ಮತ್ತೆ ಆಪರೇಷನ್ ಕಮಲದ ಸದ್ದು
Team Udayavani, Dec 5, 2018, 6:00 AM IST
ರಾಜ್ಯದಲ್ಲಿ ಮತ್ತೂಮ್ಮೆ ಆಪರೇಷನ್ ಕಮಲದ ವದಂತಿ ಹರಡಿದೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಶಾಸಕ ಶ್ರೀರಾಮುಲು ಅವರ ಆಪ್ತ ಸಹಾಯಕನೊಬ್ಬ ದುಬೈ ಮೂಲದ ಉದ್ಯಮಿ ಜತೆ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ರಾಜ್ಯದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇದು ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆಪರೇಷನ್ ಕಮಲ ಮಾಡುವುದಾದರೆ ಎಚ್ಡಿಕೆ, ಸಿದ್ದುಗೆ
ಹೇಳಿಯೇ ಮಾಡುತ್ತೇನೆ ಎಂದು ಶ್ರೀರಾಮುಲು ಕಿಡಿ ಕಾರಿದ್ದರೆ, ಆಡಿಯೋ ವಿರುದಟಛಿ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಎಚ್ಡಿಕೆ-ಸಿದ್ದುಗೆ ಹೇಳಿಯೇ ಸರಕಾರ ಬೀಳಿಸುವೆ: ಶ್ರೀರಾಮುಲು
ಹೊಸಪೇಟೆ: ಬಿಜೆಪಿ “ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದು, ಸರಕಾರ ಬೀಳಿಸಲು ಕಾಂಗ್ರೆಸ್ ಶಾಸಕರನ್ನು ಸೆಳೆಯು
ತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಒಂದು ವೇಳೆ ನಾನು
ಸರ್ಕಾರ ಉರುಳಿಸುವುದಾದರೆ ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ಹೇಳಿಯೇ ಕಾರ್ಯೋನ್ಮುಖನಾಗುವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ
ಮೈತ್ರಿ ಸರ್ಕಾರಕ್ಕೆ ಮಾಡೋಕೆ ಕೆಲಸವಿಲ್ಲ. ಸರಕಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಆರೋಪ
ಹೊರಿಸುತ್ತಿದ್ದಾರೆ. ಇವರ ಆರೋಪವೆಲ್ಲ ಬರೀ ಸುಳ್ಳು. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂಬ ಬಗ್ಗೆ ಅನುಮಾನವಿದ್ದರೆ ಆರೋಪ ಮಾಡೋದನ್ನು ಬಿಟ್ಟು ಸಮಗ್ರ ತನಿಖೆ ನಡೆಸಲಿ. ಒಂದು ವೇಳೆ ನಾನು ಸರ್ಕಾರ ಬೀಳಿಸುವುದಾದರೆ ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿ ಗೆ ತಿಳಿಸಿಯೇ ಸರ್ಕಾರ ಬೀಳಿಸುತ್ತೇನೆ ಎಂದು ಟಾಂಗ್ ನೀಡಿದರು.
ಮೈತ್ರಿ ಸರ್ಕಾರ ಸೂಸೈಡ್ ಮಾಡಿಕೊಳ್ಳುತ್ತೆ: ಶೆಟ್ಟರ್
ಹೊಸಪೇಟೆ: ಬಿಜೆಪಿಯಲ್ಲ ಕಾಂಗ್ರೆಸ್‌ನವರೇ ಆಪರೇಷನ್ ಮಾಡಿ ಸರ್ಕಾರ ಬೀಳಿಸಿಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ಹೆಸರಿನಲ್ಲಿ ಸರ್ಕಾರವನ್ನು ಅವರೇ ಉರುಳಿಸಿಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ನವರೇ ಆಪರೇಷನ್ ಮಾಡಿ ಸರ್ಕಾರ ಬೀಳಿಸಿಕೊಳ್ಳುತ್ತಾರೆ. ಇದಕ್ಕೆ ಬಿಜೆಪಿಯವರು ಬೇಕಿಲ್ಲ. ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸರ್ಕಾರ ತಾನೇ ತಾನಾಗಿ ಉರುಳಲಿದೆ ಎಂದರು. ಹಣದ ಹೊಳೆ ಹರಿಸಿ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಮೈತ್ರಿ ಸರ್ಕಾರ, ಸೆಲ್ಫ್ ಸೂಸೈಡ್ ಮಾಡಿಕೊಳ್ಳುತ್ತದೆ. ಸರ್ಕಾರ ಬಿದ್ದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಜನರ ಹಿತಾಸಕ್ತಿಯಂತೆ ಸರ್ಕಾರ ರಚಿಸಲೂ ಸಿದ್ಧ ಎಂದು ತಿಳಿಸಿದರು.
