ಕರುಣೆ ತೋರೋಣ : ಸುಡು ಬಿಸಿಲಿಗೆ ನಿತ್ರಾಣಗೊಂಡಿದೆ ಮೂಕ ಪ್ರಾಣಿ- ಪಕ್ಷಿ ಸಂಕುಲ
Team Udayavani, Apr 5, 2021, 11:44 AM IST
ರಾಜಧಾನಿಯಲ್ಲಿ ದಿನೇ ದಿನೆ ಬಿಸಿಲ ಝಳ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿ ಬೆಳೆಯುತ್ತಿರುವ ವೇಗದಿಂದಾಗಿ ಇಲ್ಲಿಯೇ ನೆಲೆ ಕಂಡುಕೊಂಡಿರುವ ಪ್ರಾಣಿ-ಪಕ್ಷಿಗಳಿಗೆ ಒಂದಲ್ಲಾ ಒಂದು ರೀತಿ ಪ್ರತ್ಯಕ್ಷ-ಪರೋಕ್ಷ ಸಂಕಷ್ಟಎದುರಾಗಿದೆ. ಸುಡು ಬೇಸಿಗೆಯಲ್ಲಿ ಆಹಾರದ ಜತೆ ನೀರನ್ನು ಹುಡುಕಲೂ ಪರದಾಡುವ ಸ್ಥಿತಿ ಆ ಮೂಕ ಜೀವಿಗಳಾದ್ದಾಗಿದೆ. ಈ ಹಿನ್ನೆಲೆಯಲ್ಲಿ ಜೀವಸಂಕುಲ ಉಳಿವಿಗಾಗಿ ಬೆಂಗಳೂರಿಗರು ಯಾವ ರೀತಿ ನೆರವಾಗಬಹುದು ಎನ್ನುವ ಕುರಿತು ತಜ್ಞರು ಏನು ಹೇಳುತ್ತಾರೆ ಎಂಬುದೇ ಈ ವಾರದ ಸುದ್ದಿ ಸುತ್ತಾಟ.
ಬೆಂಗಳೂರು: ಸುಡು ಬಿಸಿಲಿನ ಬೇಗೆಯಿಂದ ಎಲ್ಲ ಜೀವರಾಶಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲದೆ,ಪ್ರಾಣಿ-ಪಕ್ಷಿಗಳೂ ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಮಾರ್ಚ್ ತಿಂಗಳಿಗಿಂತ ಏಪ್ರಿಲ್ ತಿಂಗಳಲ್ಲಿ ಸೂರ್ಯನಪ್ರಖರತೆ ಮತ್ತಷ್ಟು ಹೆಚ್ಚಾಗಿದೆ. ಬೇಸಿಗೆಯ ಸುಡು ಬಿಸಿಲಿಗೆಬೆಂಗಳೂರು ನಿಜವಾದ ಕಾಂಕ್ರೀಟ್ ಕಾಡಾಗುತ್ತಿದೆ. ಪರಿಣಾಮ, ಪ್ರಾಣಿ-ಪಕ್ಷಿಗಳು ಬಿರು ಬಿಸಲಿನ ಶಾಖಕ್ಕೆ ಬಸವಳಿಯುತ್ತಿವೆ. ಬಿಸಿಲಿನ ಶಾಖಕ್ಕೆ ನಿತ್ರಾಣಗೊಳ್ಳುತ್ತಿರುವ ಪಕ್ಷಿಗಳು, ಕುಡಿಯುವ ನೀರು ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ.
ಬಿಸಿಲ ತಾಪಕ್ಕೆ ನಗರದಲ್ಲಿ ನಿತ್ಯ ನೂರಾರು ಪಕ್ಷಿಗಳು ನಿತ್ರಾಣದಿಂದ ನೆಲಕ್ಕೆ ಬೀಳುತ್ತವೆ. ಹದ್ದು ಗಳು ಈ ರೀತಿ ಕೆಳಗೆ ಬೀಳುವ ಪಕ್ಷಿಗಳಲ್ಲಿ ಹೆಚ್ಚು. ಕಾಗೆ, ಗೂಬೆ, ಪಾರಿವಾಳಗಳುಅಲ್ಲದೆ, ನಾಯಿ, ಅಳಿಲು, ಬೆಕ್ಕು ಹಾ ಗೂ ಮಂಗಗಳೂ ಬಿಸಿಲ ತಾಪಕ್ಕೆ ಬಸವಳಿಯುತ್ತವೆ. ಬಿಸಿಲ ತಾಪಕೆR ನಲುಗುವ ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆ ಯಾದಾಗ ಮೂರ್ಛೆ (ಪ್ರಜ್ಞೆ) ತಪ್ಪಿ ಕೆಳಗೆ ಬೀಳುತ್ತವೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ಅಗತ್ಯವಾಗುತ್ತದೆ. ಆದರೆ, ನಗರದಲ್ಲಿ ಎಲ್ಲೆಲ್ಲಿ ಪಕ್ಷಿಗಳು ಹೆಚ್ಚಾಗಿವೆಯೋ ಅಲ್ಲೆಲ್ಲಾ ನೀರಿನ ಬಟ್ಟಲುಗಳನ್ನಿಟ್ಟು ಪ್ರಾಣಿ-ಪಕ್ಷಿಗಳ ದಾಹ ನೀಗಲು ನಗರದ ಪ್ರಾಣಿ-ಪಕ್ಷಿ ಪ್ರಿಯರು ಮುಂದಾಗಿದ್ದಾರೆ. ಜತೆಗೆ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಸೇರಿದಂತೆ ಪ್ರಮು ಉದ್ಯಾನ ವನಗಳಲ್ಲಿಯೂ ಸಹ ಪಕ್ಷಿಗಳಿಗಾಗಿ ನೀರಿನಬಟ್ಟಲುಗಳನ್ನು ಇಡುತ್ತಿದ್ದಾರೆ. ಆ ಮೂಲಕ ನಗರದ ಮಂದಿ ಮಾನವೀಯತೆ ಮೆರೆಯುವ ನಿದರ್ಶನಗಳು ಹಲವು.
