿ.
- ನಿಮ್ಮ ಮೊಬೈಲ್ ಮತ್ತು ಅಪ್ಲಿಕೇಷನ್‌ಗಳು ಲಾಕ್ ಆಗಿದೆ, ಯಾರು ಏನೂ ಮಾಡುವುದಿಲ್ಲ ಎಂದು ಭಾವಿಸಿ, ಎಲ್ಲೆಂದರಲ್ಲಿ ಮೊಬೈಲ್ ಇಡಬೇಡಿ.
- ಮೊಬೈಲ್ ಅಥವಾ ಸಿಮ್‌ಕಾರ್ಡ್ ಕಳುವಾದ ಕೂಡಲೇ ಪೊಲೀಸರಿಗೆ ದೂರು ನೀಡಿ, ಜತೆಗೆ ಬ್ಯಾಂಕ್‌ಗೆ ಕರೆ ಮಾಡಿ ಖಾತೆ ಬ್ಲಾಕ್ ಮಾಡಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.