ಆಡಿಯೋ ವಿರುದ್ಧ ದೂರು: ದಿನೇಶ್
ಹರಪನಹಳ್ಳಿ: ಆಪರೇಷನ್ ಕಮಲಕ್ಕೆ ಸಂಬಂಧಿಸಿ ಆಡಿಯೋ ಸಿಕ್ಕಿರುವ ಕುರಿತು ದೂರು ದಾಖಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಆಡಿಯೋದಲ್ಲಿನ ಧ್ವನಿ ಯಾರದ್ದೆಂದು ಪತ್ತೆ ಹಚ್ಚಬೇಕಾಗಿದ್ದು, ಈ ಬಗ್ಗೆ ದೂರು ದಾಖಲಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ, ಎಲ್ಲ ಪ್ರಯತ್ನಗಳೂ ವಿಫಲಗೊಳ್ಳಲಿವೆ. ಯಾವುದೇ ಕಾರಣಕ್ಕೂ
ಸರ್ಕಾರ ಪತನವಾಗಲ್ಲ. ಆದರೆ, ಆಪರೇಷನ್ ಕಮಲದ ಸತ್ಯಾಸತ್ಯತೆ ಅರಿಯಬೇಕಾಗಿದೆ. ಹೀಗಾಗಿ, ಫೋನ್ ಸಂಭಾಷಣೆಯಲ್ಲಿ ತೊಡಗಿರುವವರ ವಿರುದಟಛಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.
ಕುಮಾರಸ್ವಾಮಿ ಆರೋಪ ಸಂಪೂರ್ಣ ಸುಳ್ಳು
ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಖುರ್ಚಿ ಅಲುಗಾಡುತ್ತಿದೆ. ಹೀಗಾಗಿ, ಬಿಜೆಪಿ ವಿರುದ್ಧ ಆರೋಪಿಸಲು ತಾವೇ ರಚಿಸಿಕೊಂಡ ಫೋನ್ ಕದ್ದಾಲಿಕೆಯ ಟೇಪ್ ರೆಕಾರ್ಡ್ ಹಗರಣದ ನಾಟಕವಾಡುತ್ತಿದ್ದಾರೆ ಎಂದು
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೇ ರೀತಿಯ ರೆಸಾರ್ಟ್ ರಾಜಕೀಯ ಮತ್ತು ಆಪರೇಷನ್ ಕಮಲ
ಮಾಡುವುದಿಲ್ಲ ಎಂದು ಸ್ವತ: ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಆಪರೇಷನ್ ಕಮಲ ಮಾಡುವುದಿಲ್ಲ. ಅದರ ಅಗತ್ಯವೂ ಇಲ್ಲ. ನಾವು ಆಪರೇಷನ್ ಕಮಲ ಮಾಡಿದರೂ, ಮಾಡದೇ ಇದ್ದರೂ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಶಾಸಕರು ಫೋನ್‌ನಲ್ಲಿ
ಆಮಿಷ ವೊಡ್ಡಿದ್ದಾರೆ ಎಂಬ ಸಿಎಂ ಕುಮಾರಸ್ವಾಮಿ ಆರೋಪ ಸಂಪೂರ್ಣ ಸುಳ್ಳು. ಫೋನ್‌ನಲ್ಲಿ ಮಾತನಾಡಿದ ಧ್ವನಿ ಮುದ್ರಿತ ದಾಖಲೆ ಇದೆ ಎಂದು ಹೇಳುತ್ತಿದ್ದಾರೆ. ಅವರು ಕೂಡಲೇ ಈ ಬಗ್ಗೆ ತನಿಖೆ ನಡೆಸ ಬೇಕು ಎಂದು ಆಗ್ರಹಿಸಿದರು.
ಶ್ರೀರಾಮುಲು ವಿರುದ್ಧ ಷಡ್ಯಂತ್ರ: ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿರುವ ಶ್ರೀರಾಮುಲು ಅವರಿಂದ ಸಿದ್ದರಾಮಯ್ಯಗೆ
ನಡುಕವಾಗುತ್ತಿದೆ. ಎಲ್ಲಿ ಅಹಿಂದ ನಾಯಕ ಎಂಬ ತಮ್ಮ ಪಟ್ಟ ಹೋಗುತ್ತದೆಯೋ ಎಂಬ ಭಯದಿಂದ ಶ್ರೀರಾಮುಲು ಅವರನ್ನು
ತುಳಿಯುವ ಷಡ್ಯಂತ್ರ ನಡೆಸಿದ್ದಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕೂಡಿಯೇ ಈ ಷಡ್ಯಂತ್ರ ನಡೆಸಿದ್ದು, ಅದು ನಡೆಯಲ್ಲ. ಅದಕ್ಕೆ ಬಿಜೆಪಿ ಅವಕಾಶ ಕೊಡಲ್ಲ ಎಂದರು.
ಬಿಜೆಪಿ ಸೇರುವ ಶಾಸಕರು, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಇಲ್ಲ. 5 ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ಸುಭದ್ರವಾದ ಆಡಳಿತವನ್ನು ರಾಜ್ಯದ ಜನತೆಗೆ ನೀಡಲಿದೆ. ಕೆಲ ಸಚಿವರು, ಶಾಸಕರು ಸಭೆ, ಸಮಾರಂಭಗಳಿಗೆ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋದರೆ ಅವರನ್ನು ಬೇರೆ ರೀತಿಯಲ್ಲಿ ಬಿಂಬಿಸುವುದನ್ನು ನಿಲ್ಲಿಸಬೇಕು.
● ಆರ್.ಶಂಕರ್, ಅರಣ್ಯ ಸಚಿವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.