ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಏಂಜಲ್ಸ್ ಸಂಸ್ಥೆ
Team Udayavani, Aug 25, 2018, 12:52 PM IST
ಬೆಂಗಳೂರು: ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಬೇಕು ಎಂದು ಹುಟ್ಟಿಕೊಂಡ ಮಹತ್ವಾಕಾಂಕ್ಷಿ ಶಿಕ್ಷಣ ಸಂಸ್ಥೆ ಎಂದರೆ, ಅದು ಬೆಂಗಳೂರಿನ ಎಂ.ಸಿ.ಲೇಔಟ್ ಬಡಾವಣೆಯ ವಿಜಯನಗರದಲ್ಲಿರುವ ಏಂಜಲ್ಸ್ ಶಿಕ್ಷಣ ಸಂಸ್ಥೆ.
2008ರಲ್ಲಿ ರಾಜ್ಯ ಮಟ್ಟದ ಪಠ್ಯಕ್ರಮವನ್ನು ಒಳಗೊಂಡ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದವರು ಟಿ.ನಾಗರಾಜ ಅವರು, ಪ್ರಸ್ತುತ ಶಾಲೆಯ ಅಧ್ಯಕ್ಷರಾಗಿದ್ದಾರೆ. 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಏಂಜಲ್ಸ್ ಸಂಸ್ಥೆ, ಇಂದು ಅರಿವಿನ ಕುರುಹಾಗಿ ಸಾಧನೆಯ ಉತ್ತುಂಗಕ್ಕೆ ಏರುತ್ತಿದೆ.
2008ರಲ್ಲಿ ಕೇವಲ 70 ವಿದ್ಯಾರ್ಥಿಗಳದ್ದ ಶಾಲೆಯಲ್ಲಿ ಪ್ರಸ್ತುತ, ರಾಜ್ಯ ಪಠ್ಯಕ್ರಮದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂಸ್ಥೆಯ ಅಭಿವೃದ್ಧಿ ಪಥವನ್ನು ಸೂಚಿಸುತ್ತದೆ. ಸಂಸ್ಥೆಯ ಪ್ರಗತಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿರುವುದು, ಶಾಲೆಯ ಕಾರ್ಯದರ್ಶಿಗಳೂ ಆದ ಟಿ.ನಾಗರಾಜ ಅವರು.
ಕೇವಲ ಹತ್ತು ವರ್ಷಗಳಲ್ಲಿ 800 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಎತ್ತರಕ್ಕೆ ಶಾಲೆಯನ್ನು ಬೆಳೆಸಿದ ಕೀರ್ತಿ, ತಂದೆಯು ತೋರಿದದಾರಿಯಲ್ಲಿ ನಡೆದು ಬಂದಿರುವ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಎನ್.ಮಧುಸುದನ್ ಅವರಿಗೆ ಸಲ್ಲುತ್ತದೆ. ಸಣ್ಣ ಗಿಡವಾಗಿದ್ದ ಏಂಜಲ್ಸ್ ಶಿಕ್ಷಣ ಸಂಸ್ಥೆಯನ್ನು ಬೃಹತ್ ವೃಕ್ಷವನ್ನಾಗಿ ಬೆಳೆಸಿದ ಕೀರ್ತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿರ್ದೇಶಕರಿಗೆ ಸಲ್ಲುತ್ತದೆ.
ಪ್ರಾಂಶುಪಾಲರು ಪೋಷಕರ ನಡುವಿನ ಒಡನಾಟ ಮೆಚ್ಚುವಂತರಾಗಿದ್ದು ಪೋಷಕರ ಸಲಹೆ-ಸೂಚನೆಗಳನ್ನು ಪರಿಪಾಲಿಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಕಾಲಕಾಲಕ್ಕೆ ಪೋಷಕರ ಗಮನಕ್ಕೆ ತಂದು. ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ.
ಈ ಕಾರಣದಿಂದಲೇ ಪ್ರಾಂಶುಪಾಲರು ಹಾಗೂ ಪೋಷಕರ ನಡುವೆ ಉತ್ತಮ ರೀತಿಯ ಬಾಂಧವ್ಯ ಏರ್ಪಟ್ಟಿದೆ. ಇವರ ಶೈಕ್ಷಣಿಕ ದೂರದೃಷ್ಟಿ, ಸಾಮಾಜಿಕ ಬದ್ಧತೆ, ಸಾಹಿತ್ಯಿಕ ಚಿಂತನೆ, ಸಾಂಸ್ಕೃತಿಕ ಮನಸ್ಸು ಇವೆಲ್ಲದರ ಪರಿಣಾಮವಾಗಿ ಶಾಲೆ ಉತ್ತುಂಗ ಶಿಖರವನ್ನೇರುತ್ತಿದೆ.
