ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ತೆರೆ


Team Udayavani, Feb 19, 2017, 3:45 AM IST

Aero-India-2017.jpg

ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ-2017’ಕ್ಕೆ ಶನಿವಾರ ತೆರೆ ಬಿದ್ದಿತು.

ಭವಿಷ್ಯದ ಭಾರತೀಯ ವೈಮಾನಿಕ ಕ್ಷೇತ್ರದ ಬೆಳವಣಿಗೆಯ ಮುನ್ಸೂಚನೆಗಳೊಂದಿಗೆ ಯಲಹಂಕದ ವಾಯುನೆಲೆಯಲ್ಲಿ ನಡೆದ ಈ ಬಾರಿಯ ಐದು ದಿನಗಳ ವೈಮಾನಿಕ ಪ್ರದರ್ಶನ ಒಂದೂವರೆ ಲಕ್ಷ ಉದ್ದಿಮೆದಾರರು ಸೇರಿ ಐದು ಲಕ್ಷಕ್ಕೂ ಹೆಚ್ಚು ಜನರ ವೀಕ್ಷಣೆಗೆ ಸಾಕ್ಷಿಯಾಯಿತು.

ಪ್ರದರ್ಶನದ ಕೊನೆಯ ದಿನ ಯಲಹಂಕದ ವಾಯುನೆಲೆಗೆ ಅಕ್ಷರಶಃ ಜನ ಪ್ರವಾಹ ಹರಿದು ಬಂದಿತ್ತು. ದೇಶೀಯ ಮತ್ತು ವಿದೇಶಿ ಯುದ್ಧ ವಿಮಾನಗಳ ಅಬ್ಬರ ಯುದ್ಧಭೂಮಿಯನ್ನು ನೆನಪಿಸಿದರೆ, ಲೋಹದ ಹಕ್ಕಿಗಳ ಮೇಲೆ ಸ್ಕ್ಯಾಂಡಿನೇವಿಯನ್‌ ಏರೋಬ್ಯಾಟಿಕ್‌ ತಂಡ ನಡೆಸಿದ ನೃತ್ಯ, ಸೂರ್ಯಕಿರಣ್‌ ತಂಡದ ಸಾಹಸಗಳು “ನೀಲಿ ಬಾನ ನರ್ತನ ‘ ನೋಡುಗರನ್ನು ಪುಳಕಗೊಳಿಸಿತು.

ನೀಲಿ ಬಾನಲ್ಲಿ ತ್ರಿವರ್ಣ
ವೈಮಾನಿಕ ಪ್ರದರ್ಶನದಲ್ಲಿ ಇಂಗ್ಲೆಂಡ್‌ ಮೂಲದ ವಿಮಾನಗಳು ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿ ಗಮನಸೆಳೆದವು.

ಇಂಗ್ಲೆಂಡಿನ ಯಾಕೊವ್‌ಲೇವ್ಸ್‌ ಏರೋಬ್ಯಾಟಿಕ್‌ ತಂಡ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಹಾಗೂ ಹೃದಯದ ಚಿತ್ತಾರವನ್ನು ಮೂಡಿಸಿ ಚಪ್ಪಾಳೆ ಗಿಟ್ಟಿಸಿದವು. ವಿದೇಶಿ ತಂಡವೊಂದು ದೇಶದ ತ್ರಿವರ್ಣ ಧ್ವಜ ಮೂಡಿಸಿದ್ದಕ್ಕೆ ಪ್ರೇಕ್ಷಕರು ಯಾಕೊವ್‌ಲೇವ್ಸ್‌ ತಂಡಕ್ಕೆ “ಸೆಲ್ಯೂಟ್‌” ಹೊಡೆದರು.

