Bangalore: ಆಸಿಡ್ ದಾಳಿ ಬೆದರಿಕೆ; ವ್ಯಕ್ತಿ ವಿರುದ್ಧ ಮಹಿಳೆ ದೂರು
Team Udayavani, Feb 24, 2024, 11:37 AM IST
ಬೆಂಗಳೂರು: ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ ಆರೋಪದಡಿ ವ್ಯಕ್ತಿಯೊ ಬ್ಬರ ಮೇಲೆ ಮಹಿಳೆ ದೂರು ನೀಡಿದ್ದರೆ, ನಿರೀ ಕ್ಷಣಾ ಜಾಮೀನು ಪಡೆದು ಆಕೆಯನ್ನು ತನ್ನ ಮಾಜಿ ಪ್ರೇಯಸಿ ಎಂದಿರುವ ವ್ಯಕ್ತಿ ನೀಡಿದ ದೂರಿನ ಮೇರೆಗೆ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿರುವ ವಿಚಿತ್ರ ಪ್ರಸಂಗ ನಡೆದಿದೆ.
ತನ್ನೊಂದಿಗೆ ಬಾರದಿದ್ದರೆ ಆ್ಯಸಿಡ್ ದಾಳಿ ಮಾಡುವುದಾಗಿ ಕುಮಾರಸ್ವಾಮಿ (24) ಎಂಬಾತ ಪೀಡಿಸುತ್ತಿರುವುದಾಗಿ 22 ವರ್ಷದ ಮಹಿಳೆಯು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ತನಗೆ ಪರಿಚಯವಿದ್ದ ಕುಮಾರಸ್ವಾಮಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ, ನಾನು ಸುಮಂತ್ ಎಂಬಾತನನ್ನು 2-3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ನಾನು ಕೆಲಸಕ್ಕೆ ಹೋಗುವಾಗಲ್ಲೆಲ್ಲಾ ಅಡ್ಡಗಟ್ಟುತ್ತಿದ್ದ ಕುಮಾರಸ್ವಾಮಿ, ತನ್ನನ್ನು ಪ್ರೀತಿಸದಿದ್ದರೆ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೆ. 3ರಂದು ಚಂದ್ರಲೇಔಟ್‌ನಲ್ಲಿರುವ ನನ್ನ ಮನೆಗೂ ಬಂದು “ನಿನಗೆ ನಾನೆ ಗತೀ, ನನ್ನ ಜತೆ ಬಾ’ ಎಂದು ನನ್ನ ಮೈ ಕೈ ಮುಟ್ಟಿ ಎಳೆದಾಡಿದ್ದ. ಅದೇ ಸಂದರ್ಭದಲ್ಲಿ ನಮ್ಮ ತಾಯಿ ಬಂದಿದ್ದು,’ಇವತ್ತು ನೀನು ಮಿಸ್ ಆಗಿದ್ದೀಯಾ, ನಿನ್ನ ಮೇಲೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎಂದು ಹೇಳಲಾಗಿದೆ.
ದೂರುದಾರ ಮಹಿಳೆ ಪತಿ ಬಂಧನ: ಮತ್ತೂಂ ದೆಡೆ ಆರೋಪಿ ಕುಮಾರಸ್ವಾಮಿ, ದೂರುದಾರ ಮಹಿಳೆಯ ಪತಿ ಸುಮಂತ್ ವಿರುದ್ಧ ಹಲ್ಲೆ ಆರೋಪದಡಿ ಜ.29ರಂದು ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಮಂತ್‌ನನ್ನು ಬಂಧಿಸಲಾಗಿದೆ. ದೂರುದಾರ ಕುಮಾರ ಸ್ವಾಮಿ, ಟಾಟಾ ಏಸ್ ವಾಹನ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ. ನನಗೆ 2020ರಲ್ಲಿ ಹೊಸಕೆರೆಹಳ್ಳಿಯಲ್ಲಿರುವ ಆಕೆಯ ಅಕ್ಕನ ಮನೆಗೆ ಬರುತ್ತಿದ್ದಾಗ ದೂರುದಾರಳ ಪರಿಚಯವಾಗಿ, ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ, ನಂತರದ ದಿನಗಳಲ್ಲಿ ಮನಸ್ತಾಪ ಉಂಟಾಗಿದ್ದ ರಿಂದ ತಾನು ಅಂತರ ಕಾಯ್ದುಕೊಂಡಿ¨ªೆ. ಜ.29 ರಂದು ಗಿರಿನಗರ ಬೇಕರಿಯೊಂದರ ಬಳಿ ನಿಂತಿ ದ್ದಾಗ ಸ್ಥಳಕ್ಕೆ ಬಂದ ಸುಮಂತ್ ಹಾಗೂ ಇತರೆ ಆರೋಪಿಗಳು ಹಲ್ಲೆ ನಡೆಸಿದ್ದರೆಂದು ದೂರಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.