ಇನ್ನು ಶಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ಮಹಾಲಕ್ಷ್ಮಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲ ಪೋಷಕರು, ಶಿಕ್ಷಕರು, ಶಾಲೆಯ ಇನ್ನಿತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಒಟನಾಟ ಹೊಂದಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ಹಾಗೂ ಸಲಹೆ ನೀಡುತ್ತಾರೆ. ಪರಿಣಾಮ, ಶಿಕ್ಷಕರಲ್ಲಿ ಉತ್ತಮ ಬೋಧನೆ ಕೌಶಲ್ಯ, ವಿದ್ಯಾರ್ಥಿಗಳಲ್ಲಿ ಶಿಸ್ತು-ಸಂಯಮ, ನಿರಂತರಅಧ್ಯಯನ ಗುಣಗಳು ಕಾರ್ಯಗತವಾಗಿವೆ.
ಶಿಸ್ತು-ಕಲಾತ್ಮಕತೆ: ಏಂಜಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತಿಗೆ ಪ್ರಥಮ ಆದ್ಯತೆ. ಸಮಯ ಪಾಲನೆಗೆ ಸಂಸ್ಥೆಯಲ್ಲಿ ಅದ್ಯತೆ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ವಸ್ತು ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ, ಕನ್ನಡರಾಜ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳ ವೇಳೆ ಶಿಸ್ತಿನಿಂದ ಭಾಗವಹಿಸುವ ಮಕ್ಕಳು, ದೇಶಭಕ್ತಿ ಮೆರೆಯುತ್ತಾರೆ.
ನಮ್ಮ ಸಂಸ್ಥೆ ಜಾತಿ-ಮತ-ಧರ್ಮ-ರಾಜಕೀಯ ಆಧಾರದಲ್ಲಿ ನಿಂತಿಲ್ಲ. ನಾವು ಅನುಸರಿಸುತ್ತಿರುವುದು ಮಾನವ ಧರ್ಮ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯ ಎನ್ನುತ್ತಾರೆ ಪ್ರಾಂಶುಪಾಲರಾದ ಶ್ರೀಯುತ ಎನ್.ಮಧುಸುದನ್ ಅವರು.
ಸಹ ಪಠ್ಯ ಚಟುವಟಿಕೆ: ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಕ್ರೀಡೆ, ಸಂಸ್ಕೃತಿಯನ್ನು ಸಮ್ಮಿಳತಗೊಳಿಸಿ ಒಂದೇಕಡೆ ಎಲ್ಲವೂ ಸಿಗುವಂತೆ ಮಾಡುವ ಕಲ್ಪನೆಯನ್ನು ಪಸರಿಸಿದ ಶಿಕ್ಷಣ ಸಂಸ್ಥೆ ಇದಾಗಿದೆ. ಗುಣಾತ್ಮಕ ಚಿಂತನೆ ದೃಷ್ಟಿಕೋನ ಸೃಜಿಸುವಲ್ಲಿ ಏಂಜಲ್ಸ್ ಸಂಸ್ಥೆಗೆ, ಏಂಜಲ್ಸ್ ಸಂಸ್ಥೆಯೇ ಸಾಟಿ ಪ್ರತಿ ವರ್ಷವೂ ಕ್ರೀಡೋತ್ಸವ ಆಚರಣೆ ಮಾಡುವ ಮೂಲಕ ಎಲ್ಲ ವಿದ್ಯಾರ್ಥಿಗಳು ಎಲ್ಲ ಬಗೆಯ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಬೌದ್ಧಿಕ ಶಕ್ತಿಯ ಜೊತೆಗೆ ದೈಹಿಕ ಶಕ್ತಿಯ ವೃದ್ಧಿಸುವಂತೆ ಮಾಡುತ್ತಿದೆ.
ಪರಿಪೂರ್ಣತೆಯ ಬ್ರ್ಯಾಂಡ್: ಏಂಜಲ್ಸ್ ಎಂಬುದು ಸಮಗ್ರ ಸಾಧನೆಯ ಬ್ರ್ಯಾಂಡ್‌ಎಂಬಂತಾಗಿದೆ. ಇದಕ್ಕೆ ಕಾರಣ ಸಂಸ್ಥೆಯಲ್ಲಿನ ಪರಿಪೂರ್ಣತೆ. ವಿದ್ಯಾರ್ಥಿಯು ಇಲ್ಲಿ ಸಾಧಿಸುವ ಸಂಪೂರ್ಣ ವ್ಯಕ್ತಿತ್ವ ವಿಕಸನ. ಕರ್ನಾಟಕದ ನಾನಾ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವುದು ಹೆಮ್ಮೆಯ ವಿಷಯ.
