ಗೊಂದಲಗಳ ನಡುವೆಯೇ ಮುಂದುವರಿದ ಆರ್‌ಟಿಇ
Team Udayavani, Mar 4, 2017, 12:21 PM IST
ಬೆಂಗಳೂರು: ಆರ್‌ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ನಾಲ್ಕುದಿನಗಳಾದರೂ ಕೆಲ ಗೊಂದಲಗಳು ಮುಂದುವರೆದಿವೆ. ಇದರ ನಡುವೆಯೇ ಶಿಕ್ಷಣ ಇಲಾಖೆ ಶುಕ್ರವಾರದವರೆಗೆ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಹೇಳಿದೆ. ಶುಕ್ರವಾರ 3,162 ಅರ್ಜಿಗಳು ಬಂದಿದ್ದು, ಈ ಹಿಂದಿನ ದಿನಗಳಲ್ಲಿ ಉಳಿದ ಅರ್ಜಿಗಳು ಸಲ್ಲಿಕೆಯಾಗಿವೆ. ಶುಕ್ರವಾರ ರಾತ್ರಿ 8ರವರೆಗೆ ಒಟ್ಟಾರೆ 6,127 ಅರ್ಜಿಗಳು ಬಂದಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಅರ್ಜಿ ಸಲ್ಲಿಕೆಯಲ್ಲಿ ಗೊಂದಲಗಳು ಮುಂದುವರೆದಿದ್ದು, ಕೆಲವೆಡೆ ಮಗು ಮತ್ತು ಪೋಷಕರ ವಿಳಾಸ ಒಂದೇ ಇದ್ದರೂ ವೆಬ್‌ಸೈಟ್ ಅರ್ಜಿ ಸ್ವೀಕರಿಸುತ್ತಿಲ್ಲ. ವಿಳಾಸ ಸರಿಹೊಂದುತ್ತಿಲ್ಲ ಎಂಬ ಮಾಹಿತಿ ಬರುತ್ತಿದೆ ಎಂದು ರಾಜಾಜಿನಗರ 5ನೇ ಬ್ಲಾಕ್, 6ನೇ ಕ್ರಾಸ್‌ನ ಕೆಲ ನಿವಾಸಿಗಳು ದೂರಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಮೊದಲು ಬ್ಲಾಕ್, ನಂತರ ಕ್ರಾಸ್ ನಮೂದಾಗಿದ್ದರೆ, ವೆಬ್‌ಸೈಟ್‌ನಲ್ಲಿ ಮೊದಲು ಕ್ರಾಸ್, ನಂತರ ಬ್ಲಾಕ್ ನಮೂದಾಗಿದೆ.
ಇದರಿಂದ ಈ ಸಮಸ್ಯೆ ಆಗುತ್ತಿರಬಹುದು. ಆದರೆ, ಸಮಸ್ಯೆ ಬಗ್ಗೆ ಇಲಾಖೆ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದರೆ ಯಾವುದೇ ಪರಿಹಾರಾತ್ಮಕ ಪ್ರತಿಕ್ರಿಯೆ ಬರುತ್ತಿಲ್ಲ. ಇಲಾಖೆ
ಕನಿಷ್ಠ ಸಹಾಯವಾಣಿಯನ್ನಾದರೂ ಆರಂಭಿಸಿದ್ದರೆ ಅರ್ಜಿ ಸಲ್ಲಿಸುವಾಗ ಸ್ಥಳದಲ್ಲೇ ಕರೆ ಮಾಡಿ ಸಮಸ್ಯೆ ತಿಳಿಸಿ ಪರಿಹಾರ ಪಡೆಯುವ ಪ್ರಯತ್ನ ಮಾಡಬಹುದಿತ್ತು. ಈಗಲಾದರೂ ಇಲಾಖೆ ಸಹಾಯವಾಣಿ ಆರಂಭಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ.
ಶಾಲೆಗಳ ಹೆಸರು ಮಾಯ
ಇಲಾಖೆ ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಸಲು ನೀಡಿದ ಅವಕಾಶದ ವೇಳೆ ಇದ್ದ ಶಾಲೆಗಳ ಪಟ್ಟಿ, ಕೆಲ ವಾರ್ಡುಗಳಲ್ಲಿ ಈಗ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಉದಾಹರಣೆಗೆ ಬಾಗಲಗುಂಟೆ ವಾರ್ಡ್ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಅರ್ಜಿ ಸಲ್ಲಿಕೆ ವೇಳೆ ಸುಮಾರು 15 ಶಾಲೆಗಳ ಪಟ್ಟಿ ಸಿಗುತ್ತಿತ್ತು. ಆದರೆ, ನೈಜ ಅರ್ಜಿ ಸಲ್ಲಿಕೆ ಆರಂಭವಾದ ಮೇಲೆ ಶಾಲೆಗಳ ಸಂಖ್ಯೆ 5ಕ್ಕೆ ಕುಸಿದಿದೆ ಎಂದು ಆ ಭಾಗದ ಪೋಷಕರಿಂದ ದೂರುಗಳು ಕೇಳಿಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.