ಡ್ರಗ್ಸ್ ಕೇಸ್: ಕಣ್ಣೀರಿಟ್ಟ ನಟ ತನೀಶ್
Team Udayavani, Mar 26, 2021, 12:14 PM IST
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರ ಗ್ಸ್ ಪ್ರಕರಣದ ವಿಚಾರಣೆ ವೇಳೆ ತೆಲುಗು ನಟ ತನೀಶ್ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ವಿಚಾ ರ ಣೆಗೆ ಹಾಜರಾಗಿದ್ದ ನಟ ತನೀಶ್, ವಿಚಾರಣೆ ಸಂದರ್ಭದಲ್ಲಿ “ಡ್ರಗ್ಸ್ ಸೇವಿ ಸ ಲು ನಿರ್ಮಾ ಪಕ ಶಂಕರ್ ಗೌಡ ಆಯೋಜಿಸುತ್ತಿದ್ದ ಪಾರ್ಟಿಗೆ ಹೋಗು ತ್ತಿ ರ ಲಿಲ್ಲ. ಅಲ್ಲದೆ, ತಾವು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡುತ್ತಿದ್ದಂತೆ ನನ್ನ ಹೊಸ ಸಿನಿಮಾ ಪ್ರಾಜೆಕ್ಟ್ ರದಾಗಿದೆ . ಮಾ. 14ಕ್ಕೆ ನನ್ನ ಹೊಸ ಸಿನಿಮಾಗೆ ಸಹಿ ಮಾಡಬೇಕಿತ್ತು’ ಎಂದು ಪೊಲೀಸರ ಮುಂದೆ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ ಎನ್ನಲಾಗಿದೆ. “ನೀವು ನನಗೆ ನೋಟಿಸ್ ಕೊಡುತ್ತಿದ್ದಂತೆ ನನ್ನ ಕೈಯಲ್ಲಿರುವ ಸಿನಿಮಾಗಳಿಂದ ನನ್ನನ್ನು ನಿರ್ಮಾಪಕರು, ನಿರ್ದೇಶಕರು ಕೈಬಿಟ್ಟಿದ್ದಾರೆ.
ದಯಮಾಡಿ ನನ್ನನ್ನ ಮತ್ತೆ ಕರಿಯಬೇಡಿ. ಏನಿದ್ದರೂ ಎಲ್ಲವನ್ನು ಈಗಲೇ ಕೇಳಿ ಮುಗಿಸಿ’ ಎಂದು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಮುಂದೆ ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ. “ತೆಲುಗು ಸಿನಿಮಾಗಳನ್ನು ಶಂಕರ್ ಗೌಡ ವಿತರಣೆ ಮಾಡುತ್ತಿದ್ದ ಸಮಯದಲ್ಲಿ, ಹೈದರಾಬಾದ್‌ನಲ್ಲಿ ಮೊದಲ ಬಾರಿ ಅವರ ಪರಿಚಯವಾಯಿತು. ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ. ನಿನಗೆ ಅವಕಾಶ ಕೊಡುತ್ತೇನೆ ಎಂದು ಶಂಕರ್‌ಗೌಡ ಪರಿಚಯ ಮಾಡಿಕೊಂಡಿದ್ದರು. ಸಿನಿಮಾದಲ್ಲಿ ಅವಕಾಶ ಸಿಗಬಹುದು ಅಂತ ಅವರ ಜತೆ ಸಂಪರ್ಕ ಹೊಂದಿದ್ದೆ. ಅವರ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಒಮ್ಮೆ ಮಾತ್ರ ಭಾಗವಹಿಸಿದ್ದೆ’ ಎಂದು ತನೀಶ್ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಮೂಲ ಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.