ಅಂಬೇಡ್ಕರ್ ಸಮಾವೇಶಕ್ಕೆ ಇಂದು ತೆರೆ
Team Udayavani, Jul 23, 2017, 11:20 AM IST
ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸಿರುವ ಮೂರು ದಿನಗಳ “ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶ’ಕ್ಕೆ ಭಾನುವಾರ (ಜು.23) ತೆರೆ ಬೀಳಲಿದೆ. ಮುಖ್ಯ ವೇದಿಕೆ ಕಾರ್ಯಕ್ರಮ, 35ಕ್ಕೂ ಹೆಚ್ಚು ಸಮಾನಂತರ ಗೋಷ್ಠಿಗಳು, ಮುಖ್ಯಮಂತ್ರಿಯವರೊಂದಿಗೆ ಸಂವಾದ ಮತ್ತು ಸಮಾರೋಪ ಕಾರ್ಯಕ್ರಮದ ಮೂಲಕ ಅಂತರರಾಷ್ಟ್ರೀಯ ಸಮಾವೇಶ ಕೊನೆಗೊಳ್ಳಲಿದೆ.
ಇದರಲ್ಲಿ ಪ್ರಮುಖವಾಗಿ ಬೆಳಿಗ್ಗೆ 9.30ಕ್ಕೆ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಶಶಿ ತರೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಬಿ-3 ವೇದಿಕೆಯಲ್ಲಿ “ಅಂಬೇಡ್ಕರ್, ಸಾಮಾಜಿಕ ನ್ಯಾಯ ಮತ್ತು ಕರ್ನಾಟಕದ ಸಾಮಾಜಿಕ ಚಳವಳಿಗಳು’ ಕುರಿತು ನಡೆಯುವ ಗೋಷ್ಠಿಯಲ್ಲಿ ಬರಗೂರು ರಾಮಚಂದ್ರಪ್ಪ, ಅರವಿಂದ ಮಾಲಗತ್ತಿ, ದಿನೇಶ್ ಅಮಿನ್‌ಮಟ್ಟು, ಮುಜಫರ್ ಅಸಾದಿ, ಎನ್.ಎಸ್. ಶಂಕರ್, ಶಿವರುದ್ರ ಕಲ್ಲೋಳಿಕರ ವಿಷಯ ಮಂಡಿಸಲಿದ್ದು, ಡಾ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿಲಿದ್ದಾರೆ.
ಅದೇ ರೀತಿ ಮಧ್ಯಾಹ್ನ 11.15ರಿಂದ 12.45ರವರೆಗೆ ಬಿ-6 ವೇದಿಕೆಯಲ್ಲಿ ನಡೆಯುವ “ವಿಚಾರವಂತ ಕರ್ನಾಟಕದ ನಿರ್ಮಾಣ-ಚಿಂತನೆ, ಸಂಘಟನೆ ಮತ್ತು ಹೋರಾಟ’ ಗೋಷ್ಠಿಯಲ್ಲಿ ಬಿ. ಗಂಗಾಧರಮೂರ್ತಿ, ಅನುಸೊಯಮ್ಮ, ಮಂಗ್ಳೂರು ವಿಜಯ, ಶೂದ್ರ ಶ್ರೀನಿವಾಸ, ಅನಂತನಾಯಕ್ ಮತ್ತಿತರರು ವಿಷಯ ಮಂಡಿಸಲಿದ್ದು, ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. “ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ: ಕರ್ನಾಟಕದ ಅನುಭವ’ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ರವಿವರ್ಮಾಕುಮಾರ್ ವಹಿಸಲಿದ್ದಾರೆ.
ಸಿಎಂ ಜತೆ ಸಂವಾದ: ಇದೇ ವೇಳೆ ಸಂಜೆ 3.45ರಿಂದ 5.15 ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ನಡೆಯಲಿದೆ. ವಿಮರ್ಶಕ ರಾಜೇಂದ್ರ ಚೆನ್ನಿ ಸಂವಾದ ನಡೆಸಿಕೊಡಲಿದ್ದು, ಎಸ್. ಜಾಫೆಟ್, ವೆಲೆರಿಯನ್ ರೂಡ್ರಿಗಸ್, ಕೆ. ನೀಲಾ, ಡಿ. ಉಮಾಪತಿ, ಕೆ.ಬಿ. ಸಿದ್ದಯ್ಯ, ನಟರಾಜ ಹುಳಿಯಾರ, ಬೊಳವಾರು ಮಹ್ಮದ್ ಕುಂಇ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.45ಕ್ಕೆ ಆರಂಭವಾಗಲಿರುವ ಮುಕ್ತಾಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಸಮಾರೋಪ ಭಾಷಣ ಮಾಡಲಿದ್ದು, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮತ್ತಿತರರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.