30 ರಿಂದ ಅದಮ್ಯ ಚೇತನ ಸೇವಾ ಉತ್ಸವ


Team Udayavani, Dec 28, 2017, 11:50 AM IST

blore-4.jpg

ಬೆಂಗಳೂರು: ಅದಮ್ಯ ಚೇತನ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಡಿ.30ರಿಂದ ನಾಲ್ಕು ದಿನಗಳ
“ಅದಮ್ಯ ಚೇತನ ಸೇವಾ ಉತ್ಸವ-2018′ ಆಯೋಜಿಸಿದ್ದು, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಂಸ್ಥೆಯ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತ್‌ಕುಮಾರ್‌ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಡಿ.30ರಿಂದ ಜ.2ರವರೆಗೆ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅದಮ್ಯ ಚೇತನ ಸೇವಾ ಉತ್ಸವ ನಡೆಯಲಿದೆ. ಇದೇ ವೇಳೆ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆ ಕೂಡ ನೆರವೇರಲಿದ್ದು, ಎರಡೂ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಚಾಲನೆ ನೀಡುವರು. ರಾಜ್ಯಪಾಲ ವಜುಬಾಯ್‌ ವಾಲಾ ಮತ್ತು ಸಿಎಂ ಸಿದ್ದರಾಮಯ್ಯ ಭಾಗವಹಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಪ್ರಕಾಶ್‌
ಜಾವಡೇಕರ್‌, ಪಿಯೂಶ್‌ ಗೋಯಲ್‌ ಪಾಲ್ಗೊಳ್ಳಲಿದ್ದಾರೆ. ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಶತಮಾನೋತ್ಸವ
ಸಂಭ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ದಿ ಡಾ.ಎಚ್‌.ನರಸಿಂಹಯ್ಯ ಕುರಿತು ಕಿರು ಪರಿಚಯ ಪ್ರದರ್ಶನವಿದ್ದು, ಕ್ರಿಕೆಟ್‌ ಆಟಗಾರ ಅನಿಲ್‌ ಕುಂಬ್ಳೆ, ನಟಿ ಭಾರತಿ ವಿಷ್ಣುವರ್ಧನ್‌, ಇಸ್ರೋ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನವು ಈ ವರ್ಷ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ದೇಶದ ಪ್ರಮುಖ ರಕ್ಷಣಾ ಮತ್ತು ವೈಮಾನಿಕ ಸಂಸ್ಥೆಗಳಾದ ಐಎಎಫ್, ಇಸ್ರೋ, ಎಡಿಎ, ಎಚ್‌ಎಎಲ್‌ ಪಾಲ್ಗೊಳ್ಳಲಿವೆ. ಇದೇ ವೇಳೆ ವೈಜಾಗ್‌ ನಿಂದ ಭಾರತೀಯ ವಾಯುಸೇನೆಯ ವರುಣಾಸ್ತ್ರ (ಜಲಾಂತರ್ಗಾಮಿ ಕ್ಷಿಪಣಿ) ಈ ಪ್ರದರ್ಶನದ ವಿಶೇಷವಾಗಿದೆ. ಅಷ್ಟೇ ಅಲ್ಲದೇ, ಪರಿಸರ-ವೈಜ್ಞಾನಿಕ ಪ್ರದರ್ಶನಗಳು ಸಹ ನಡೆಯಲಿದ್ದು, ವಿಶಿಷ್ಟ ನೇಚರ್‌ ಸೈನ್ಸ್‌ ಇಂಟರ್ನ್ಶಿಪ್‌ ಕಾರ್ಯಕ್ರಮವನ್ನು ವಾಗ್ದೇವಿ ವಿಲಾಸ್‌ ಸಂಸ್ಥೆಗಳ ಅಧ್ಯಕ್ಷ ಕೆ.ಹರೀಶ್‌ ನಡೆಸಿಕೊಡಲಿದ್ದಾರೆ. ಪ್ರಕೃತಿ-ಸಂಸ್ಕೃತಿ ಪ್ರದರ್ಶನ ಕೂಡ ಇರಲಿದೆ ಎಂದರು.

ಮಕ್ಕಳಿಗೆ ಹಲವು ಆಕರ್ಷಣೆ: ಮಕ್ಕಳಿಗೆ ವಿಶೇಷ ಆಕರ್ಷಣೆಯಾಗಿ ಸಿಮ್ಯುಲೇಟರ್‌ಗಳಿರುತ್ತವೆ. ರಕ್ತದಾನ ಶಿಬಿರ, ಪ್ರಶಸ್ತಿ ಪುರಸ್ಕೃತ ಸಿನಿಮಾ “ಜೀರ್‌ಜಿಂಬೆ’ ವಿಶೇಷ ಪ್ರದರ್ಶನ, ಗಿಡ ನಡೆವುದು ಮತ್ತು ಸೈಕಲ್‌ ರ್ಯಾಲಿ ಉತ್ಸವದ ಭಾಗವಾಗಲಿದೆ. 

ಸೌಂದರ್ಯ ಲಹರಿ ಮತ್ತು ಭಗವದ್ಗೀತೆ, ವಂದೇ ಮಾತರಂ ಸಾಮೂಹಿಕ ಪಠಣದೊಂದಿಗೆ ಯೋಗ, ನಿಸರ್ಗ-ವಿಜ್ಞಾನ ಪ್ರದರ್ಶನ, ಇಕೊ-ಚೇತನ ಪ್ರದರ್ಶನವೂ ಇದ್ದು, ಇದರಲ್ಲಿ ರಾಸಾಯನಿಕ ಮಕ್ತ ಧಾನ್ಯಗಳು, ಸಿರಿಧಾನ್ಯಗಳು, ರಾಸಾಯನಿಕ ಮುಕ್ತ ಸಾಬೂನು, ಟೆರೇಸ್‌ ಗಾರ್ಡ್‌ನ್‌ ಉತ್ಪನ್ನಗಳು, ಆಯುರ್ವೇದ ಔಷಧಗಳ ಪ್ರದರ್ಶನ ಮತ್ತು ಮಾರಾಟ, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು. 

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.