ಕೃಷಿ ಮೇಳ: ಮ್ಯಾಗಿ ಮಾಡುವಷ್ಟರಲ್ಲಿ ಕೇಕ್ ರೆಡಿ!
Team Udayavani, Nov 5, 2022, 12:14 PM IST
ಬೆಂಗಳೂರು: ಹೆಚ್ಚು-ಕಡಿಮೆ “ಮ್ಯಾಗಿ’ ಮಾಡುವಷ್ಟೇ ಸಮಯದಲ್ಲಿ ನೀವು ಕೇಕ್ ಮಾಡಬಹುದು (ಬೇಕಿಂಗ್‌ಗೆ ಹೆಚ್ಚುವರಿ 15 ನಿಮಿಷ ಬೇಕು). ಹೀಗೆ ನೀವು ತಯಾರಿಸಿದ ಕೇಕ್‌ನ ರುಚಿಯನ್ನೂ ನೀವು ಸವಿಯಬಹುದು!
ಇಲ್ಲಿನ ಹೆಬ್ಬಾಳದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ಬೇಕರಿ ತರಬೇತಿ ಕೇಂದ್ರವು ತನ್ನ ಮಳಿಗೆಯಲ್ಲಿ ಮೇಳಕ್ಕೆ ಬರುವವ ರಿಗೆ ಕೇಕ್ ತಯಾರಿಸುವುದರ ಜತೆಗೆ ಆ ಕೇಕ್ ಅನ್ನು ಸೇವನೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಮೇಳಕ್ಕೆ ಭೇಟಿ ನೀಡುವವರ ಪೈಕಿ ಹಲವರು ವಿಶೇಷವಾಗಿ ಯುವತಿಯರು ಮಳಿಗೆಗೆ ಭೇಟಿ ನೀಡಿ, “ಕೇಕ್ ಮೇಕಿಂಗ್ ಚಾಲೆಂಜ್’ಗೆ ಕೈಜೋಡಿಸಿ ತಾವು ತಯಾರಿಸಿದ ಕೇಕ್‌ನೊಂದಿಗೆ ಒಂದು ಸಿಹಿಯಾದ ಸೆಲ್ಫೀ ಪಡೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಕೇಕ್ ಅಲಂಕಾರಕ್ಕೆ ಜನ ಮುಗಿ ಬೀಳುತ್ತಿರುವುದು ಕಂಡುಬಂತು.
ಮೇಳದ ಎರಡನೇ ದಿನ ಆರಂಭವಾಗುತ್ತಿದ್ದಂತೆ ಕೇವಲ ಒಂದೂವರೆ ತಾಸಿನಲ್ಲಿ 35 ಜನ ಇದರಲ್ಲಿ ಭಾಗವಹಿಸಿದ್ದರು. ಸ್ಪಾಂಜ್ ಕಪ್ ಕೇಕ್ ತಯಾರಿಕೆಯಲ್ಲಿ ಭಾಗವಹಿಸಲು 30 ರೂ. ದರ ನಿಗದಿಪಡಿಸಲಾಗಿದ್ದು, ಹೀಗೆ ತಯಾರಿಸಿದ ಕೇಕ್ ಅನ್ನು ಜತೆಗೆ ಕೊಟ್ಟುಕಳುಹಿಸಲಾಗುತ್ತದೆ. ಅದೇ ರೀತಿ, ಕೋಕೋನಟ್ ಬಿಸ್ಕತ್ತು ತಯಾರಿಸಬಹುದು. ಇದಕ್ಕೆ 20 ರೂ. ಇದ್ದು, ಕೇಕ್ ಅಲಂ ಕಾರವನ್ನೂ ಮಾಡಬಹುದು. ಇದಕ್ಕೆ 50 ರೂ. ನಿಗದಿಪಡಿಸಲಾಗಿದೆ.
ಒಂದು ಕೇಕ್ ತಯಾರಿಸಲು ಅಬ್ಬಬ್ಟಾ ಎಂದರೆ 4 ರಿಂದ 5 ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಬೇಕಿಂಗ್‌ಗೆ ಕನಿಷ್ಠ 15 ನಿಮಿಷ ಹಿಡಿ ಯು ತ್ತ ದೆ ಎಂದು ಬೇಕರಿ ತರಬೇತಿ ಕೇಂದ್ರದ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ.ಸವಿತಾ ಮಂಗಾನವರ ಮಾಹಿತಿ ನೀಡಿದರು. ಕೇಂದ್ರದಲ್ಲಿ ವರ್ಷಪೂರ್ತಿ ವಿವಿಧ ಪ್ರಕಾರದ ಬೇಕರಿ ತಿನಿಸುಗಳ ತಯಾರಿಕೆ ತರಬೇತಿ ಕೂಡ ಇರುತ್ತದೆ. ದೀರ್ಘಾವಧಿ, ಅಲ್ಪಾವಧಿ, ಬೇಸಿಗೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿ ವಿಶೇಷ ಕೇಕ್‌ಗಳು, ಮೊಟ್ಟೆರಹಿತ ಬೇಕರಿ ಪದಾರ್ಥಗಳು, ರಾಗಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೌಲ್ಯವರ್ಧಿತ ಹಣ್ಣಿನ ಉತ್ಪನ್ನಗಳ ತಯಾರಿಕೆ ಮತ್ತಿತರ ತರಬೇತಿ ನೀಡಲಾಗುತ್ತದೆ ಎಂದು ಡಾ.ಸವಿತಾ ಮಂಗಾನವರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.