ಕೃಷಿ ಕ್ಷೇತ್ರಕ್ಕೆ ಸುಗ್ಗಿಕಾಲ

Team Udayavani, Jul 25, 2021, 5:33 PM IST

agriculture

ಕೊರೊನಾ ಎರಡೂ ಅಲೆಯ ಹಾವಳಿಯಿಂದ ಬಹುತೇಕ ಎಲ್ಲಕ್ಷೇತ್ರಗಳಿಗೆ ಪೆಟ್ಟು ಬಿದ್ದಿತು. ಆಯಾ ವರ್ಗಗಳು ತೀವ್ರ ಸಂಕಷ್ಟಎದುರಿಸಿದವು. ಇದರಿಂದ ಆ ಕ್ಷೇತ್ರಗಳ ಆಂತರಿಕ ವೃದ್ಧಿ ದರ ಪಾತಾಳಕ್ಕೆಕುಸಿಯಿತು.

ಈ ಸಂಕಷ್ಟದಲ್ಲೂ ಪ್ರಗತಿ ಸಾಧಿಸಿದ ಏಕೈಕ ಕ್ಷೇತ್ರ ಕೃಷಿ. ಇದಕ್ಕೆರೈತರ ಜತೆಗೆ ಕೃಷಿ ಇಲಾಖೆ ದೂರದೃಷ್ಟಿ ಮತ್ತು ಕಾರ್ಯಕ್ರಮಗಳುಕಾರಣ.ಲಾಕ್‌ಡೌನ್‌ ಸಂದರ್ಭದಲ್ಲಿ ರೈತರ ನೆರವಿಗಾಗಿ ಕೃಷಿ ಇಲಾಖೆ ವಾರ್‌ರೂಂ ಸ್ಥಾಪಿಸಿತು. ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು ನೀಡಿದ ಗ್ರೀನ್‌ಪಾಸ್‌, ಸ್ಥಳೀಯವಾಗಿ ನೇರ ಮಾರುಕಟ್ಟೆಗೆ ಅನುವು ಮಾಡಿಕೊಟ್ಟಿದ್ದು,

ಕೃಷಿ ಯಂತ್ರಧಾರೆ ಯೋಜನೆ ಇವೆಲ್ಲವೂ ಅನ್ನದಾತನ ಕೈಹಿಡಿಯಿತು.ಪರಿಣಾಮ ನೆರೆ ಮತ್ತು ಕೊರೊನಾ ಹಾವಳಿಗಳ ನಡುವೆಯೂ ಗುರಿಮೀರಿ ಆಹಾರ ಉತ್ಪಾದನೆ ಮಾಡಲು ಸಾಧ್ಯವಾಯಿತು. ಈ ಮೂಲಕದಾಖಲೆ ಕೃಷಿ ಇಲಾಖೆ ಬರೆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಮತ್ತುಕೃಷಿಯಲ್ಲಿ ತಂತ್ರಜ್ಞಾನದ ಸಮರ್ಪಕ ಮತ್ತು ಪರಿಣಾಮಕಾರಿ ಬಳಕೆಗೆ ಸರ್ಕಾರ ಕಾರ್ಯಕ್ರಮ ರೂಪಿಸಿದ್ದು, ಇಲಾಖೆ ಅದನ್ನು ಕ್ರಮಬದ್ಧವಾಗಿಅನುಷ್ಠಾನಗೊಳಿಸಲಿದೆ. ಕಳೆದೆರಡು ವರ್ಷಗಳಲ್ಲಿ ಕೃಷಿ ಇಲಾಖೆಕಾರ್ಯಕ್ರಮ ಮತ್ತು ಸಾಧನೆಯ ಸಮಗ್ರ ನೋಟ ಇಲ್ಲಿದೆ.