ಇನ್ನು ದೇಶದ ಸೂರ್ಯಕಿರಣ್‌, ಸಾರಂಗ್‌, ತೇಜಸ್‌ ತಂಡಗಳು ಭಾರತದ ರಕ್ಷಣಾ ಸಾಮರ್ಥಯ ಸಾಬೀತುಪಡಿಸುವುದರ ಜತೆಗೆ ದೇಶಾಭಿಮಾನ ಮೂಡಿಸುವಂತಹ ಚಿತ್ತಾಕರ್ಷಕ ಸಾಹಸ ಪ್ರದರ್ಶನ ನಡೆಸಿಕೊಟ್ಟು ಪ್ರೇಕ್ಷಕರಿಂದ ಭೇಷ್‌ ಎನಿಸಿಕೊಂಡರೆ, ಅಮೇರಿಕಾದ ಎಫ್-16, ಇಂಗ್ಲೆಂಡಿನ ಯಾಕೊವ್‌ಲೇವ್ಸ್‌, ಸ್ವಿಡನ್‌ನ ಸ್ಕ್ಯಾಂಡಿನೇವಿಯನ್‌ ಸೇರಿದಂತೆ ಸುಖೋಯ್‌ ಸು-30 ಮತ್ತಿತರ ವಿದೇಶಿ ಏರೋಬ್ಯಾಟಿಕ್‌ ತಂಡಗಳು ಆಕಾಶದಲ್ಲಿ ಮೈಚಳಿ ಬಿಟ್ಟು ಮಾಡಿದ ಸಾಹಸಿ ಕಸರತ್ತುಗಳು ನೋಡಗರ ಮೈ ಝಲ್ಲೆನಿಸಿತ್ತು. ಒಟ್ಟಾರೆ ದೇಶಿ ಹಾಗೂ ವಿದೇಶಿ ವಿಮಾನ ತಂಡಗಳು ನಡೆಸಿಕೊಟ್ಟ ಸಾಹಸ ಪ್ರದರ್ಶನ 11ನೇ ವೈಮಾನಿಕ ಪ್ರದರ್ಶನಕ್ಕೆ ವಿಶೇಷ ಮೆರಗು ತಂದುಕೊಟ್ಟಿತ್ತು.

ಪ್ರದರ್ಶನದ ಮೊದಲ ಮೂರು ದಿನ ದ್ವಿಪಕ್ಷೀಯ ವಾಣಿಜ್ಯ ಮಾತುಕತೆಗಳು, ಉದ್ದಿಮೆದಾರ ನಿಯೋಗಗಳ ಭೇಟಿ, ವಿಚಾರಗೋಷ್ಠಿ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಸಿಮೀತವಾಗಿತ್ತು. ಕೊನೆಯ ಎರಡು ದಿನಗಳು ಪ್ರದರ್ಶನಕ್ಕೆ ಮಾತ್ರ ಸಿಮೀತವಾಗಿತ್ತು. 270 ದೇಶಿಯ ಹಾಗೂ 279 ವಿದೇಶಿ ಕಂಪೆನಿಗಳು ಸೇರಿ ಒಟ್ಟು 549 ಕಂಪೆನಿಗಳು ವಾಣಿಜ್ಯ ಚಟುವಟಿಕೆಗಳ ಭಾಗವಾಗಿದ್ದರೆ, ದೇಶಿ-ವಿದೇಶಿ 72 ವಿಮಾನಗಳು ಮತ್ತು 16 ಏರೋಬ್ಯಾಟಿಕ್‌ ತಂಡಗಳು ಚಿತ್ತಾಕರ್ಷಕ ಪ್ರದರ್ಶನ ನಡೆಸಿಕೊಟ್ಟವು.

*ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಮಿಂಚಿದ್ದು “ಮೇಕ್‌ ಇನ್‌ ಇಂಡಿಯಾ’. ದೇಶೀಯ ವಿಮಾನಗಳ ಹಾರಾಟ, ವೈಮಾನಿಕ ಕ್ಷೇತ್ರದಲ್ಲಿ ದೇಶೀಯ ವಿಜ್ಞಾನಿಗಳ ಅನ್ವೇಷಣೆಗಳು, ಇಲ್ಲಿನ ಕಂಪೆನಿಗಳ ಉತ್ಪಾದನೆಗಳು ಗಮನಸೆಳೆದವು. ಕೆಲವು ವಿದೇಶಿ ಮಳಿಗೆಗಳಲ್ಲಿ ಕೂಡ “ಮೇಕ್‌ ಇನ್‌ ಇಂಡಿಯಾ’ ಫ‌ಲಕಗಳು ಕಂಡುಬಂದವು.

