ಏರೋ ಇಂಡಿಯಾ ಶೋ ಹಿನ್ನೆಲೆ; ವಿಮಾನ ಸೇವೆ ವ್ಯತ್ಯಯ
Team Udayavani, Jan 23, 2019, 6:27 AM IST
ಬೆಂಗಳೂರು: ಬರುವ ಫೆಬ್ರವರಿಯಲ್ಲಿ “ಏರೋ ಇಂಡಿಯಾ ಶೋ-2019′ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಏರೋ ಇಂಡಿಯಾ ಶೋ ಪ್ರಯುಕ್ತ ನಡೆಸಲಾಗುವ ತಾಲೀಮು ಮತ್ತು ಪ್ರದರ್ಶನ ಫೆ. 14ರಿಂದ 24ರವರೆಗೆ ವಿವಿಧ ಅವಧಿಯಲ್ಲಿ ನಡೆಯಲಿದ್ದು, ಆ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಐಎಎಲ್‌ನಿಂದ ಯಾವುದೇ ವಿಮಾನಗಳ ವಾಣಿಜ್ಯ ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್) ಸ್ಪಷ್ಟಪಡಿಸಿದೆ.
ಏರೋ ಇಂಡಿಯಾ ಶೋ ಯಶಸ್ಸಿಗೆ ಇದು ಅನಿವಾರ್ಯ. ಆದರೆ, ಸಾಧ್ಯವಾದಷ್ಟು ಸೇವೆಯಲ್ಲಿ ಕಡಿಮೆ ವ್ಯತ್ಯಯ ಆಗುವಂತೆ ನೋಡಿಕೊಳ್ಳಲಾಗುವುದು. ವೇಳಾಪಟ್ಟಿ ಪರಿಷ್ಕರಣೆ ಅಥವಾ ವಿಮಾನಗಳ ಸೇವೆ ರದ್ಧತಿಯಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ಟ್ಯಾಕ್ಸಿ ಮತ್ತು ಬಸ್‌ಗಳ ಮೇಲೆ ಒತ್ತಡ ಬೀಳಲಿದೆ.
ಈ ಪರಿಷ್ಕರಣೆಯ ಸಮಗ್ರ ಮಾಹಿತಿ ವೆಬ್‌ಸೈಟ್: www.bengaluruairport.com ನಲ್ಲಿ ಲಭ್ಯವಿದೆ. ಏರೋ ಇಂಡಿಯಾ ಶೋ ಅಭ್ಯಾಸ ಮತ್ತು ಪ್ರದರ್ಶನದ ವೇಳಾಪಟ್ಟಿ ಈ ಕೆಳಗಿನಂತಿದ್ದು, ಈ ಅವಧಿಯಲ್ಲಿ ಕೆಐಎಎಲ್‌ನಿಂದ ವಿಮಾನಗಳ ಹಾರಾಟ ಇರುವುದಿಲ್ಲ ಎಂದು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ವೈಮಾನಿಕ ಪ್ರದರ್ಶನ ಮತ್ತು ಅಭ್ಯಾಸ ಸಮಯ
-ಫೆ. 14-17ರವರೆಗೆ ಮಧ್ಯಾಹ್ನ 1.30ರಿಂದ 4.30 (ಅಭ್ಯಾಸ).
-ಫೆ. 18-19ರವರೆಗೆ ಬೆಳಿಗ್ಗೆ 10ರಿಂದ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ (ಅಭ್ಯಾಸ).
-ಫೆ. 20ರಂದು ಬೆಳಿಗ್ಗೆ 9ರಿಂದ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ (ವೈಮಾನಿಕ ಪ್ರದರ್ಶನ ಉದ್ಘಾಟನೆ).
-ಫೆ. 21ರಿಂದ 24ರವರೆಗೆ ಬೆಳಿಗ್ಗೆ 10ರಿಂದ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ (ವೈಮಾನಿಕ ಪ್ರದರ್ಶನ).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.