ಆ್ಯಂಬುಲೆನ್ಸ್ನಲ್ಲಿ ಲೋಕ ಅದಾಲತ್ಗೆ ಬಂದ ವೃದ್ಧೆ
Team Udayavani, Jul 9, 2023, 11:00 AM IST
ಬೆಂಗಳೂರು: ಬರೋಬ್ಬರಿ 14 ವರ್ಷದ ಹಿಂದಿನ ಭೂ ವ್ಯಾಜ್ಯವೊಂದರಲ್ಲಿ 74 ವರ್ಷದ ವೃದ್ಧೆ ಆ್ಯಂಬುಲೆನ್ಸ್ನಲ್ಲಿ ಶನಿವಾರ ಹೈಕೋರ್ಟ್ಗೆ ಬಂದು ಲೋಕ್ ಅದಾಲತ್ ಮೂಲಕ ಪ್ರಕರಣವನ್ನು ರಾಜಿ ಇತ್ಯರ್ಥಪಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೋಳರಾಮನಹಳ್ಳಿ ಗ್ರಾಮದ ಲಲಿತಮ್ಮ (74) ಮತ್ತು ಅವರ ಸಂಬಂಧಿಗಳ ನಡುವೆ ಭೂ ವ್ಯಾಜ್ಯ 2009ರಿಂದ ಬಾಕಿ ಇತ್ತು. ಆ ಕುರಿತು ಹಲವು ಸುತ್ತಿನ ವ್ಯಾಜ್ಯಗಳು ನಡೆದು ಕೊನೆಗೆ 2020ರಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿ ಉಳಿದಿತ್ತು. ಆ ಪ್ರಕರಣವನ್ನು ಶನಿವಾರ ಲೋಕ್ ಅದಾಲತ್ ಮುಂದೆ ಇಡಲಾಗಿತ್ತು. ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ನ್ಯಾಯಪೀಠ, ಆ್ಯಂಬುಲೆನ್ಸ್ನಲ್ಲಿ ಬಂದ ಲಲಿತಮ್ಮ ಅವರು ಹಾಗೂ ಪ್ರತಿವಾದಿಗಳ ಒಪ್ಪಿಗೆ ಮೇರೆಗೆ ಪ್ರಕರಣವನ್ನು ಇತ್ಯರ್ಥಪಡಿಸಿ, ಲಲಿತಮ್ಮಗೆ ಭೂಮಿ ಸಿಗುವಂತೆ ಆದೇಶ ನೀಡಿತು.
ಪ್ರಕರಣದ ವಿಚಾರಣೆಗೆ ವರ್ಚುವಲ್ ಮೂಲಕ ಹಾಜರಾಗಲು ಲಲಿತಮ್ಮಗೆ ನ್ಯಾಯಾಲಯ ಅವಕಾಶ ನೀಡಿದ್ದರೂ, “ನಾನೇ ಖುದ್ದಾಗಿ ಹಾಜರಾಗುತ್ತೇನೆ’ ಎಂದು ಅನಾರೋಗ್ಯದ ನಡುವೆಯೇ ಆ್ಯಂಬುಲೆನ್ಸ್ನಲ್ಲಿ ಹೈಕೋರ್ಟ್ಗೆ ಆಗಮಿಸಿದ್ದರು. ಆಗ ನ್ಯಾಯಮೂರ್ತಿಗಳು ಸ್ವತಃ ಆ್ಯಂಬುಲೆನ್ಸ್ ಬಳಿಗೆ ತೆರಳಿ ವೃದ್ಧೆಯ ಮಾತು ಆಲಿಸಿ, ಆಕೆಯ ಸಮ್ಮತಿಯೊಂದಿಗೆ ಪ್ರಕರಣ ವಿಲೇವಾರಿ ಮಾಡಲು ಆದೇಶಿಸಿದರು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ಯರ್ಥಕ್ಕಾಗಿ 20 ಲಕ್ಷ ಪ್ರಕರಣ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತ ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ಬೃಹತ್ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ನ್ಯಾಯಾಲಯದಲ್ಲಿದ್ದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಸಾವಿರಾರು ಪ್ರಕರಣಗಳು ಫಟಾ ಫಟ್ ವಿಲೇವಾರಿಯಾದವು. ಜಿಲ್ಲೆಗಳಿಂದ ವಿಲೇವಾರಿ ಯಾಗಿರುವ ಪ್ರಕರಣಗಳ ಮಾಹಿತಿ ಲಭ್ಯವಾದ ನಂತರ ಸೋಮವಾರ ಇತ್ಯರ್ಥವಾಗಿರುವ ಕೇಸುಗಳ ಸಂಪೂರ್ಣ ಮಾಹಿತಿಯನ್ನು ನೀಡುವು ದಾಗಿ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ. ಅದಾಲತ್ ಗಾಗಿ ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ವಿಶೇಷ ಪೀಠಗಳನ್ನು ರಚನೆ ಮಾಡಲಾಗಿತ್ತು. ಅದಾಲತ್ನಲ್ಲಿ ಇತ್ಯರ್ಥಕ್ಕಾಗಿ 20 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.