ಅಂಬರೀಶ್ ವೈಕುಂಠ ಸಮಾರಾಧನೆಯಲ್ಲಿ ಜನಸಾಗರ
Team Udayavani, Dec 6, 2018, 11:06 AM IST
ನಟ ಅಂಬರೀಶ್ ಅವರ ವೈಕುಂಠ ಸಮಾರಾಧನೆ ಮತ್ತು ಕೊನೆದಿನದ ಪುಣ್ಯತಿಥಿ ಕಾರ್ಯಕ್ರಮ ಬುಧವಾರ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಿತು. ಮಂಡ್ಯದಿಂದ ಅಭಿಮಾನಿಗಳು ತಂದಿದ್ದ ಅಂಬಿಯ ಇಷ್ಟದ ಭತ್ತ ಹಾಗೂ ಕಬ್ಬಿನ ಜಲ್ಲೆಯಯನ್ನು ಅಂಬರೀಶ್ ಭಾವಚಿತ್ರದ ಮುಂದಿಟ್ಟು ಪುತ್ರ ಅಭಿಷೇಕ್ ನಮನ ಸಲ್ಲಿಸಿದರು.
ಇದೇ ವೇಳೆ ಪತ್ನಿ ಸುಮಲತಾ ಅಂಬರೀಶ್, ನಟ ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಅಂಬರೀಶ್ ಕುಟುಂಬದವರು, ಆಪ್ತರು ಹಾಜರಿದ್ದರು. ಬಳಿಕ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟ ಪುನೀತ್ ರಾಜಕುಮಾರ್, ಪತ್ನಿ ಅಶ್ವಿನಿ, ತಮಿಳು ನಟ ಕಾರ್ತಿಕ್, ಕೋಕಿಲಾ ಮೋಹನ್, ನಟಿ ಡಾ. ಜಯಸುಧಾ, ಸಂಗೀತಾ, ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ಸಿ.ಆರ್ ಮನೋಹರ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು, ಅಭಿಮಾನಿಗಳು ಪಾಲ್ಗೊಂಡು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪೂಜೆಯ ನಂತರ 7 ರಿಂದ 8 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯ ಶೈಲಿಯ ರಾಗಿ ಮುದ್ದೆ, ಕಾಳು ಗೊಜ್ಜು, ಹಲಸಿನ ಕಾಯಿ ಗೊಜ್ಜು, ಪೂರಿ, ತರಕಾರಿ ಸಾಗು, ಕೊಸಂಬರಿ, ಕಾರ್ನ್ ಮಸಾಲಾ, ಬೆಂಡೆಕಾಯಿ ಫ್ರೈ, ಆಲೂ ಫ್ರೈ, ವೆಜ್ ಧಮ್ ಬಿರಿಯಾನಿ, ರಾಯ್ತಾ, ಸ್ಪೆಶಲ್ ಮೈಸೂರು ಪಾಕ್, ಗೋಧಿ ಖೀರು, ಬೆಲ್ಲದ ಕಡುಬು, ಅನ್ನ ಸಾಂಬಾರ್, ರಸಂ, ಮೊದಲಾದ ಪದಾರ್ಥಗಳಿದ್ದ ಶುದ್ಧ ಸಸ್ಯಹಾರಿ ಊಟ ತಯಾರಿಸಲಾಗಿತ್ತು. ಮಧ್ಯಾಹ್ನ 12ಕ್ಕೆ ಶುರುವಾದ ಭೋಜನ ಕಾರ್ಯಕ್ರಮ ಸಂಜೆ 4ರವರೆಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.