ಪ್ಲಾಸ್ಮಾದಾನಕ್ಕೆ ಮುಂದಾಗಲು ಸಲಹೆ
Team Udayavani, Sep 1, 2020, 12:41 PM IST
ಬೆಂಗಳೂರು: ಕೋವಿಡ್ ಸೋಂಕಿತರಿಗೆ ನೆರವಾಗುವಸಲುವಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿರುವ ಪೊಲೀಸರಂತೆ ನಾಗರಿಕರು ಸಹ ಪ್ಲಾಸ್ಮಾ ದಾನಮಾಡಲು ಕೈ ಜೋಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು. ಪ್ಲಾಸ್ಮಾ ದಾನದ ಕುರಿತ ಜಾಗೃತಿಗಾಗಿ ಕೆಎಸ್‌ಆರ್‌ಪಿ ವತಿಯಿಂದ ಭಾನುವಾರ ನಡೆದ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ವಿರುದ್ಧ ದೇಶವೇ ಹೋರಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ವಾರಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ ಹಲವು ಸಿಬ್ಬಂದಿ ಪ್ಲಾಸ್ಮಾ ದಾನಮಾಡಿರುವುದು ಶ್ಲಾಘನೀಯ. ಅದರಂತೆ ಪ್ಲಾಸ್ಮಾದಾನದ ಕುರಿತು ಜಾಗೃತಿ ಮೂಡಿಸಲು ಕೆಎಸ್ ಆರ್‌ಪಿ ಸೈಕಲ್ ಜಾಥಾ ನಡೆಸುತ್ತಿದ್ದು, ಪ್ಲಾಸ್ಮಾ ದಾನಕ್ಕೆ ನಾಗರಿಕರು ಕೈಜೋಡಿಸಬೇಕೆಂದರು. ಕೆಎಸ್‌ಆರ್‌ಪಿ ಎಡಿಜಿಪಿ, ಅಲೋಕ್‌ಕುಮಾರ್ ಮಾತನಾಡಿ, ಕೆಎಸ್‌ಆರ್‌ಪಿ ವತಿಯಿಂದ ಈಗಾಗಲೇ ಹಲವು ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದು ಔದಾರ್ಯ ಮೆರೆದಿದ್ದಾರೆ. ಜತೆಗೆ, 167 ಸಿಬ್ಬಂದಿ ಪ್ಲಾಸ್ಮಾದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಇದೇ ವೇಳೆ ಪ್ಲಾಸ್ಮಾ ದಾನಮಾಡಿದ ಕೆಎಸ್‌ಆರ್‌ಪಿ ಸಿಬ್ಬಂದಿಗೆ, ಡಿಜಿಪಿ ಪ್ರವೀಣ್ ಸೂದ್, ಅಭಿನಂದನಾ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ಕೆಎಸ್‌ಆರ್‌ಪಿ ಮಹಿಳಾ ಸೈಕ್ಲಿಂಗ್ ತಂಡ ಹಾಗೂ ಐಎಸ್‌ಡಿಯ ಕಮಾಂಡೋ ಪಡೆ ಭಾಗವಹಿಸಿದ್ದ ಸೈಕ್ಲಿಂಗ್ ಜಾಥಾ ಅಶೋಕ ನಗರದ ಹಾಕಿ ಕ್ರೀಡಾಂಗಣದಿಂದ ಆರಂಭಗೊಂಡು, ಎಂ.ಜಿ.ರಸ್ತೆ, ವಿಧಾನಸೌಧ, ಮಾರ್ಗವಾಗಿ ರಿಚ್ ಮಂಡ್ ವೃತ್ತದಿಂದ ಆಗಮಿಸಿ ಹಾಕಿ ಕ್ರೀಡಾಂಗಣ ತಲುಪಿತು. ಜಾಥಾದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಕಮಾಂಡೆಂಟ್ ಗಳಾದ ರಾಮಕೃಷ್ಣಪ್ರಸಾದ್, ಗಿರೀಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.