ಸೌಂಡ್ ವಿಷಯಕ್ಕೆ ಹತ್ಯೆ: ಮೂವರ ಸೆರೆ
Team Udayavani, Apr 8, 2023, 11:51 AM IST
ಬೆಂಗಳೂರು: ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಸಹೋದರರು ಸೇರಿದಂತೆ ಮೂವರು ಟೆಕಿಗಳು ಎಚ್ ಎಎಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉತ್ತರ ಭಾರತ ಮೂಲದ ವಿಜ್ಞಾನ ನಗರದ ನಿವಾಸಿಗಳಾದ ಬಾಸುದೇವ ಸಮಂತ್ ರಾಯ್, ಆತನ ಸಹೋದರ ಅಭಿ ಷೇಕ್ ಸಿಂಗ್ ಹಾಗೂ ಇವರ ಸ್ನೇಹಿತ ಅನಿರುದ್ಧ್ ಬಂಧಿತರು. ವೃದ್ಧ ಲೋಯಡ್ ನೇಮಯ್ಯ ಕೊಲೆಯಾದವರು. ಮೂವರು ಆರೋಪಿಗಳೂ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿ ನಿಯರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ನಗರದಲ್ಲಿ ನೇಮಯ್ಯ ಮನೆ ಪಕ್ಕ ಬಾಡಿಗೆ ಮನೆಯಲ್ಲಿ ಸಹೋದರರು ವಾಸಿಸುತ್ತಿದ್ದರು. ಕಳೆದ ವಾರಾಂತ್ಯದ ಹಿನ್ನೆಲೆ ಯಲ್ಲಿ ಏ.2ರಂದು ಮುಂಜಾನೆ 4.30ರಲ್ಲಿ ಅಣ್ಣ-ತಮ್ಮಂದಿರು ಅನಿರುದ್ಧ್ ಸೇರಿದಂತೆ ತಮ್ಮ ಸ್ನೇಹಿತರನ್ನು ಮನೆಗೆ ಕರೆದು ತಮ್ಮ ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಸೌಂಡ್ ಇಟ್ಟು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನೆರೆಮನೆಯ ಲೋಯಡ್ ನೇಮಯ್ಯ ನವರು ಮ್ಯೂಸಿಕ್ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಮಾತಿನ ಚಕ ಮಕಿ ನಡೆದಿದೆ.
ಜಗಳ ತಾರಕಕ್ಕೇರಿದಾಗ ಸಹೋದರರಿಬ್ಬರು ಲೋಯಡ್ ನೇಮಯ್ಯ ನನ್ನು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯ ಗೊಂಡಿದ್ದ ನೇಮಯ್ಯ ಅವರನ್ನು ಸ್ಥಳೀ ಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನೇಮಯ್ಯ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರೋಪಿ ಸಹೋದರರಿ ಬ್ಬರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಕೃತ್ಯ ಎಸಗಿದ್ದ ಅನಿರುದ್ಧ್ ಎಂಬಾತನನ್ನು ದೆಹಲಿಯಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.