ಆಳ್ವಾಸ್ ಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ಪ್ರದಾನ
Team Udayavani, Nov 27, 2017, 11:56 AM IST
ಮೂಡಬಿದಿರೆ: ಆಳ್ವಾಸ್ ನುಡಿಸಿರಿ ಸಮ್ಮೇಳನದಂಗವಾಗಿ ಏರ್ಪಡಿಸಲಾದ ರಾಜ್ಯಮಟ್ಟದ ಆಳ್ವಾಸ್ ಚಿತ್ರಸಿರಿ,
ವ್ಯಂಗ್ಯಚಿತ್ರ ಸಿರಿ ಶಿಬಿರ ಹಾಗೂ ಛಾಯಾಚಿತ್ರಸಿರಿ ಸ್ಪರ್ಧೆಯ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ
ಪ್ರದಾನ ಮಾಡಲಾಯಿತು.
ಹಿರಿಯ ಛಾಯಾ ಚಿತ್ರಗ್ರಾಹಕ ಡಾ.ಓ.ಪಿ. ಶರ್ಮ ಅವರಿಗೆ “ಆಳ್ವಾಸ್ ಛಾಯಾಚಿತ್ರಸಿರಿ” ಪ್ರಶಸ್ತಿ, ಉಡುಪಿಯ
ರಮೇಶ್ ರಾವ್ ಅವರಿಗೆ “ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ಹಾಗೂ ಮಂಗಳೂರು ಮೂಲದ ವ್ಯಂಗ್ಯ ಚಿತ್ರಕಲಾವಿದ
ಪ್ರಕಾಶ್ ಶೆಟ್ಟಿ ಬೆಂಗಳೂರು ಅವರಿಗೆ “ವ್ಯಂಗ್ಯಚಿತ್ರಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುವಾರ
ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಪ್ರಶಸ್ತಿ ತಲಾ 25,000 ರೂ.ನಗದು, ಸನ್ಮಾನ ಫಲಕ ಒಳಗೊಂಡಿದೆ. ಮೂಡಬಿದಿರೆ ಜೈನಮಠದ ಶ್ರೀ ಚಾರು ಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನವಿತ್ತರು. ಈ ವೇಳೆ ಮಾತನಾಡಿದ ಮೋಹನ ಆಳ್ವ, ಮುಂದಿನ ವರ್ಷ ನುಡಿಸಿರಿಯ ಒಂದು ತಿಂಗಳ ಮೊದಲು ಶಿಲಾಶಿಲ್ಪ, ಕಾಷ್ಠ ಶಿಲ್ಪ ಶಿಬಿರ ಏರ್ಪಡಿಸಲಾಗುವುದು.
ಆಳ್ವಾಸ್ ಸಂಸ್ಥೆಯ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿರುವ ವ್ಯಂಗ್ಯ ಚಿತ್ರಸಿರಿಯನ್ನು ದಕ್ಷಿಣ ವಲಯ, ರಾಷ್ಟ್ರಮಟ್ಟದಲ್ಲಿ ಆಯೋಜಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಛಾಯಾಚಿತ್ರಸಿರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಶಿಬಿರದಲ್ಲಿ ಪಾಲ್ಗೊಂಡ ವ್ಯಂಗ್ಯ ಚಿತ್ರಕಾರರು ಹಾಗೂ ಚಿತ್ರ ಕಲಾವಿದರಿಗೆ ಪ್ರಮಾಣ ಪತ್ರ ತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.