ಶಾಲೆಯ ವಿದ್ಯಾರ್ಥಿಗಳ ಸಾಧನೆ: ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಮೊದಲು ಕೇಳುವ ಹೆಸರು ಏಂಜಲ್ಸ್ ಶಿಕ್ಷಣ ಸಂಸ್ಥೆ. ಕಳೆದ 10 ವರ್ಷಗಳ ಶೈಕ್ಷಣಿಕ ಕ್ರಾಂತಿ ಮಾಡಿರುವ ಏಂಜಲ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗಳಿಸಿರುವ ಪ್ರಶಸ್ತಿ, ಬಹುಮಾನವನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
ಶಿಕ್ಷಕರ ಪಾತ್ರ: ಪ್ರತಿಭಾವಂತ ವಿದ್ಯಾರ್ಥಿಗಳತ್ತ ಮಾತ್ರ ಗಮನಹರಿಸದೆ ಹಿಂದುಳಿದ ವಿದ್ಯಾರ್ಥಿಗಳ ಕಡೆಗೂ ಗಮನಹರಿಸಿ, ಹಿಂದುಳಿಯಲು ಕಾರಣ ಪತ್ತೆಹಚ್ಚಿ ಅವರ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಬೋಧಿಸುವ ಮೂಲಕ ಅವರನ್ನು ಮೇಲೆತರುವಲ್ಲಿ ಶಿಕ್ಷಕರ ಶ್ರಮ ಅಭುತಪೂರ್ವ. ಸಂಸ್ಥೆಯ ಪರಿಣಿತ ಮತ್ತು ಅನುಭವಿ ಶಿಕ್ಷಕರ ಪರಿಶ್ರಮದಿಂದ ಶಾಲೆಯು ಪ್ರತಿ ವರ್ಷ ಶೇ.100 ಫಲಿತಾಂಶ ದಾಖಲಿಸುತ್ತಿದೆ.
ಶಾಲೆಯ ಸೌಲಭ್ಯಗಳು: ಸಂಸ್ಥೆಯ ಗುಣಮಟ್ಟ ಮತ್ತು ಮೂಲ ಸೌಕರ್ಯದಲ್ಲಿ ರಾಜಿ ಇಲ್ಲದೆ ಬೃಹತ್ ಕಟ್ಟಡಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ.
ಪ್ರಾಂಶುಪಾಲರ ಮನದಾಳದ ಮಾತು: ಬಹುಮುಖೀ ವ್ಯಕ್ತಿತ್ವದ ಪ್ರಾಂಶುಪಾಲರಾದ ಶ್ರೀಯುತ ಎನ್.ಮಧುಸುದನ್ ಅವರು ಈ ಸಂಸ್ಥೆಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಡಿಪಾಗಿರಿಸಿಕೊಂಡಿದ್ದಾರೆ. “ಸಂಸ್ಥೆಯ ಬೆಳವಣಿಗೆಯಲ್ಲಿ ನಾನು ಎಂದೂ ಹಿಂತಿರುಗಿ ನೋಡಿಲ್ಲ.
ಮಾಡಬೇಕಾಗಿರುವುದು ತುಂಬಾ ಇದೆ. ಇದು ಇನ್ನೂ ಮೊದಲ ಹೆಜ್ಜೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದರಲ್ಲಿ ಅರ್ಥವಿಲ್ಲ. ಅವರಿಗೆ ಸಾಧಕರ ಜೀವನ ಕಥೆ ಹೇಳಿ ಸ್ಪೂರ್ತಿ ತುಂಬಿದಾಗ ಗೆಲುವು ಅವರದಾಗುತ್ತದೆ. ನಾನು ನಿತ್ಯ ಕಲಿಯುತ್ತಾ ಅವರಿಗೂ ಕಲಿಸುತ್ತಿದ್ದೇನೆ.
ಮಕ್ಕಳು ಗಮನವಿಟ್ಟು ಆಲಿಸಬೇಕೇ ಹೊರತು ಸುಮ್ಮನೆ ಕೇಳುವುದಲ್ಲ. ಕಲಿಯಬೇಕೇ ಹೊರತು ಕೇವಲ ಒದುವುದಲ್ಲ. ಪ್ರಶ್ನಿಸಬೇಕೇ ಹೊರತು ಕೇವಲ ಉತ್ತರ ನೀಡುವುದಲ್ಲ. ಇದು ನನ್ನ ಸಂಸ್ಥೆಯ ಮೂಲ ಉದ್ದೇಶ. ಇದರ ಮುಂದಿನ ಹಂತದಲ್ಲಿ ಮಕ್ಕಳಿಗೆ ತರಬೇತಿ, ವೈಯಕ್ತಿಕ ಮಾಹಿತಿ ನೀಡುವ ಮೂಲಕ ಮಕ್ಕಳನ್ನು ಪರಿವರ್ತನೆ ಮಾಡಲಾಗುವುದು’ ಎನ್ನುತ್ತಾರೆ ಎನ್.ಮಧುಸುದನ್ ಅವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.