ಕೈಕಮಾಂಡ್‌ ಸೂಚನೆಗೂ ಕ್ಯಾರೆ ಎನ್ನದ ಅಂಬಿ


Team Udayavani, Apr 10, 2018, 6:45 AM IST

Ambareesh-750.jpg

ಬೆಂಗಳೂರು: ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿಯನ್ನೂ ಹಾಕದೆ, ಸ್ಪರ್ಧೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಪಕ್ಷದ ನಾಯಕರು
ಸೂಚಿಸಿದ್ದರೂ ತಲೆಕೆಡಿಸಿಕೊಳ್ಳದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಂಬರೀಶ್‌, ಹಾಲಿ ಶಾಸಕರಿಗೆ ಟಿಕೆಟ್‌ ಕೊಡುವುದಾದರೆ ನನಗೂ ಕೊಡುತ್ತಾರೆಂಬ ಧೋರಣೆಯಲ್ಲಿದ್ದಾರೆ.

ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಅಂಬರೀಶ್‌ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ, ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಬೇಕೆಂದು ಪಕ್ಷ ಸೂಚಿಸಿದ್ದರೂ ಅಂಬರೀಶ್‌ ಮಾತ್ರ ಅರ್ಜಿ ಸಲ್ಲಿಸಿಲ್ಲ. ಈ ಮಧ್ಯೆ ಆರೋಗ್ಯದ ಕಾರಣದಿಂದಾಗಿ ಅಂಬರೀಶ್‌ ಸ್ಪರ್ಧಿಸುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್‌ ನಾಯಕರು ಕೇಳಿಕೊಂಡಿದ್ದರೂ ಮೌನ ಮುರಿದಿಲ್ಲ.

ಹಾಲಿ ಶಾಸಕರಿಗೆ ಟಿಕೆಟ್‌ ನೀಡಬೇಕೆಂದು ರಾಜ್ಯ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ನಾನು ಹಾಲಿ ಶಾಸಕ. ಹೀಗಾಗಿ ನನಗೆ ಟಿಕೆಟ್‌ ಸಿಗುತ್ತದೆಂದು ಅವರು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಾನು ಎಲ್ಲಿಯೂ ಮತ್ತು ಯಾರ ಬಳಿಯೂ ಹೇಳಿಲ್ಲ. ನನಗೆ ಟಿಕೆಟ್‌ ಕೊಡುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು. ಆದರೆ,ಮಾಧ್ಯಮಗಳಲ್ಲಿ ಏನೇನೋ ವರದಿಗಳು ಬರುತ್ತಿವೆ.ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಲ್ಲೇ ಇದ್ದಾರೆ: ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸದ ಕಾರಣ ಸ್ಪರ್ಧೆಯ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಲು ಅಂಬರೀಶ್‌
ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್‌ ಸೂಚಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರು ಬೆಂಗಳೂರಿನಲ್ಲೇ ಇದ್ದಾರೆ. ದೆಹಲಿಗೆ ಹೋಗಿಲ್ಲ. ಅಂತಹ ಯಾವುದೇ ಬುಲಾವ್‌ ಬಂದಿಲ್ಲ ಎಂದೂ ಅವರ ಆಪ್ತ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Rice-Distri

Padubidri: ಕೆವೈಸಿ ಸಮಸ್ಯೆಯಿಂದ ಪಡಿತರಕ್ಕೆ ಅಡಚಣೆ: ಸ್ಪಂದಿಸಿದ ಆಹಾರ ಇಲಾಖೆ

highcourt

145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ

1-wFH

Work from Home; ಇದು ಆಂಧ್ರ ಆಫ‌ರ್‌!

Rashimka

Remark Sparks: ನಾನು ಹೈದರಾಬಾದಿನವಳು ಎಂದ ರಶ್ಮಿಕಾಗೆ ನೆಟ್ಟಿಗರ ಕ್ಲಾಸ್‌

India US

India-US;ಭಾರತ ಚುನಾವಣೆಯಲ್ಲಿ ಅಮೆರಿಕದ ಹಸ್ತಕ್ಷೇಪ?

Telangana: ತೆಲಂಗಾಣದ ಗ್ರಾಮದ ಎಲ್ಲ ಜನರಿಂದ ನೇತ್ರದಾನಕ್ಕೆ ನೋಂದಣಿ

Telangana: ತೆಲಂಗಾಣದ ಗ್ರಾಮದ ಎಲ್ಲ ಜನರಿಂದ ನೇತ್ರದಾನಕ್ಕೆ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ 

highcourt

145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ

Exam 3

Fake markscard ಮಾರಾಟ ವಿನಾಶಕಾರಿ ಪರಿಣಾಮ ಬೀರಬಲ್ಲ ಅಪರಾಧ: ಕೋರ್ಟ್‌

KSRT

ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಎಳ್ಳು-ನೀರು?

1-frrr

BJP; ಈ ವಾರವೇ ರಾಜ್ಯ ಅಖಾಡಕ್ಕೆ ವರಿಷ್ಠರ ಪ್ರವೇಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ 

12

Ranji Trophy 2024-25: ಇಂದಿನಿಂದ ರಣಜಿ ಸೆಮಿಫೈನಲ್ಸ್‌

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Rice-Distri

Padubidri: ಕೆವೈಸಿ ಸಮಸ್ಯೆಯಿಂದ ಪಡಿತರಕ್ಕೆ ಅಡಚಣೆ: ಸ್ಪಂದಿಸಿದ ಆಹಾರ ಇಲಾಖೆ

18

Robbery Case: ಮೂಡುಬಿದಿರೆ ಅಳಿಯೂರು; ಹಾಡ ಹಗಲೇ ಚಿನ್ನಾಭರಣ ದರೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.