ಬೆಂವಿವಿಯಲ್ಲಿ 30 ಹೊಸ ಕೋರ್ಸ್ ಶುರು
ಪದವಿಯ ಮಧ್ಯದಲ್ಲೇ ಎಕ್ಸಿಟ್, ಎಂಟ್ರಿಗೆ ಅನುಕೂಲವಾಗುವ ಕೋರ್ಸ್‌ಗಳ ಪಠ್ಯಕ್ರಮ ಅಳವಡಿಕೆ
Team Udayavani, Nov 4, 2021, 10:11 AM IST
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅನು ಷ್ಠಾನದ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾಲಯ 30 ಹೊಸ ಕೋರ್ಸ್‌ಗಳನ್ನು ಆರಂಭಿಸಿ, ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ದಾಖಲಾತಿಗೂ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ಹೊಸ ಕೋರ್ಸ್‌ಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳು, ಪ್ರೊಫೇಷನ್ ಡಿಪ್ಲೊಮಾ ಕೋರ್ಸ್‌ಗಳು, ಪ್ರಮಾಣ ಪತ್ರ ಕೋರ್ಸ್‌ಗಳು, ನಾಲ್ಕು ವರ್ಷದ ಬಿ.ಇಡಿ ಹಾಗೂ ಕೆಲವೊಂದು ತಾಂತ್ರಿಕ ಕೋರ್ಸ್‌ಗಳು ಸೇರಿಕೊಂಡಿವೆ.
ಇದನ್ನೂ ಓದಿ:- “ನಾಟಕ, ಅಸಮರ್ಪಕ”: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಲಾಲು ಪ್ರಸಾದ್ ಯಾದವ್ ವ್ಯಂಗ್ಯ
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಂಡ ನಂತರ ಉದ್ಯೋಗಾವಕಾಶಕ್ಕೆ ಪೂರಕವಾಗುವಂತೆ ಹಾಗೂ ಪದವಿಯ ಮಧ್ಯದಲ್ಲೇ ಎಕ್ಸಿಟ್, ಎಂಟ್ರಿಗೆ ಅನುಕೂಲ ಆಗುವಂತೆ ಕೋರ್ಸ್ ಗಳ ಪಠ್ಯಕ್ರಮ ಸಿದ್ಧಪಡಿಸಿ, ವಿನ್ಯಾಸಗೊಳಿಸಲಾಗಿದೆ ಎಂದು ಕುಲಪತಿ ಕೆ.ಆರ್.ವೇಣುಗೋಪಾಲ್ ಅವರು ಮಾಹಿತಿ ನೀಡಿದರು.
ಹೊಸ ಕೋರ್ಸ್‌ಗಳ ವಿವರ: ನಾಲ್ಕು ವರ್ಷದ ಬಿ. ಎಸ್ಸಿ ಹಾಗೂ ಬಿ.ಎ ಆನರ್ಸ್ ಅಡಿಯಲ್ಲಿ ಬಯೋ ಇನ್ಫೋಮೇಷನ್ ಮತ್ತು ಬಯೋಟೆಕ್ನಾಲಜಿ, ಹ್ಯೂಮನ್ ಡಿಸೀಸ್ ಜೆನೆಟಿಕ್ಸ್, ಆಹಾರ ಮತ್ತು ಫೌಷ್ಠಿಕಾಂಶ, ಆರ್ಥಶಾಸ್ತ್ರ, ಘನತಾಜ್ಯ ನಿರ್ವಹಣೆ, ಫಿಲ್ಮ್ ಮೇಕಿಂಗ್, ಗ್ರಾಫಿಕ್ಸ್ ಮತ್ತು ಆ್ಯನಿಮೇಷನ್, ಕ್ರೀಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್, ವಿಪತ್ತು ನಿರ್ವಹಣೆ ಮತ್ತು ಮೆಡಿಸಿನಲ್ ಬಾಟನಿ, ಎಂ.ಎ ವಿಭಾಗದಲ್ಲಿ ಟಿಬೆಟಿಯನ್ ಲಿಟ್ರೇಚರ್, ಟಿಬೆಟಿಯನ್ ಲ್ಯಾಂಗ್ವೇಜ್, ಬುದ್ಧಿಸ್ಟ್ ಫಿಲಾಸಫಿ, ಟಿಬೆಟಿಯನ್ ಇತಿಹಾಸ, ಇಟರ್‌ಡಿಸಿಪ್ಲಿನರಿ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರಿಸರ್ಚ್, ಅಡ್ವಟೈಸಿಂಗ್ ಆ್ಯಂಡ್ ಪಬ್ಲಿಕ್ ರಿಸರ್ಚ್, ಮಿಡಿಯಾ ಮ್ಯಾನೇಜ್ಮೆಂಟ್ ಕೋರ್ಸ್‌ಗಳು ಆರಂಭವಾಗಲಿವೆ.
ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಡಿಯಲ್ಲಿ ಮ್ಯಾನುಸ್ಕ್ರೀಪ್ಟೋಲಜಿ ಮತ್ತು ಪಾಲಿಯೋಗ್ರಫಿ, ಇಟರ್‌ಡಿಸಿಪ್ಲಿನರಿ ಸ್ಟಡೀಸ್ ಇನ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಆ್ಯಡಿಟರಿ ವರ್ಬಲ್ ಥೇರಪಿ ಕೋರ್ಸ್, ಫಿಲ್ಮ್ ಆ್ಯಕ್ಟಿಂಗ್, ಥಿಯೇಟರ್ ಆರ್ಟ್ಸ್, ಫಿಲ್ಮ್ ಮೇಕಿಂಗ್, ಕೃಷಿ ನಿರ್ವಹಣೆ, ಪ್ರೊಫೆಷನ್ ಡಿಪ್ಲೊಮಾ ವಿಭಾಗದಲ್ಲಿ ಭರತನಾಟ್ಯಂ, ಒಡಿಶ್ಯಾ, ಪ್ರಮಾಣಪತ್ರ ಕೋರ್ಸ್‌ನಲ್ಲಿ ರಿಸರ್ಚ್ ಮೆಥಡ್ ಇನ್ ಮ್ಯಾನುಸ್ಕ್ರಿಪಾrಲಜಿ ಮತ್ತು ಪಾಲಿಯೋಗ್ರಫಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಟಿಕ್ ವಿಭಾಗದಲ್ಲಿ ಕೃತಕ ಬುದ್ದಿಮತ್ತೆ, ಸೈಬರ್ ಸೆಕ್ಯೂರಿಟಿ, ಸುಸ್ಥಿತರ ಆರ್ಕಿಟೆಕ್ಚರ್, ಇಂಟರ್‌ನೆಟ್ ಆಫ್ ಥಿಂಗ್ಸ್ ಕೋರ್ಸ್‌ಗಳು ಶುರುವಾಗಲಿದೆ.
ವಿಶ್ವ ವಿದ್ಯಾಲಯದ ಹೊಸ ಯೋಜನೆಗಳು
2021-22ನೇ ಸಾಲಿನಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಜತೆಗೆ ಕೆಲವೊಂದು ಹೊಸ ಯೋಜನೆ ಗಳನ್ನು ವಿಶ್ವವಿದ್ಯಾಲಯವು ಹಾಕಿಕೊಂಡಿದೆ. ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 2 ಎಕರೆ ಜಾಗ ನೀಡಿದ್ದು, ಇನ್ನು 8 ಎಕರೆ ಜಾಗ ಖರೀದಿಸಿ, ಸುಸಜ್ಜಿತ ಸ್ನಾತ ಕೋತ್ತರ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ.
17 ಕೋಟಿ ವೆಚ್ಚದಲ್ಲಿ ಯುವಿಸಿಇ ಹುಡುಗರ ಹಾಸ್ಟೆಲ್, ಜ್ಞಾನಭಾರತಿ ಆವರಣದಲ್ಲಿ 13.85 ಕೋಟಿ ರೂ. ವೆಚ್ಚದಲ್ಲಿ ಹುಡುಗರ ಹಾಸ್ಟೆಲ್ ನಿರ್ಮಾಣವಾಗಲಿದೆ. ಒಬಿಸಿ ಹಾಸ್ಟೆಲ್ ಅನ್ನು 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ 9.7 ಕೋಟಿ ವೆಚ್ಚದಲ್ಲಿ ಜ್ಞಾನಭಾರತಿ ಆವರಣದಲ್ಲಿ ಡಾ.ಕೆ.ವೆಂಕಟಗಿರಿ ಗೌಡ ಸಭಾಂಗಣದ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಯುವಿಸಿಇ ಆವರಣದಲ್ಲಿ 55 ಕೋಟಿ ವೆಚ್ಚದಲ್ಲಿ ಮೆಕೆನಿಕಲ್ ಬ್ಲಾಕ್ ನಿರ್ಮಾಣ ಆರಂಭವಾಗಿದ್ದು, ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಇದು ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
“ವಿಶ್ವವಿದ್ಯಾಲಯದಲ್ಲಿ ಡಿಜಿಟಲೈಜೇಷನ್‌ಗೆ ಆದ್ಯತೆ ನೀಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ 30 ಹೋಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಪರೀಕ್ಷಾಂಗ ವಿಭಾಗವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಮುಂದೆ ಕಚೇರಿ ವ್ಯವಹಾರಗಳನ್ನು ಕಾಗದ ಮುಕ್ತ ಮಾಡಲಿದ್ದೇವೆ. ಸಂಶೋಧನಾ ವಿಷಯವಾಗಿಯೂ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.” – ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ.
ವಿಭಾಗ ಬದಲು ಅರ್ಜಿ ಸಲ್ಲಿಕೆಗೆ 11ರವರೆಗೆ ಅವಕಾಶ ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಧೀನದ ಸ್ವಾಯತ್ತ, ಸ್ವತಂತ್ರ ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು 2021-22ನೇ ಸಾಲಿಗೆ ವಿಭಾಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ವಿಟಿಯು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ನ.11ರವರೆಗೂ ಅವಕಾಶ ನೀಡಲಾಗಿದೆ. ಕಾಲೇಜುಗಳಲ್ಲಿ ಸಂಬಂಧಪಟ್ಟ ಅರ್ಜಿಯನ್ನು ಪರಿಶೀಲಿಸಲು ನ.13ರವರೆಗೂ ಅವಕಾಶವಿದೆ. ನ.15ರಂದು ವಿಟಿಯು ಮೆರಿಟ್ ಪಟ್ಟಿ ಪ್ರಕಟಿಸಲಿದೆ. ನ.18ರೊಳಗೆ ಬದಲಾದ ವಿಭಾಗಕ್ಕೆ ವಿದ್ಯಾರ್ಥಿಗಳು ಸೇರಿಕೊಳ್ಳಬೇಕು ಎಂದು ವಿಟಿಯು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.