ಏರಿಯೇಟರ್ ಡೆಡ್‌ಲೈನ್ ವಿಸ್ತರಣೆ
Team Udayavani, Mar 31, 2024, 1:11 PM IST
ಬೆಂಗಳೂರು: ರಾಜ್ಯ ರಾಜಧಾನಿಯ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌ಗಳು, ಸರ್ಕಾರಿ ಕಟ್ಟಡ, ಹೋಟೆಲ್‌ಗಳು, ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ವತ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಏರಿಯೇಟರ್ ಸಾಧನ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವನ್ನು ಮಾ.31ರಿಂದ ಏ.7ರ ವರೆಗೆ ವಿಸ್ತರಿ ಸಲಾಗಿದೆ.
ಸಾರ್ವಜನಿಕರು ಗಡುವು ವಿಸ್ತರಿಸು ವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಸಾರ್ವ ಜನಿಕರ ಹಿತ ದೃಷ್ಟಿಯಿಂದ ಜಲಮಂಡಳಿಯು ಈ ಕ್ರಮ ಕೈಗೊಂಡಿದೆ. ಒಂದು ವೇಳೆ ಏ.7ರೊಳಗೆ ನಲ್ಲಿಗಳಲ್ಲಿ ಏರಿಯೇಟರ್ ಅಳವಡಿಕೆ ಮಾಡದಿದ್ದರೆ, ಏ.8ರಿಂದ ದಂಡ ವಿಧಿಸಲಾಗುವುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಮಾ.31ರ ವರೆಗೆ ಏರಿ ಯೇಟರ್ ಅಳವಡಿಕೆಗೆ ಅವಕಾಶ ನೀಡಿತ್ತು. ಏ.7ರ ಒಳಗೆ ಮೇಲ್ಕಂಡ ಸ್ಥಳಗಳಲ್ಲಿ ನೀರಿನ ನಲ್ಲಿಗೆ ಏರಿಯೇ ಟರ್ ಅಳವಡಿಸದಿರುವುದು ಜಲಮಂಡಳಿಯ ಗಮನಕ್ಕೆ ಬಂದರೆ 5 ಸಾವಿರ ರೂ. ದಂಡ ವಿಧಿಸಲಿದೆ.
ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಲಿದೆ. ಈ ಉಲ್ಲಂಘನೆಯು ಮರು ಕಳಿಸಿದರೆ 5 ಸಾವಿರ ದಂಡದ ಜೊತೆಗೆ ಹೆಚ್ಚುವರಿಯಾಗಿ 500 ರೂ. ಪ್ರತಿದಿನದಂತೆ ದಂಡ ಹಾಕಲು ನಿರ್ಧರಿಸಲಾಗಿದೆ. ಇಷ್ಟಾದ ಮೇಲೂ ಏರಿಯೇಟರ್ ಅಳವಡಿಸದಿರುವುದು ಕಂಡು ಬಂದರೆ ಜಲಮಂಡಳಿಯ ವತಿಯಿಂದಲೆ ಏರಿಯೇಟರ್ ಅಳವಡಿಸಿ ಆ ಮೊತ್ತವನ್ನು ಆಯಾ ಗ್ರಾಹಕರಿಂದಲೇ ವಸೂಲಿ ಮಾಡಲಾಗುವುದು ಎಂದು ಜಲಮಂಡಳಿಯು ಈಗಾಗಲೇ ಆದೇಶಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.