ಅಧಿಕ ಬಿತ್ತನೆ; ದಾಖಲೆಯ ಉತ್ಪಾದನೆ

ಕೊರೊನಾ ಸೋಂಕಿನ ಸಂದರ್ಭದಲ್ಲಿ ರಾಜ್ಯದಲ್ಲಿ ನಿರ್ದಿಷ್ಟ ಗುರಿಗಿಂತಲೂಹೆಚ್ಚು ಕೃಷಿ ಪ್ರದೇಶದಲ್ಲಿ ಬಿತ್ತನೆ ಕಾರ್ಯನಡೆದಿದ್ದು, ದಾಖಲೆಯಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡಲಾಗಿದೆ.2019-20ನೇ ಸಾಲಿನಲ್ಲಿ 113.67 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. 103.97 ಲಕ್ಷಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿತ್ತು. ಈ ಸಾಲಿನಲ್ಲಿ 138.67 ಲಕ್ಷಟನ್‌ ಆಹಾರ ಧಾನ್ಯಗಳ ಉತ್ಪಾದನಾ ಗುರಿ ಹೊಂದಲಾಗಿದ್ದು, ಈ ಪೈಕಿ136.41 ಲಕ್ಷಟನ್‌ ಉತ್ಪಾದನೆಯಾಗಿದೆ. 2020-21ನೇ ಸಾಲಿನಲ್ಲಿ110.00 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿಇಟ್ಟುಕೊಳ್ಳಲಾಗಿತ್ತು. ಅದಕ್ಕಿಂತಲೂ ಅಧಿಕ ಅಂದರೆ 111.41 ಲಕ್ಷ ಹೆಕ್ಟೇರ್‌ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಅಲ್ಲದೆ, ಇದೇ ಸಾಲಿನಲ್ಲಿ 133.04 ಲಕ್ಷಟನ್‌ ಆಹಾರಧಾನ್ಯಗಳ ಉತ್ಪಾದನಾ ಮಾಡಲಾಗಿದ್ದು, ಅಂತಿಮವಾಗಿದಾಖಲೆಯ 158.73 ಲಕ್ಷ ಟನ್‌ ಪ್ರಮಾಣದಲ್ಲಿ ಉತ್ಪಾದನೆಯಾಗಿದೆ. ಈಮೂಲಕ ಸೋಂಕಿನ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆಯಾವುದೇ ಹಿನ್ನಡೆಯಾಗದಂತೆ ಕೃಷಿ ಇಲಾಖೆ ಕ್ರಮವಹಿಸಿದೆ.

ಅನ್ನದಾತರ ನೆರವಿಗೆ ಅಗ್ರಿ ವಾರ್‌ ರೂಂ

ಕೊರೊನಾ-19ರ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೃಷಿ ಮತ್ತು ಕೃಷಿಸಂಬಂಧಿತ ಕ್ಷೇತ್ರಗಳಲ್ಲಿ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನಿವಾರಣೆಗೆ ಸಲಹೆ ನೀಡಲು ಮತ್ತು ಕೃಷಿ ಚಟುವಟಿಕೆಯನ್ನುಸುಗಮಗೊಳಿಸಲು ಪ್ರಮುಖ ಹೆಜ್ಜೆಯಾಗಿ ಕೃಷಿ ಇಲಾಖೆಯಆವರಣದಲ್ಲಿ “ಅಗ್ರಿ ವಾರ್‌ ರೂಂ’ ಅನ್ನು ಸ್ಥಾಪಿಸಲಾಯಿತು. ರೈತರಿಗೆ ದೂರವಾಣಿ ಮೂಲಕ ಮಾಹಿತಿ ಒದಗಿಸಲಾಗುತ್ತಿತ್ತು. ಇದರಿಂದ ಅವರುತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ನೆರವಾಗುತ್ತಿದೆ.ಇಂದಿಗೂ ಈ ವಾರ್‌ ರೂಂ ಕಾರ್ಯಾಚರಣೆಯಲ್ಲಿದೆ.ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳೂ ಕೂಡ ಅಗ್ರಿ ವಾರ್‌ ರೂಂ’ಪ್ರಾರಂಭಿಸಿ ಕೋವಿಡ್‌ ಸಂಕಟದ ಸಮಯದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ, ಸಲಹೆ ನೀಡಲು ಹಾಗೂ ಕ್ಷೇತ್ರ ಭೇಟಿಯ ಅಗತ್ಯಗಳಿಗೆಸ್ಪಂದಿಸಲು ನೆರವಾಗುತ್ತಿವೆ. ಸಂಪರ್ಕ ಮಾಹಿತಿ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಿವೆ. ರೈತರಲ್ಲಿ ಕೊರೊನಾಸೋಂಕಿನ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಬೀಜ,ನರ್ಸರಿಗಳ ಹಾಗೂ ಮಾರುಕಟ್ಟೆ ಮಾಹಿತಿ ಒದಗಿಸುತ್ತಿವೆ.

