ಅದಮ್ಯ ಚೇತನದಲ್ಲಿ ಅನಂತ ಕಾಯಕ


Team Udayavani, Nov 13, 2018, 12:00 PM IST

adamya.jpg

ಬೆಂಗಳೂರು: ಅಲ್ಲಿ ಎಂದಿನಂತೆ “ಅನಂತ ಕಾಯಕ’ ಸಾಗಿತ್ತು. ಸೂರ್ಯೋದಯವಾಗುವ ಮೊದಲೇ ಶಾಲಾ ಮಕ್ಕಳಿಗೆ ಊಟ ಅಣಿಮಾಡುವ ಕೆಲಸ ನಡೆದಿತ್ತು. ಮುಂಜಾನೆ ಹತ್ತರ ಸಮಯದಲ್ಲೇ ಸುಮಾರು 33,450 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧವಾಗಿ ಅಕ್ಷಯ ಪಾತ್ರೆ ಸೇರಿತ್ತು. ಎಂದಿನಂತೆ “ಲವಲವಿಕೆ’ ವಾತವರಣ ಅಲ್ಲಿತ್ತು.

-ಇದು ಗವಿಪುರಂ ಗುಟ್ಟಹಳ್ಳಿಯ “ಅದಮ್ಯ ಚೇತನ’ ಕಚೇರಿ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ಕಂಡು ಬಂದ ದೃಶ್ಯ. ಕೇಂದ್ರ ಸಚಿವ ಅನಂತಕುಮಾರ್‌ ಅವರು, ತಾಯಿ ಗಿರಿಜಾ ಶಾಸಿ ಅವರ ಸ್ಮರಣಾರ್ಥ ಸ್ಥಾಪಿಸಿದ ಅದಮ್ಯ ಚೇತನ ಸಂಸ್ಥೆಯ ಬೆಂಗಳೂರು ಶಾಖೆಯಲ್ಲಿ, ಅನಂತಕುಮಾರ್‌ ಅವರ ಸಾವು, ಅನ್ನದಾಸೋಹಕ್ಕೆ ಅಡ್ಡಿಯಾಗಲೇ ಇಲ್ಲ. ಅವರ ನಿಧನದ ಸಣ್ಣ ಸುಳಿವು ಕೂಡ ಅಲ್ಲಿ ಸುಳಿಯಲಿಲ್ಲ.

ಅದಮ್ಯ ಚೇನತದ ಕಟ್ಟಡದ ಮುಂಬಾಗಿಲ ಬಳಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ ದೊಡ್ಡ ಪೋಟೋ ಬಿಟ್ಟರೆ ಎಂದಿನಂತೆ ಕೆಲಸ ಸಾಗಿತ್ತು. ಅದಮ್ಯ ಚೇತನವನ್ನು ಹುಟ್ಟಿಹಾಕಿದ ಅನಂತಕುಮಾರ್‌ ನಿಧನರಾಗಿದ್ದಾರೆ. ಆದರೂ ಕೆಲಸ ಸಾಗಿದೆಯಲ್ಲ ಎಂದು ಪ್ರವೇಶ ದ್ವಾರದ ಬಳಿಯೇ ಕುಳಿತಿದ್ದ ಸಂಸ್ಥೆಯ ಬೆಂಗಳೂರು ಉಸ್ತುವಾರಿ ಶ್ರೇಯರಾವ್‌ ಅವರನ್ನು “ಉದಯವಾಣಿ ‘ಮಾತಿಗೆಳೆದಾಗ, ಅನ್ನದಾಸೋಹ ನಿಲ್ಲಬಾರದು ಎಂಬುವುದು ಅನಂತಕುಮಾರ್‌ ಅವರ ಕನಸು.

ಹೀಗಾಗಿ ಅವರು ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು. “ಅನಂತಕುಮಾರ್‌ ಹಸಿರು ಭಾನುವಾರ ಕಾರ್ಯಕ್ರ ನಡೆಯುತ್ತಿದ್ದ ದಿನ ಮಾತ್ರ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಬಂದ ತಕ್ಷಣವೇ ಪ್ರವೇಶ ದ್ವಾರ ಬಳಿ ಇರುವ ಅವರ ತಾಯಿ ಭಾವಚಿತ್ರಕ್ಕೆ ಕೈ ಮುಗಿದು, ಮಂತ್ರ ಹೇಳಿ ಮುಂದಕ್ಕೆ ಸಾಗುತ್ತಿದ್ದರು. ಯಾವುದನ್ನು ಮರೆತರೂ ತಾಯಿಗೆ ನಮಸ್ಕರಿಸಿ, ಮಂತ್ರ ಹೇಳುವುದನ್ನು ಮಾತ್ರ ಮೆರೆಯುತ್ತಿರಲಿಲ್ಲ’ ಎಂದು ಹೇಳುತ್ತಿದ್ದಂತೆ ಅವರ ಕಣ್ಣಂಚಿನಲ್ಲಿ ಸಣ್ಣ ಹನಿ ಜಿನುಗಿತು.

