ನ್ಯಾಪ್ಕಿನ್ ಇನ್ಸಿನೆರೇಟರ್ ಅಳವಡಿಕೆಗೆ ತೊಡಕು
Team Udayavani, Jul 25, 2019, 3:08 AM IST
ಬೆಂಗಳೂರು: ಬಿಬಿಎಂಪಿಯ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಶುಚಿತ್ವ ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನೆರೇಟರ್ (ನ್ಯಾಪ್‌ಕಿನ್ ದಹನ) ಯಂತ್ರ ಅಳವಡಿಸುವ ಯೋಜನೆ ಕಗ್ಗಂಟಾಗೇ ಉಳಿದಿದೆ.
ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ಇನ್ಸಿನೆರೇಟರ್ ಯಂತ್ರ ಅಳವಡಿಸಲು ಪಾಲಿಕೆ 2019-20ನೇ ಸಾಲಿನ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನ ಮೀಸಲಿರಿಸಿತ್ತು. ಯಂತ್ರ ಅಳವಡಿಸಲು ಅನುದಾನವಿದ್ದರೂ ಅದನ್ನು ಬಳಸದೆ ದಾನಿಗಳ ನಿರೀಕ್ಷೆಯಲ್ಲಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲಿ ಖಾಸಗಿ ಕಂಪನಿಯೊಂದರ ಹಿತಾಸಕ್ತಿಯೂ ಇದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಪಾಲಿಕೆಯ 15 ಪ್ರಾಥಮಿಕ ಶಾಲೆಗಳಲ್ಲಿ 925 ಜನ ಹೆಣ್ಣು ಮಕ್ಕಳು, 32 ಪ್ರೌಢಶಾಲೆಗಳಲ್ಲಿ 3,515 ವಿದ್ಯಾರ್ಥಿನಿಯರು, 15 ಪಿಯು ಕಾಲೇಜುಗಳಲ್ಲಿ 3045 ಹಾಗೂ ನಾಲ್ಕು ಪದವಿ ಕಾಲೇಜುಗಳಲ್ಲಿ 1021 ವಿದ್ಯಾರ್ಥಿನಿಯರಿದ್ದಾರೆ. ಈ ಶಾಲೆ, ಕಾಲೇಜುಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಈ ಯೋಜನೆ ಪರಿಚಯಿಸಲಾಗಿತ್ತು.
ಯಂತ್ರ ಅಳವಡಿಸುವುದಕ್ಕೆ ಖಾಸಗಿ ಕಂಪನಿಯೊಂದು ಮುಂದೆ ಬಂದಿತ್ತು. ಆ ಕಂಪನಿಯ ಬಗ್ಗೆ ವಿವಾದ ಉಂಟಾದ್ದರಿಂದ ಯಂತ್ರ ಖರೀದಿಸುವುದು ಬೇಡ ಎಂದು ಅಧಿಕಾರಿಗಳು ತೀರ್ಮಾನಿಸಿದ್ದರು. ಆದರೆ, ತೆರೆಯ ಹಿಂದೆ ಅದೇ ಕಂಪನಿಯಿಂದ ಯಂತ್ರಗಳನ್ನು ಖರೀದಿಸಲು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ಹಣ ಸಂಗ್ರಹಿಸಲಾಗುತ್ತಿದೆ!
ಪತ್ರ ನೀಡುವಂತೆ ಮನವಿ: ಯಂತ್ರ ಅಳವಡಿಸಲು ಮುಂದೆ ಬಂದಿದ್ದ ಖಾಸಗಿ ಕಂಪನಿ, ಪಾಲಿಕೆಯ ಹಣ ಬೇಡ. ಸಿಎಸ್‌ಆರ್ ಅಡಿ ಹಣ ನೀಡುತ್ತೇವೆ. ಅದಕ್ಕೆ ಪಾಲಿಕೆಯಿಂದ ಅನುಮತಿ ಪತ್ರ ನೀಡಿದರೆ ಸಾಕು ಎಂದು ಮನವಿ ಸಲ್ಲಿಸಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಧಿಕಾರಿಗಳ ವಾದವೇನು: ಪಾಲಿಕೆಯ ಬಹುತೇಕ ಶಾಲೆ, ಕಾಲೇಜುಗಳಲ್ಲಿ ಈಗಾಗಲೇ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನೆರೇಟರ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಅದನ್ನು ಬದಲಾಯಿಸಬೇಕು. ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ ಯಂತ್ರ ಅಳವಡಿಸಿದರೂ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರೋಧಕ್ಕೆ ಕಾರಣವೇನು?: “ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ಇನ್ಸಿನೆರೇಟರ್ ಅಳವಡಿಸಲು ಜೆಸ್ಟ್‌ವೆಂಡ್ ಕಾನ್ ಸಂಸ್ಥೆ ಮುಂದೆ ಬಂದಿತ್ತು. ಆದರೆ, ಈ ಸಂಸ್ಥೆಯ ಉತ್ಪನ್ನಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಅನ್ವಯ ತಯಾರಾಗಿಲ್ಲ’ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
“ಜೆಸ್ಟ್‌ವೆಂಡ್ ಕಾನ್ ಸಂಸ್ಥೆ ಬಾಕ್ಸ್ ಹೀಟರ್ ಇನ್ಸಿನೆರೇಟರ್‌ಗಳನ್ನು ತಯಾರಿಸುತ್ತಿದ್ದು, ಈ ಯಂತ್ರದಿಂದ ಡಯಾಕ್ಸಿನ್, ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಮತ್ತು ಸಲ್ಫರ್ ಡಯಾಕ್ಸೈಡ್ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ. ಬಡ ಮಕ್ಕಳ ಶುಚಿತ್ವ ಕಾಪಾಡುವ ಯೋಜನೆ ಅವರಿಗೆ ಮಾರಕವಾಗಬಾರದು. ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನುಸರಿಸುವ ಕಂಪನಿಯಿಂದ ಮಾತ್ರ ಯಂತ್ರ ಖರೀದಿಸಲಿ’ ಎಂದು ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.