ರವಿ ಬೆಳೆಗೆರೆ ಕನ್ನಡದ ಸನ್ನಿ ಲಿಯೋನ್! ಅಗ್ನಿ ಶ್ರೀಧರ್
Team Udayavani, Dec 11, 2017, 12:23 PM IST
ಬೆಂಗಳೂರು: ಪತ್ರಿಕೋದ್ಯಮದ ಪ್ರಾಥಮಿಕ ನೀತಿ ಮರೆತು ಬೆಳೆಗೆರೆ ಪತ್ರಿಕೆ ನಡೆಸುತ್ತಿದ್ದ. ಜನರಿಗೆ ಸೆಕ್ಸ್, ಕ್ರೈಂ ಬಗ್ಗೆ ಆಸಕ್ತಿ ಇರುತ್ತೆ ಅದನ್ನೇ ರವಿ ಬೆಳೆಗೆರೆ ಬಂಡವಾಳ ಮಾಡಿಕೊಂಡ. ರವಿ ಬೆಳೆಗೆರೆ ಕನ್ನಡದ ಸನ್ನಿ ಲಿಯೋನ್ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ವ್ಯಂಗ್ಯವಾಡಿದ್ದಾರೆ.
ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಪತ್ರಕರ್ತ ರವಿ ಬೆಳೆಗೆರೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಗ್ನಿ ಶ್ರೀಧರ್ ತಮ್ಮಿಬ್ಬರ ಸ್ನೇಹ ಸಂಬಂಧ ಹಳಸಲು ಕಾರಣ ಏನು ಎಂಬುದನ್ನು ವಿವರಿಸಿದರು.
ಒಂದು ಕಾಲದಲ್ಲಿ ಹಾಯ್ ಬೆಂಗಳೂರು 8 ಲಕ್ಷ ಪ್ರಸಾರ ಸಂಖ್ಯೆ ಹೊಂದಿತ್ತು. ಸೆಕ್ಸ್, ಕ್ರೈಂ ಅನ್ನೇ ವಿಜೃಂಬಿಸಿ ಪತ್ರಿಕೋದ್ಯಮ ನಡೆಸುತ್ತಿದ್ದ. ಅಷ್ಟೇ ಅಲ್ಲ ರೌಡಿಗಳ ನಡುವೆ ದ್ವೇಷ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದ. ಪತ್ರಿಕೋದ್ಯಮದ ಹೆಸರಿನಲ್ಲಿ ಬೆಳೆಗೆರೆ ಪಾತಕ ಜಗತ್ತು, ವೇಶ್ಯೆಯರು ಹೀಗೆ ಎಲ್ಲರನ್ನೂ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.