ನಗರದಲ್ಲಿ ಪ್ರಾಚೀನ, ನವೀನ ನಾಣ್ಯಗಳ ಉತ್ಸವ
Team Udayavani, Jul 29, 2017, 11:51 AM IST
ಬೆಂಗಳೂರು: ರಾಜರ ಕಾಲದ ನಾಣ್ಯಗಳು, ಬ್ರಿಟಿಷ್ ಆಳ್ವಿಕೆಯ ಕಾಲದ ನಾಣ್ಯಗಳು, ಸ್ವಾತಂತ್ರ್ಯ ಭಾರತದ ನಾಣ್ಯಗಳು ಸೇರಿದಂತೆ ವಿದೇಶಗಳಲ್ಲಿ ಬಳಕೆಯಲ್ಲಿದ್ದ ನಾಣ್ಯದ ಸಂಪೂರ್ಣ ಮಾಹಿತಿ ತಿಳಿಯಬೇಕೇ? ಹಾಗಾದರೆ, ನಗರದ ಕೆ.ಜಿ.ರಸ್ತೆಯ ಶಿಕ್ಷಕರ ಸದನಕ್ಕೊಮ್ಮೆ ಭೇಟಿ ನೀಡಿ.
ಹೌದು.. ಕನ್ನಡನಾಡು ನಾಣ್ಯ ಸಂಘದಿಂದ ಶಿಕ್ಷಕ ಸದನದಲ್ಲಿ ಜು.30ರ ತನಕ ನಾಣ್ಯದರ್ಶಿನಿ ಹಮ್ಮಿಕೊಂಡಿದ್ದು ಚಿನ್ನ, ಬೆಳ್ಳಿ, ತಾಮ್ರ ಹಾಗೂ ಹಿತ್ತಾಳೆ ನಾಣ್ಯದ ಜತೆಗೆ ರೂಪಾಯಿ, ಡಾಲರ್, ಯೆನ್ ಹಾಗೂ ಇತರೆ ದೇಶದ ನೋಟುಗಳ ಮಾರಾಟ ಮತ್ತು ಪ್ರದರ್ಶನ ಇಲ್ಲಿದೆ.
ನಾಣ್ಯದರ್ಶಿನಿ ಪ್ರದರ್ಶನ ಜಿಎಸ್‌ಟಿ ಬೆಂಗಳೂರು ಆಯುಕ್ತ ಜಿ.ನಾರಾಯಣಸ್ವಾಮಿ ಶುಕ್ರವಾರ ಉದ್ಘಾಟಿಸಿ, ನಾಣ್ಯಗಳು ಎಲ್ಲದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತವೆ. ಮುಂದಿನ ದಿನಗಳಲ್ಲಿ ನಾಣ್ಯ ಅಥವಾ ನೋಟು ಅಸ್ತಿತ್ವ ಕಳೆದುಕೊಂಡು ಎಲೆಕ್ಟ್ರಾನಿಕ್ಸ್ ಡಿವೈಸ್ ಮೂಲಕ ಬಳಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರದರ್ಶನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ನೆಹರು ಸೇರಿದಂತೆ ವಿವಿಧ ರಾಷ್ಟ್ರನಾಯಕರ ಹುಟ್ಟು ಹಬ್ಬದ ಪ್ರಯುಕ್ತ ಹೊರ ತಂದಿದ್ದ ನಾಣ್ಯಗಳು, ಕರ್ನಾಟಕದ ವಿವಿಧ ರಾಜ್ಯ ಮನೆತನಗಳಾದ ವಿಜಯನಗರ ಸಾಮ್ರಾಜ್ಯ, ಹೊಯ್ಸಳರು, ಟಿಪ್ಪು ಸುಲ್ತಾನ್, ಹೈದರಾಲಿ ಕಾಲದ ವಿಭಿನ್ನ ಬಗೆಯ ನಾಣ್ಯಗಳು, ಗುಪ್ತಾ ಮತ್ತು ಕುಶಾನರ ಕಾಲದ ಬೆಳ್ಳಿ, ಬಂಗಾರದ ನಾಣ್ಯಗಳು, 2 ಸೆಂ.ಮೀಟರ್ ಸುತ್ತಳತೆಯ ರಾಜ ಕುದುರೆ ಸವಾರಿ ಮಾಡುವ ಚಂದ್ರಗುಪ್ತನ ಕಾಲದ ಚಿನ್ನದ ನಾಣ್ಯ, ಲಕ್ಷ್ಮೀ ದೇವಿ ತಾವರೆ ಹೂವಿನ ಮೇಲೆ ಕುಳಿತಿರುವ ನಾಣ್ಯಗಳಿವೆ.
