Arrested: ನಟ ದರ್ಶನ್ ಕೈದಿ ನಂಬರ್ ಹಾಕಿಕೊಂಡು ವ್ಹೀಲಿಂಗ್ ಮಾಡಿದ ಆಟೋ ಚಾಲಕ ಸೆರೆ
Team Udayavani, Jul 11, 2024, 12:16 PM IST
ಬೆಂಗಳೂರು: ಅತೀರೇಕದ ವರ್ತನೆಯಿಂದ ನಟ ದರ್ಶನ್ ಅಭಿಮಾನಿಗಳು ಸುದ್ದಿ ಆಗುತ್ತಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ಗೆ 6106 ಕೈದಿ ಸಂಖ್ಯೆ ನೀಡಲಾಗಿದ್ದು, ಈ ನಂಬರ್ನ ಸ್ಟಿಕ್ಕರ್ ಅನ್ನು ತಮ್ಮ ವಾಹನಗಳ ಮೇಲೆ ಅಂಟಿಸಿಕೊಂಡು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.
ಇದೇ ರೀತಿ ನಗರದಲ್ಲಿ ಆಟೋ ಚಾಲಕನೊಬ್ಬ ಈ ಸಂಖ್ಯೆಯ ಸ್ಟಿಕ್ಕರ್ ಹಾಕಿಸಿಕೊಂಡಿದಲ್ಲದೇ, ಅಪಾಯ ಕಾರಿಯಾಗಿ ಆಟೋ ವ್ಹೀಲಿಂಗ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಬನ್ನೇರುಘಟ್ಟ ನಿವಾಸಿ ಜಗದೀಶ್ ಅಲಿಯಾಸ್ ಜಗ್ಗು(29) ಬಂಧಿತ.
ಆರೋಪಿ ತನ್ನ ಆಟೋ ಹಿಂಭಾಗದಲ್ಲಿ ಕೈದಿ ನಂಬರ್ 6106 ಸ್ಟಿಕ್ಕರ್ ಅಂಟಿಸಿಕೊಂಡಿದ್ದಾನೆ. ಅಲ್ಲದೆ, ಇತ್ತೀಚೆಗೆ ಲೂಲು ಮಾಲ್ ಸಮೀಪದ ಅಂಡರ್ಪಾಸ್ನಲ್ಲಿ ಅಪಾಯ ಕಾರಿ ವ್ಹೀಲಿಂಗ್ ಮಾಡಿದ್ದ. ಅದರಿಂದ ಇತರೆ ವಾಹನ ಸವಾರರಿಗೆ ತುಂಬ ತೊಂದರೆ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಆಟೋ ಸಂಖ್ಯೆ ಆಧರಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆಟೋ ಜಪ್ತಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.