Bengaluru: ಖಾಕಿ ಕಣ್ತಪ್ಪಿಸಲು ತಾರಸಿಯಿಂದ ಜಿಗಿದ ಕೊಲೆ ಆರೋಪಿ ಸಾವು
Team Udayavani, Aug 8, 2024, 10:48 AM IST
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತ್ನಿಯನ್ನು ಭೀಕರವಾಗಿ ಕೊಲೆಗೈದು ಕೋಲಾರದ ತನ್ನ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಪತಿಯೊಬ್ಬ ಬಂಧನ ಭೀತಿಯಿಂದ ಮನೆಯ 12 ಅಡಿ ಎತ್ತರದ ಟೆರೆಸ್‌ನಿಂದ ಜಿಗಿದು ಮೃತಪಟ್ಟಿದ್ದಾನೆ.
ಬೆಂಗಳೂರಿನ ಸಿದ್ದಾ ಪುರದ ಸೋಮೇಶ್ವರ ನಗರ ನಿವಾಸಿ ತಬ್ರೇಜ್ ಪಾಷಾ(37) ಮೃತ ಆರೋಪಿ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ತಬ್ರೇಜ್ ಪಾಷಾ, ಆ.2ರಂದು ಚಾಮರಾಜಪೇಟೆಯ ತನ್ನ ತವರು ಮನೆಯಲ್ಲಿದ್ದ ಪತ್ನಿ ಸೈಯಿದಾ ಫಾಜೀಯಾ ಫಾತೀಮಾ(34) ಅವರನ್ನು ಚಾಕುವಿನಿಂದ ಹತ್ತಾರು ಬಾರಿ ಇರಿದು ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಕೃತ್ಯ ಎಸಗಿದ ಬಳಿಕ ಆರೋಪಿ ತಬ್ರೇಜ್ ಪಾಷಾ, ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ. ಇತ್ತ ಚಾಮರಾಜಪೇಟೆ ಪೊಲೀಸರು ಆತನ ಪತ್ತೆಗಾಗಿ ಕೋಲಾರದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಆರೋಪಿ ಕೋಲಾರದ ಹೊರವಲಯದಲ್ಲಿರುವ ದರ್ಗಾದಲ್ಲಿ ಆಶ್ರಯ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿ, ಪೊಲೀಸರು ಹೋಗುವಷ್ಟರಲ್ಲಿ ಸಮೀಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ಅಡಗಿಕೊಂಡಿದ್ದ. ಬಳಿಕ ಪೊಲೀಸರು, ಆತನ ಚಿಕ್ಕಮ್ಮನ ಮನೆ ಬಳಿ ತೆರಳಿದ್ದರು. ಈ ವಿಚಾರ ತಿಳಿದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಮನೆಯ ಟೆರೆಸ್ ಮೇಲೆ ಏರಿ 12 ಅಡಿ ಎತ್ತರದಿಂದ ಜಿಗಿದಿದ್ದು, ಕೆಳಗೆ ಬಿದ್ದ ಆತ ತೀವ್ರ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಅಲ್ಲಿಂದ ವರದಿ ಬಂದ ನಂತರ ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬರಲಿದೆ ಎಂದು ಚಾಮರಾಜಪೇಟೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆಲ್ಫಿ ವಿಡಿಯೋ ಮಾಡಿರುವ ಆರೋಪಿ!:
ಈ ನಡುವೆ ತಬ್ರೇಜ್ ಪಾಷಾ, 7 ನಿಮಿಷಗಳ ಸೆಲ್ಫಿà ವಿಡಿಯೋವೊಂದು ಮಾಡಿ ಹರಿಬಿಟ್ಟಿ ದ್ದಾನೆ. ಅದರಲ್ಲಿ ಸೈಯಿದಾ ಫಾಜೀಯಾ ಫಾತೀಮಾಳನ್ನು ಪ್ರೀತಿಸಿ ಮದುವೆಯಾಗಿದ್ದೆ. ಅದಕ್ಕೆ ನಮ್ಮ ತಂದೆ ವಿರೋಧ ಇತ್ತು. ಆದರೂ ಅವರಿಗೆ ಒಪ್ಪಿಸಿ ಮದುವೆ ಮಾಡಿಕೊಂಡೆ. ಆದರೆ, ಪತ್ನಿ ಮತ್ತು ಆಕೆಯ ಮನೆಯವರು ನನಗೆ ಸಾಕಷ್ಟು ಅವಮಾನ ಮಾಡಿದರು. ಪತ್ನಿ ಕೂಡ ನನ್ನ ಬಿಟ್ಟು ತವರು ಮನೆ ಸೇರಿಕೊಂಡಳು. ಆದರೂ ಆಕೆಗೆ ವಾಪಸ್ ಮನೆಗೆ ಬರುವಂತೆ ಕೇಳಿಕೊಂಡೆ, ಆದರೆ, ಆಕೆ ಬರಲಿಲ್ಲ. ಮನೆಯ ಲ್ಲಿದ್ದ ಚಿನ್ನಾಭರಣವನ್ನು ಆಕೆ ಕೊಂಡೊ ಯ್ದಿದ್ದಾಳೆ. ನಾನು ಮಾಡುತ್ತಿರುವುದು ತಪ್ಪು ಎಂಬುದು ಗೊತ್ತು. ಬದುಕಲು ನನಗೂ ಇಷ್ಟವಿಲ್ಲ ಎಂದು ಹೇಳಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ ತಬ್ರೇಜ್ ಪಾಷಾ, ಆತ್ಮಹತ್ಯೆಗೂ ಮೊದಲು ಈ ವಿಡಿಯೋ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಯು ತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.