ಸಂಚಾರಕ್ಕೆ ಗ್ರೀನ್‌ ಪಾಸ್‌

ರಾಜ್ಯದಲ್ಲಿ ಕೊರೊನಾ ಕಟ್ಟುನಿಟ್ಟಿನ ಲಾಕ್‌ಡೌನ್‌ಜಾರಿಯಲ್ಲಿದ್ದ ಅವಧಿಯಲ್ಲಿ ಒಂದು ಕಡೆಯಿಂದಮತ್ತೂಂದು ಕಡೆಗೆ ವಾಹನ ಸಂಚಾರಕ್ಕೆ ಹಾಗೂಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಅನಾನುಕೂಲಆಗಬಾರದು, ಅವರು ಬೆಳೆದ ಕೃಷಿ ಉತ್ಪನ್ನಗಳಮಾರಾಟಕ್ಕೆ ಹಾಗೂ ಕೃಷಿ ಕಾರ್ಯಕ್ಕೆ ಯಾವುದೇತೊಂದರೆ ಆಗಬಾರದು ಎಂಬ ಉದ್ದೇಶದಿಂದರೈತರಿಗೆ ಕೃಷಿ ಇಲಾಖೆಯ ವತಿಯಿಂದ “ಗ್ರೀನ್‌ಪಾಸ್‌’ ವಿತರಣೆ ಮಾಡಲಾಗಿತ್ತು. ಕೃಷಿಸಾಮಗ್ರಿಗಳ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆಗೆಲಾಕ್‌ಡೌನ್‌ ನಿಂದ ಸಡಿಲಗೊಳಿಸಿ ಅನುಕೂಲಮಾಡಲಾಯಿತು.

ಸಂಚಾರ ಸಸ್ಯ ಆರೋಗ್ಯ ಚಿಕಿತ್ಸಾಲಯ

ಕೀಟ/ ರೋಗ ಮತ್ತು ಕಳೆಗಳ ಬಾಧೆ ಹಾಗುಮಣ್ಣಿನ ಪೋಷಕಾಂಶಗಳ ಕೊರತೆ ಮತ್ತುಸಮರ್ಪಕ ನಿರ್ವಹಣೆ ಕುರಿತಂತೆ ರೈತರತಾಕುಗಳಿಗೆ ಭೇಟಿ ನೀಡಿ ಹತೋಟಿ ಕ್ರಮಗಳಕುರಿತು ಮಾರ್ಗೋಪಾಯಗಳನ್ನು ಒದಗಿಸಲುರಾಜ್ಯ ಸರ್ಕಾರದ ವತಿಯಿಂದ 60 ಸಂಚಾರ ಸಸ್ಯಆರೋಗ್ಯ ಚಿಕಿತ್ಸಾಲಯಗಳನ್ನು (ಕೃಷಿ ಸಂಜೀವಿನಿವಾಹನ ಒಳಗೊಂಡಂತೆ) ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ 2020-21ನೇಸಾಲಿನಲ್ಲಿ 12.70 ಕೋಟಿ ವೆಚ್ಚ ರೂ. ಅನುದಾನ ನೀಡಲಾಗಿದೆ.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.