ಶತಮಾನಗಳ ಹಿಂದಿನ ನಾಣ್ಯಗಳಿಂದ ಹಿಡಿದು, ಇತ್ತೀಚಿಗಷ್ಟೇ ಭಾರತೀಯ ರಿಸರ್ವಬ್ಯಾಂಕ್ ಹೊರತಂದಿರುವ 500 ಹಾಗೂ 2 ಸಾವಿರ ರೂ.ಗಳ ನೋಟು ಹಾಗೂ ಈಗ ಬಳಕೆಯಲ್ಲಿ ಇಲ್ಲದ 1,2,3..5..10..25 ಹಾಗೂ 50 ಪೈಸೆಯ ನಾಣ್ಯದ ಜತೆಗೆ 1,2,5,10, 20, 50 ಮತ್ತು 100 ರೂ.ಗಳ ಹಳೇ ನೋಟು ಇಲ್ಲಿವೆ.
ವಿದೇಶಿ ಕರೆನ್ಸಿ: ನೇಪಾಳದ ರೂಪಾಯಿ, ಆಸ್ಟ್ರೇಲಿಯಾದ ಡಾಲರ್, ನ್ಯೂಜಿಲೆಂಡ್ ಡಾಲರ್, ಬ್ರೆಜಿಲ್ ರೀಲ್, ಸ್ವಿಜರ್ಲ್ಯಾಂಡ್‌ನ ಸ್ವೀಸ್, ಶ್ರೀಲಂಕದ ರೂಪಾಯಿ, ಪೋಲ್ಯಾಂಡ್‌ನ ಜೊಟೀಸ್, ಸಿಂಗಾಪುರದ ಕೆಂಟ್ಸ್, ಯುರೋಪ್ ದೇಶಗಳ ಕರೆನ್ಸಿ ಹಾಗೂ ನಾಣ್ಯಗಳು, ಅಮೆರಿಕಾದಲ್ಲಿ ಬಳಕೆ ಮಾಡುತ್ತಿದ್ದ ನಾಣ್ಯಗಳು ಮತ್ತು ನೋಟುಗಳು, ಹಾಂಕಾಂಗ್ ಡಾಲರ್, ದಕ್ಷಿಣ ಆಫ್ರಿಕಾ, ಚೀನಾ, ರಷ್ಯಾ, ಜಪಾನ್ ಮೊದಲಾದ ದೇಶದ ಹಳೇ ನಾಣ್ಯ ಮತ್ತು ನೋಟುಗಳ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಕಳೆದ ಅನೇಕ ವರ್ಷದಿಂದ ನಾಣ್ಯಗಳನ್ನು ಸಂಗ್ರಹಿಸಿಕೊಂಡು ಬರುತ್ತಿದ್ದೇವೆ. ಮಾರಾಟ ಕೂಡ ಮಾಡುತ್ತಿದ್ದೇವೆ. ಟಿಪ್ಪು, ಹೈದರಾಲಿ ಕಾಲದ ನಾಣ್ಯಗಳಿಂದ ಹಿಡಿದು ಬೇರೆ ಬೇರೆ ದೇಶದ, ರಾಜರುಗಳ ಆಳ್ವಿಕೆಯ ಕಾಲದ ನಾಣ್ಯಗಳು ನಮ್ಮಲ್ಲಿದೆ.
-ಮುಬಾರಕ್, ಯಶವಂತಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.