ಬಹಿಷ್ಕಾರದ ಬೆದರಿಕೆ ನಡುವೆ ಇಂದು ಮೇಯರ್‌ ಅಭ್ಯರ್ಥಿ ಆಯ್ಕೆ


Team Udayavani, Sep 27, 2017, 11:50 AM IST

bbmp2.jpg

ಬೆಂಗಳೂರು: ಬಿಬಿಎಂಪಿ ಮೇಯರ್‌ ಆಯ್ಕೆ ಕುರಿತು ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಕುರಿತು ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಾರ್ಪೊರೇಟರ್ಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ದರಾಗಿರುವಂತೆ ಎಲ್ಲರಿಗೂ ಸೂಚಿಸಿದ್ದಾರೆ. 

ಮೇಯರ್‌ ಅಭ್ಯರ್ಥಿ ಆಯ್ಕೆ ಸಂಬಂಧ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್‌ ನೇತೃತ್ವದಲ್ಲಿ ಅಂತಿಮ ಸಭೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಮೇಯರ್‌ ಆಕಾಂಕ್ಷಿಗಳ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಮೇಯರ್‌ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಯ ನಂತರ ಯಾವುದೇ ಆಕಾಂಕ್ಷಿಯೂ ಅಪಸ್ವರ ಎತ್ತಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಮುಖವಾಗಿ ದೇವರ ಜೀವನಹಳ್ಳಿ ವಾರ್ಡ್‌ನ ಕಾರ್ಪೊರೇಟರ್‌ ಸಂಪತ್‌ ರಾಜ್‌, ಸುಭಾಷ್‌ ನಗರ ವಾರ್ಡ್‌ ಗೋವಿಂದರಾಜ್‌, ಲಕ್ಷ್ಮೀದೇವಿ ನಗರ ವಾರ್ಡ್‌ನ ವೇಲುನಾಯಕರ್‌ ಹೆಸರುಗಳು ಮುಂಚೂಣಿಯಲ್ಲಿವೆ. ಮಂಗಳವಾರ ನಡೆದ ಸಭೆಯಲ್ಲಿ ನಾಯಕರ ತೀರ್ಮಾನಕ್ಕೆ ಬದ್ದವಾಗಿರುವುದಾಗಿ ಎಲ್ಲ ಆಕಾಂಕ್ಷಿಗಳು ಹೇಳಿರುವುದರಿಂದ ಬುಧವಾರದ ಸಭೆ ಮಹತ್ವ ಪಡೆದುಕೊಂಡಿದೆ.

ಬಹಿಷ್ಕಾರದ ಬೆದರಿಕೆ?:  ಈ ಮಧ್ಯೆ, ಬೆಂಗಳೂರು ಹೊರ ವಲಯದ ಭಾಗದ ಕಾರ್ಪೊರೇಟರ್‌ಗಳಿಗೆ ಮೇಯರ್‌ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಹೆಚ್ಚು ಮಹತ್ವ ಬಂದಿದ್ದು, ಹೊರ ವಲಯದ ವಾರ್ಡ್‌ಗಳಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‌ಗೆ ಮೇಯರ ಸ್ಥಾನ ನೀಡದಿದ್ದರೆ, ಸೆಪ್ಟಂಬರ್‌ 28 ರಂದು ನಡೆಯುವ ಮೇಯರ್‌ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸಂಸದ ಡಿ.ಕೆ. ಸುರೇಶ್‌, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಹಾಗೂ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 

ಬಿಬಿಎಂಪಿ ಆದ ಮೇಲೆ ಬೆಂಗಳೂರಿನ ವ್ಯಾಪ್ತಿ ವಿಸ್ತಾರವಾಗಿದ್ದು, ಆರು ವಿಧಾನಸಭಾ ಕ್ಷೇತ್ರಗಳು ಬೆಂಗಳೂರಿನ ಹೊರ ವಲಯದಲ್ಲಿ ಬರುತ್ತಿದ್ದು, ಸುಮಾರು 40 ಲಕ್ಷ ಜನ ಹೊರ ವಲಯದ ಕ್ಷೇತ್ರಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಹೊರ ವಲಯದ ಕ್ಷೇತ್ರಗಳಲ್ಲಿ ಸಾಕಷ್ಟು ಮೂಲ ಸೌಕರ್ಯದ ಕೊರತೆ ಇರುವುದರಿಂದ ಮೀಸಲಾತಿ ಪ್ರಕಾರ ಅರ್ಹರಿರುವ ಯಾವುದಾದರೂ ವಾರ್ಡ್‌ನ ಸದಸ್ಯರಿಗೆ ನೀಡಬೇಕೆನ್ನುವುದು ಇವರ ಬೇಡಿಕೆ. ತಮ್ಮ ಬೇಡಿಕೆಗೆ ನಾಯಕರು ಸ್ಪಂದಿಸದಿದ್ದರೆ, ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

3/5 ಭಾಗಗಳಲ್ಲಿ ವಿಭಜನೆ: ಸಿಎಂ ಸುಳಿವು
ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ “ವಿಭಜನೆ’ ವಿಷಯಕ್ಕೆ ಮತ್ತೆ ಜೀವ ನೀಡಿರುವ ಸಿಎಂ ಸಿದ್ದರಾಮಯ್ಯ, “ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜಿಸುವ ಚಿಂತನೆಯಿದೆ,’ ಎಂದು ಮತ್ತೂಮ್ಮೆ ಹೇಳಿದ್ದಾರೆ. ಶಂಕರಮಠ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಬಿಬಿಎಂಪಿಯಲ್ಲಿ ಸದ್ಯ 198 ವಾರ್ಡ್‌ಗಳಿವೆ. ಇದಕ್ಕೆ 110 ಹಳ್ಳಿಗಳು ಹೊಸದಾಗಿ ಸೇರಿವೆ. ಮೇಲಾಗಿ, ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಒಂದೇ ಪಾಲಿಕೆಯಿಂದ ಇಷ್ಟೊಂದು ದೊಡ್ಡ ಆಡಳಿತ ವ್ಯವಸ್ಥೆಯ ನಿರ್ವಹಣೆ ಸಾಧ್ಯವಿಲ್ಲ. ಕೇವಲ ಆಡಳಿತಾ ತ್ಮಕ ದೃಷ್ಟಿಯಿಂದ ಮಾತ್ರ ಬಿಬಿಎಂಪಿಯನ್ನು 3 ಅಥವಾ 5 ಭಾಗಗಳಲ್ಲಿ ವಿಂಗಡಿಸುವ ಚಿಂತನೆಯಿದೆ. 

ಓಟಿಗಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಬಿಬಿಎಂಪಿ ವಿಭಜನೆ ಮಾಡಲಾಗುತ್ತಿದೆ ಎಂಬುದು ಸರಿಯಲ್ಲ. ಪ್ರಾಯೋಗಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ, ಸಿದ್ದರಾಮಯ್ಯ, “ಮುಂದಿನ ಬಾರಿಯೂ ಪಾಲಿಕೆಯಲ್ಲಿ ಜನ ನಮಗೇ ಆಶಿರ್ವಾದ ಮಾಡಲಿದ್ದಾರೆ’ ಎಂದು ಹೇಳುವ ಮೂಲಕ “ಬಿಬಿಎಂಪಿ ವಿಭಜನೆ’ ವಿಚಾರ ಜೀವಂತವಾಗಿರಲಿದೆ ಎಂಬ ಮುನ್ಸೂಚನೆ ನೀಡಿದರು. 

ಟಾಪ್ ನ್ಯೂಸ್

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

1-kushtagi

Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.