“ಸುಮಾರು ನಾಲ್ಕು ತಿಂಗಳ ಹಿಂದೆ (ಆಗಸ್ಟ್‌ 9 ರಂದು) ಅದಮ್ಯ ಚೇತನಕ್ಕೆ ಭೇಟಿ ನೀಡಿದ್ದ ಅವರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕುರಿತು ಒಂದು ತಾಸು ಮಾತನಾಡಿದ್ದರು. ಆ ಸಮಾರಂಭವೇ ಕೊನೆ, ನಂತರ ಅವರು ಇಲ್ಲಿಗೆ ಭೇಟಿ ನೀಡಲಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುವವರ ಜತೆ ಪ್ರೀತಿಯಿಂದ ಮಾತನಾಡಿದ್ದರು’ ಎಂದು ಹೇಳಿ ಭಾವುಕರಾದರು.

ಹಸಿವಿನಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಅನ್ನ ನೀಡಬೇಕು. ಅವರು ಯಾವತ್ತೂ ಹಸಿವಿನಿಂದ ಬಳಲ ಬಾರದು ಎಂಬ ಉದ್ದೇಶದಿಂದ ಅನಂತಕುಮಾರ್‌, ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಅವರಿಲ್ಲದಿದ್ದರೂ, ಅವರು ಹೇಳಿಕೊಟ್ಟ ಮಾರ್ಗದರ್ಶನದಲ್ಲೇ ತೇಜಸ್ವಿನಿ ಅನಂತಕುಮಾರ್‌ ಅವರು ಸಂಸ್ಥೆಯನ್ನು ಮನ್ನಡೆಸಿಕೊಂಡು ಹೋಗಲಿದ್ದಾರೆ. ಅವರಿಗೆ ನಾವು ಸಾಥ್‌ ನೀಡುತ್ತೇವೆ ಎಂದು ಅದಮ್ಯ ಚೇತನದ ಮೇಲ್ವಿಚಾರಕಿ ಲಕ್ಷಿ$¾à ಹೇಳಿದರು.

“ಹಸಿರು ಭಾನುವಾರ’ಕ್ಕೆ ಮುನ್ನುಡಿ: ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಅನಂತಕುಮಾರ್‌, ಇಡೀ ಬೆಂಗಳೂರನ್ನು ಹಸಿರುಕರಣ ಮಾಡುವ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಪ್ರತಿ ಭಾನುವಾರ “ಹಸಿರು ಭಾನುವಾರ’ ಎಂಬ ಕಾರ್ಯಕ್ರಮವನ್ನು ಅದಮ್ಯ ಚೇತನ ಟ್ರಸ್ಟ್‌ ಮೂಲಕ ರೂಪಿಸಿ, ನಗರದ ಹಲವು ಭಾಗಗಳಲ್ಲಿ ಸಸಿನೆಟ್ಟಿದ್ದರು. ಇದಕ್ಕೆ “ಸಸ್ಯಾಗ್ರಹ’ ಎಂದು ಹೆಸರಿಟ್ಟಿದ್ದರು. 

ಪ್ರತಿ ಭಾನುವಾರ ವಿವಿಧ ಜಾತಿಯ ಎರಡು ಸಸಿ ನೆಟ್ಟು ನೀರೆರೆಯುತ್ತಿದ್ದ ಅವರು, ಒಂದು ಕೋಟಿ ಸಸಿಗಳನ್ನು ನೆಡುವ ಪಣ ತೊಟ್ಟಿದ್ದರು. ವರು ಆರಂಭಿಸಿರುವ “ಸಸ್ಯಾಗ್ರಹ’ ಯಶಸ್ಸಿನ ಪಥದಲ್ಲಿ ಸಾಗಿದ್ದು, 150ನೇ ಹಸಿರು ಭಾನುವಾರವನ್ನು ಪೂರೈಸಿದೆ.

ಅದಮ್ಯ ಚೇತನ ಸಂಸ್ಥೆಯ ಮೂಲಕ ಅನಂತಕುಮಾರ್‌ ಉತ್ತಮ ಕಾರ್ಯಗಳನ್ನು ಮಾಡಿ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಗತಗೊಂಡಿರುವ “ಹಸಿರು ಭಾನುವಾರ’ ಇಡೀ ಬೆಂಗಳೂರಿಗರು ಹೆಮ್ಮಪಡುವಂತಹ ಕಾರ್ಯಕ್ರಮ.
-ದೊಡ್ಡರಂಗೇಗೌಡ, ಕವಿ

* ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.