ಮದ್ಯದ ಅಮಲಿನಲ್ಲಿ ಚರ್ಚ್ಗೆ ಹಾನಿಗೊಳಿಸಿದ ಯುವಕ ಸೆರೆ
Team Udayavani, Jun 22, 2023, 11:53 AM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಚರ್ಚ್ ಬಾಗಿಲು ಮುರಿದು ಒಳ ನುಗ್ಗಿದ ಯುವಕನೊಬ್ಬ ಅಲ್ಲಿದ್ದ ಕೆಲ ವಸ್ತುಗಳಿಗೆ ಹಾನಿ ಮಾಡಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ.
ಕೃತ್ಯವೆಸಗಿದ ಕಮ್ಮನಹಳ್ಳಿ ನಿವಾಸಿ ಟಾಮ್ ಮ್ಯಾಥ್ಯೂ(20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ನಸುಕಿನ 4.30ರ ಸುಮಾರಿಗೆ ಚರ್ಚ್ ಬಳಿ ಬಂದಿದ್ದ ಟಾಮ್ ಮ್ಯಾಥ್ಯೂ, ಸುತ್ತಿಗೆ ಬಳಸಿ ಚರ್ಚ್ನ ಮುಂಬಾಗಿಲು ಮುರಿದಿದ್ದಾನೆ. ಬಳಿಕ ಚರ್ಚ್ ಒಳಗಿರುವ ಕೆಲ ವಸ್ತುಗಳಿಗೆ ಹಾನಿ ಮಾಡಿದ್ದ. ಬಳಿಕ ಅಲ್ಲೆಯಿದ್ದ ಚರ್ಚ್ನ ಭದ್ರತಾ ಸಿಬ್ಬಂದಿ ಶಬ್ದ ಕೇಳಿ ಸ್ಥಳಕ್ಕೆ ಬಂದಿದ್ದಾರೆ. ಅವರ ಮೇಲೂ ಆತ ಜಗಳ ಮಾಡುತ್ತಿದ್ದ. ಬಳಿಕ ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಬಾಣಸವಾಡಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ನಂತರ ವಿಚಾರಣೆ ವೇಳೆ ಆರೋಪಿ ಮಾನಸಿಕವಾಗಿ ತೊಂದರೆಗೀಡಾಗಿದ್ದ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ಭೀಮಾಶಂಕರ್ ಗುಳೇದ್, ತನಿಖೆಯ ವೇಳೆ ಆರೋಪಿ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಿರಲಿಲ್ಲ. ಸಮೀಪದ ಶಾಲಾ ಕಾಲೇಜುಗಳಲ್ಲಿ ವಿಚಾರಿಸಿ ಆತನ ವಿಳಾಸ ಪತ್ತೆಹಚ್ಚಿ ಅವನ ತಾಯಿಯನ್ನು ಸಂಪರ್ಕಿಸಲಾಯಿತು. ಆರೋಪಿಯು ಸ್ಥಳೀಯನಾಗಿದ್ದು, ಇಪ್ಪತ್ತು ವರ್ಷಗಳಿಂದಲೂ ಅದೇ ಭಾಗದಲ್ಲಿ ನೆಲೆಸಿದ್ದ. ಆರೋಪಿ ತಾಯಿ ಅದೇ ಚರ್ಚ್ಗೆ ಪ್ರಾರ್ಥನೆಗೆ ಬರುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಆತನ ತಂದೆ ಮೃತಪಟ್ಟಿದ್ದರು. ಆ ಬಳಿಕ ಆರೋಪಿ ನೊಂದಿದ್ದ ಟಾಮ್ ಮ್ಯಾಥ್ಯೂ, ತಾನೇ ದೇವರು ಎಂದು ಹೇಳುತ್ತಿದ್ದ . ಜತೆಗೆ ಆತನ ಮನೆಯ ಕೋಣೆ ಪರಿಶೀಲಿಸಿದಾಗ ಮದ್ಯ ವ್ಯಸನಿಯಾಗಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.