ಅರ್ಕಾವತಿ ಉಳಿವಿಗೆ ಪಾದಯಾತ್ರೆ ನಡೆಸಿದ್ದ ಅನಂತ್
Team Udayavani, Nov 13, 2018, 12:00 PM IST
ಯಲಹಂಕ: ಅರ್ಕಾವತಿ ನದಿ ಉಳಿವಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 2009ರಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಅನಂತಕುಮಾರ್, ಸಾವಿರಾರು ಯುವಕರಿಗೆ, ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದರು. ಅರ್ಕಾವತಿ ನದಿ ಉಳಿವು ಹಾಗೂ ಹೂಳು ತುಂಬಿ ಮುಚ್ಚಿಹೋಗಿದ್ದ ಕಾಲುವೆಗಳ ತೆರವಿಗಾಗಿ ಸರ್ಕಾರದ ಗಮನ ಸೆಳೆಯಲು 2009 ಸೆಪ್ಟೆಂಬರ್ 3ರಂದು ಹಮ್ಮಿಕೊಂಡಿದ್ದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್, ದಾಸರಹಳ್ಳಿ ಶಾಸಕರಾಗಿದ್ದ ಎಸ್.ಮುನಿರಾಜು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಭಾಗವಹಿಸಿದ್ದ ಪಾದಯಾತ್ರೆಯ ಮುಂಚುಣಿಯಲ್ಲಿ ನಿಂತಿದ್ದವರು ಅನಂತಕುಮಾರ್. ದೊಡ್ಡಬಳ್ಳಾಪುರದ ನಂದಿಬೆಟ್ಟದಿಂದ ಹೆಸರಘಟ್ಟ ಕೆರೆ ಮಾರ್ಗವಾಗಿ ತಿಪ್ಪಗೊಂಡನಹಳ್ಳಿವರೆಗೆ ನಡೆದ ಸುಮಾರು 8 ಕೀ.ಮೀ ಪಾದಯಾತ್ರೆಯಲ್ಲಿ “ಹರಿಯಲಿ ಹರಿಯಲಿ ಅರ್ಕಾವತಿ ಹರಿಯಲಿ’,
“ಅರ್ಕಾವತಿ ನದಿ ಪುನಶ್ಚೇತನ ಶೀಘ್ರವೇ ಆಗಲಿ’, “ಬೇಕೇ ಬೇಕು ಅರ್ಕಾವತಿ ಬೇಕು’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಅನಂತಕುಮಾರ್ ಅವರು ಸಾವಿರಾರು ಪಾದಯಾತ್ರಿಗಳನ್ನು ಉತ್ತೇಜಿಸಿದ್ದರು ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿಬ್ಬೂರು ಜಯಣ್ಣ ಹಾಗೂ ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಎನ್.ರಾಜಣ್ಣ ಸ್ಮರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.