![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 27, 2022, 11:59 AM IST
ಬೆಂಗಳೂರು: ಬಾಡಿಗೆಗೆ ಕಾರು ಬುಕ್ ಮಾಡಿ ಚಾಲಕನಿಗೆ ಕಂಠಮಟ್ಟ ಮದ್ಯಪಾನ ಮಾಡಿಸಿ ಕಾರಿನೊಂದಿಗೆ ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ನಿವಾಸಿ ಮಂಜುನಾಥ್ (27), ಆತನ ಪತ್ನಿ ವೇದಾವತಿ (25) ಬಂಧಿತರು. ಬಂಧಿತರಿಂದ ಇಟಿಯೋಸ್ ಕಾರು, 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಂಪತಿ ಕದ್ದ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಇವರು ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಉಳಿದುಕೊಳ್ಳಲು ಮನೆ ಇರಲಿಲ್ಲ. ಹೀಗಾಗಿ ಕದ್ದ ಕಾರಿನಲ್ಲಿ ನಗರಾದ್ಯಂತ ಸುತ್ತಾಡುತಾ. ರಾತ್ರಿ ಹೊತ್ತು ಅದರಲ್ಲೇ ಮಲಗುತ್ತಿದ್ದರು ಎಂದು ತಿಳಿದು ಬಂದಿದೆ.
ಏನಿದು ಘಟನೆ?: ಸೆ.5ರಂದು ರಾತ್ರಿ 10.30ಕ್ಕೆ ಕ್ಯಾಬ್ ಚಾಲಕ ಶಿವಶಂಕರ್ ತಮ್ಮ ಟೊಯೋಟಾ ಇಟಿಯೋಸ್ ಕಾರನ್ನು ಯಲಹಂಕ ಉಪನಗರದ ನಾಗನಹಳ್ಳಿ ಗೇಟ್ ಬಳಿ ನಿಲ್ಲಿಸಿಕೊಂಡಿದ್ದರು. ಆ ವೇಳೆ ಇವರ ಓಲಾ ಬುಕ್ ಮಾಡಿದ್ದ ಆರೋಪಿಗಳು ನಗರದಲ್ಲಿ ಸುತ್ತಾಡಿಸುವಂತೆ ಹೇಳಿ ಮುಂಗಡ ಹಣ ನೀಡಿ ತಾವು ಸಭ್ಯರೆಂಬಂತೆ ನಟಿಸಿದ್ದರು. ನಗರ ಸುತ್ತಿ ಬಂದ ನಂತರ ತಡರಾತ್ರಿ ಚಾಲಕನನ್ನು ಬಾರ್‌ವೊಂದಕ್ಕೆ ಕರೆದೊಯ್ದು ಕಂಠಮಟ್ಟ ಮದ್ಯಪಾನ ಮಾಡಿಸಿದ್ದರು. ಕುಡಿದ ನಶೆಯಲ್ಲಿದ್ದ ಶಿವಶಂಕರ್‌ಗೆ ಕಾರು ಚಲಾಯಿಸಲು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ ಮಂಜುನಾಥ್ ಚಾಲಕನ ಜೇಬಿನಿಂದ ಕಾರಿನ ಕೀ ತೆಗೆದುಕೊಂಡು ಆತನನ್ನು ಹಿಂದಿನ ಸೀಟಿನಲ್ಲಿ ಕೂರಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದ. ಕೊಲುವರಾಯನಹಳ್ಳಿ ಬಳಿ ಆರೋಪಿ ದಂಪತಿ ಚಾಲಕ ಶಿವಶಂಕರ್‌ನನ್ನು ಹೊರಗೆ ತಳ್ಳಿ ಕಾರು ಸಮೇತ ಪರಾರಿಯಾಗಿದ್ದರು.
ಆರೋಪಿಗಳ ಸೆರೆ: ಇತ್ತ ಮಧ್ಯರಾತ್ರಿ ರಸ್ತೆಮಧ್ಯೆ ಏನು ಮಾಡಬೇಕೆಂದು ತೋಚದೇ ಶಿವಶಂಕರ್ ಒದ್ದಾಡುತ್ತಿದ್ದ. ನಂತರ ಸ್ನೇಹಿತರ ಸೂಚನೆ ಮೇರೆಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಇತ್ತ ಪ್ರಕರಣ ದಾಖಲಿಕೊಂಡ ಪೊಲೀಸರು ಕಾರಿನ ನಂಬರ್ ಹಾಗೂ ಇನ್ನಿತರ ದಾಖಲೆಗಳನ್ನು ಪಡೆದು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು. ಬೆಂಗಳೂರು ಹೊರ ವಲಯದಲ್ಲಿ ಆರೋಪಿಗಳು ಕಾರಿನಲ್ಲಿ ಸುತ್ತಾಡುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ವಿರುದ್ಧ 16 ಪ್ರಕರಣ : ಕಾರು ಪಡೆದು ಪರಾರಿಯಾಗಿದ್ದ ಆರೋಪಿ ಮಂಜುನಾಥ್ ವಿರುದ್ಧ 1 ಕೊಲೆ, 4 ಕೊಲೆಯತ್ನ, ರಾಬರಿ, ಕಳವು, ಸುಲಿಗೆ ಸೇರಿ 16 ಅಪರಾಧ ಪ್ರಕರಣಗಳು ದಾಖಲಾಗಿವೆ. ಕಾರಿನಲ್ಲಿ ನಗರಾದ್ಯಂತ ಸುತ್ತಾಡುತಾ. ರಾತ್ರಿ ಹೊತ್ತು ಅದರಲ್ಲೇ ಮಲಗುತ್ತಿದ್ದರು ಎಂದು ತಿಳಿದು ಬಂದಿದೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.