ಹೊಸ ಮನೆ ಪ್ರವೇಶಿಸಿದ ಅಂಬಿ ಕುಟುಂಬ
Team Udayavani, May 18, 2019, 3:05 AM IST
ಬೆಂಗಳೂರು: ನಟ ಅಂಬರೀಶ್ ಅವರ ಮನೆಯ ನವೀಕರಣ ಕೆಲಸಗಳು ಪೂರ್ಣಗೊಂಡಿದ್ದು, ಶುಕ್ರವಾರ ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಮತ್ತು ಕುಟುಂಬ ಸದಸ್ಯರು ಶಾಸ್ತ್ರೋಕ್ತವಾಗಿ ಸರಳ ಪೂಜೆ ನೆರವೇರಿಸುವ ಮೂಲಕ ಗೃಹ ಪ್ರವೇಶ ಮಾಡಿದರು.
ಅಂಬರೀಶ್ ಬದುಕಿದ್ದಾಗಲೇ ಜೆ.ಪಿ. ನಗರದಲ್ಲಿದ್ದ ಅವರ ಮನೆಯ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಮನೆಯ ನಿರ್ಮಾಣ ಕೆಲಸಗಳು ಮುಗಿಯುವ ತನಕ ಬೇರೆಡೆ ಅಂಬಿ ಕುಟುಂಬ ಸ್ಥಳಾಂತರಗೊಂಡಿತ್ತು. ಇದೀಗ ಮನೆಯ ಕೆಲಸಗಳು ಪೂರ್ಣಗೊಂಡಿದ್ದು, ಗೃಹ ಪ್ರವೇಶ ನೆರವೇರಿಸಲಾಗಿದೆ. ಸರಳವಾಗಿ ನಡೆದ ಅಂಬರೀಶ್ ಕನಸಿನ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದರು.
ಅಂದಹಾಗೆ, ಸುಮಾರು 29 ವರ್ಷಗಳಿಂದ ಅಂಬಿ ಕುಟುಂಬ ಜೆ.ಪಿ. ನಗರದ ಮನೆಯಲ್ಲಿ ವಾಸವಿದ್ದು, ಅಂಬರೀಶ್ ತಮ್ಮ ಕನಸಿನಂತೆ ಮನೆಯನ್ನ ನವೀಕರಣ ಮಾಡಿಸಿ, ತಮ್ಮ ಕೊನೆಯ ದಿನಗಳನ್ನು ಹೊಸ ಮನೆಯಲ್ಲಿ ಕಳೆಯಬೇಕೆಂಬ ಆಸೆ ಹೊಂದಿದ್ದರು.
ಆದರೆ ದುರಾದೃಷ್ಟವಶಾತ್ ತಮ್ಮ ಕನಸಿನ ಮನೆಯ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಅಂಬರೀಶ್ ನಿಧನರಾದರು. ಇನ್ನು ಕಳೆದ ಮೂರು ತಿಂಗಳಿನಿಂದ ಮಂಡ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದ ಸುಮಲತಾ, ಎಲೆಕ್ಷನ್ ಮುಗಿಯುತ್ತಿದ್ದಂತೆ ತಮ್ಮ ಮನೆಯ ಕಡೆ ಗಮನ ಹರಿಸಿದ್ದಾರೆ. ಪತಿಯ ಆಸೆಯಂತೆ ಮನೆಗೆ ಹೊಸ ರೂಪ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.