ಆನೇಕಲ್: ನಾಪತ್ತೆ ಪ್ರಕರಣ ಸುಖಾಂತ್ಯ ; ನಾಲ್ವರು ಬಾಲಕರು ಮನೆಗೆ !
Team Udayavani, Jun 10, 2018, 10:37 AM IST
ಆನೇಕಲ್: ಮಕ್ಕಳ ಕಳ್ಳರ ವದಂತಿ ವ್ಯಾಪಕವಾಗಿರುವ ವೇಳೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ನಾಲ್ವರು ಬಾಲಕರು ಶನಿವಾರ ಸಂಜೆ ನಾಪತ್ತೆಯಾಗಿ ಪೋಷಕರು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ತಾಲೂಕಿನ ಮಂಚನಹಳ್ಳಿ ಗ್ರಾಮದ ಚಂದನ್ (12), ಕಾಸ್(15), ಕಾರ್ತಿಕ್(15), ನಂದನ್ (12) ನಾಪತ್ತೆಯಾದ ಬಾಲಕರು.ಇವರೆಲ್ಲರೂ ಎಲ್ಲರೂ ಒಂದೇ ಶಾಲೆಯಲ್ಲಿ ಓದುತ್ತಿದ್ದು ಶನಿವಾರ ಸಂಜೆ ಒಟ್ಟಿಗೆ ಆಟವಾಡುತ್ತಿದ್ದರು.
ನಾಲ್ವರು ಮನೆಯವರಿಗೆ ಹೇಳದೆ ಹೊಸೂರು ಬೆಟ್ಟಕ್ಕೆ ತೆರಳಿದ್ದಾರೆ ಅಲ್ಲಿ ಇದ್ದೆಲ್ಲಾ ಹಣ ಖಾಲಿ ಮಾಡಿ ಮನೆಗೆ ಬಾರಲು ಪರದಾಡಿದ್ದಾರೆ. ಹೊಸೂರು ಬಸ್ ನಿಲ್ದಾಣದಲ್ಲಿ ದಿಕ್ಕು ತೋಚದೆ ಕುಳಿತಿದ್ದ ನಾಲ್ವರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಪೊಲೀಸರು ಮನೆಗೆ ಕರೆ ತಂದು ಪೋಷಕರ ಆತಂಕ ದೂರ ಮಾಡಿದ್ದಾರೆ.
ಮಕ್ಕಳಾದ ದಿಂದ ಕಂಗಾಲಾದ ಪೋಷಕರು ಮಕ್ಕಳು ಮನೆಗೆ ಬರುತ್ತಿದ್ದಂತೆ ತೀವ್ರ ತರಾಟಗೆ ತೆಗೆದುಕೊಂಡಿದ್ದಾರೆ.
ಸಂಜೆ 6 ಗಂಟೆಯಾದರೂ ಬಾಲಕರು ಮನೆಗೆ ಬಾರದಿದ್ದರಿಂದ ಆತಂಕಕೊಂಡ ಪೋಷಕರು, ಅತ್ತಿಬೆಲೆ ಠಾಣೆಯಲ್ಲಿ ಬಾಲಕರು ನಾಪತ್ತೆಯಾಗಿರುವ ಬಗ್ಗೆ ದೂರು
ನೀಡಿದ್ದರು.
ಚಂದನ್ ಮಂಚನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್‌ರ ಪುತ್ರನಾಗಿದ್ದಾನೆ. ಉಳಿದವರೂ ಆರ್ಥಿಕವಾಗಿ ಸ್ಥಿತಿವಂತರ ಮಕ್ಕಳಾಗಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕರ ಪತ್ತೆಗೆ 4 ತಂಡಗಳನ್ನು ರಚಿಸಿ ತೀವ್ರ ಶೋಧಕ್ಕಿಳಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.