12ನೇ ಏರ್‌ಶೋ ಎಲ್ಲಿ?
*ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಳೆದ ಬಾರಿಯ ವೈಮಾನಿಕ ಪ್ರದರ್ಶನದ ವೇಳೆ “ಏರ್‌ ಶೋ ಗೋವಾಕ್ಕೆ ಸ್ಥಳಾಂತರಗೊಳ್ಳಲಿದೆ’ ಎಂಬ ವದಂತಿ ಏರ್‌ಶೋ ಸ್ಥಳಾಂತರದ ಬಗ್ಗೆ “ಗೋವಾ ಗುಮ್ಮ’ ಈ ಬಾರಿಯೂ ಕಾಡಿದೆ. 

ಸಾಮಾನ್ಯವಾಗಿ ಮುಂದಿನ ಏರ್‌ಶೋ ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಹಿಂದಿನ ಏರ್‌ಶೋನ ಮೊದಲ ದಿನವೇ ಘೋಷಣೆ ಮಾಡಲಾಗುತ್ತದೆ. ಆದರೆ, ಕಳೆದ ಬಾರಿಯ ಏರ್‌ ಶೋದಲ್ಲಿ ಸ್ಥಳ ಮತ್ತು ದಿನಾಂಕ ಘೋಷಣೆ ಮಾಡಿರಲಿಲ್ಲ. ಈ ಬಾರಿಯೂ ಮಾಡಿಲ್ಲ. ಹೀಗಾಗಿ, ಮುಂದಿನ ಏರ್‌ಶೋ ಗೋವಾಕ್ಕೆ ಸ್ಥಳಾಂತರಗೊಳ್ಳುವ ಅಂತೆ-ಕಂತೆಗಳಿಗೆ ಮತ್ತೆ ರೆಕ್ಕೆಪುಕ್ಕ ಹುಟ್ಟಿಕೊಂಡಂತಾಗಿದೆ.

ಏರೋಶೋದಲ್ಲಿ ಬಂಡವಾಳ ಆಕರ್ಷಿಸಲು ಪ್ರಯತ್ನ
ಬೆಂಗಳೂರು
:
ಹನ್ನೊಂದನೇ ವೈಮಾನಿಕ ಪ್ರದರ್ಶನದ ವೇಳೆ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದಲ್ಲಿ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ದೇಶ-ವಿದೇಶ ಪ್ರತಿಷ್ಠಿತ ಕಂಪೆನಿಗಳ ಮನವೊಲಿಕೆಗೆ ರಾಜ್ಯ ಕೈಗಾರಿಕಾ ಇಲಾಖೆ “ಭರಪೂರ’ ಪ್ರಯತ್ನ ನಡೆಸಿತು.

ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ದೇಶ-ವಿದೇಶಗಳ ಉದ್ದಿಮೆದಾರರು, ಬಂಡವಾಳ ಹೂಡಿಕೆದಾರರಿಗೆ ಇಲಾಖೆ ವತಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದ್ದು  ಉತ್ತಮ ಸ್ಪಂದನೆ ದೊರೆತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸುಸಜ್ಜಿತ ಮಳಿಗೆಯನ್ನು ತೆರೆದಿತ್ತು. ಅಲ್ಲದೇ ಉನ್ನತ ಮಟ್ಟದ ವಾಣಿಜ್ಯ ನಿಯೋಗಗಳ ಜೊತೆಗೆ ಭೇಟಿ, ಮಾತುಕತೆ ನಡೆಸಲು ಸಭಾ ಕೋಠಡಿಯನ್ನು ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಏರ್‌ಶೋ ಉದ್ಘಾಟನಾ ಸಮಾರಂಭದ ದಿನ ಸೇರಿದಂತೆ ಮೊದಲ ಮೂರು ದಿನಗಳ ಕಾಲ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ದೇಶ-ವಿದೇಶಗಳ ವಾಣಿಜ್ಯ ನಿಯೋಗಗಳೊಂದಿಗೆ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದು ವಿಶೇಷ.

ಟಾಪ್ ನ್ಯೂಸ್

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

ಸಿಎಂ ಗೆ ರೈತ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ

ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.