ನೀರಿನ ಬಟ್ಟಲಿಡಲು ಅವಕಾಶ: ನಗರದ ದೊಡ್ಡ ಮರಗಳ ಕೆಳಗೆ, ಮನೆಗಳ ತಾರಸಿ ಮೇಲೆ, ಅಂಗಡಿಗಳ ಬಳಿ ಸಾರ್ವಜನಿಕರು ನೀರಿನ ಬಟ್ಟಲುಗಳನ್ನು ಇಡುತ್ತಾರೆ. ಅದರಂತೆಯೇ,ಕಬ್ಬನ್‌ಪಾರ್ಕ್‌ನಲ್ಲಿಯೂ ನೀರಿನ ಬಟ್ಟಲು ಇಡಲು ಅವಕಾಶವಿದೆ. ಪಕ್ಷಿಗಳಿಗೆ ಅಲ್ಲಲ್ಲಿ ನೀರು ತುಂಬಿಸಿಡುವ ಸಲುವಾಗಿಯೇ ಬಟ್ಟಲುಗಳನ್ನು ಅಳವಡಿಸಬಹುದು. ಪ್ರಾಣಿ-ಪಕ್ಷಿ ಪ್ರಿಯರು ನೀರಿನ ಬಟ್ಟಲುಗಳನ್ನು ತಂದು ದೊಡ್ಡ ದೊಡ್ಡ ಮರ ಕೆಳಗೆ ಇಡಬಹುದು. ಅದಕ್ಕೆ ನಿತ್ಯ ನೀರು ತುಂಬಿಸಲಾಗುತ್ತದೆ ಎಂದು ಕಬ್ಬನ್‌ಪಾರ್ಕ್ ನೋಡಿಕೊಳ್ಳುವ ತೋಟಗಾರಿಕಾ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕೇವಲ ನೀರಿನ ದಾಹ ತಣಿಸುವುದೇ ಅಲ್ಲದೆ, ಪಕ್ಷಿಗಳ ಆಹಾರಕ್ಕೂ ಸಾರ್ವಜನಿಕರು ಬಟ್ಟಲುಗಳನ್ನು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ತಂದು ಇಡಬಹುದು. ಮರದ ಕೆಳಗೆಬಟ್ಟಲು ಇಟ್ಟು ಆಹಾರ ಧಾನ್ಯಗಳನ್ನು ಹಾಕಬಹುದು.ಈಗಾಗಲೇ ಅಳವಡಿಸಿರುವ ಬಟ್ಟಲುಗಳಲ್ಲಿ ಸಾರ್ವಜನಿಕರುಆಹಾರ ಧಾನ್ಯಗಳನ್ನು ಹಾಕುತ್ತಿದ್ದಾರೆ. ಪಾರ್ಕ್‌ನಲ್ಲಿಪ್ರಾಣಿ-ಪಕ್ಷಿಗಳಿಗೆ ಸದ್ಯ ಯಾವುದೇ ತೊಂದರೆ ಇಲ್ಲ ಎಂದವರು ಹೇಳುತ್ತಾರೆ.
37 ಡಿಗ್ರಿ ತಲುಪಿದ ತಾಪಮಾನ :
ನಗರದಲ್ಲಿ ತಾಪಮಾನ 35 ರಿಂದ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತಿದೆ. ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ಸಮಯದಲ್ಲಿ ಬಿಸಿಲ ಝಳ ಹೆಚ್ಚಾಗಿರುತ್ತದೆ. ಇದರಿಂದ ನಗರದಲ್ಲಿ ನಿತ್ಯ ಹತ್ತಾರುಪ್ರಾಣಿ-ಪಕ್ಷಿಗಳು ನಿತ್ರಾಣಗೊಂಡು ನೆಲಕ್ಕಪ್ಪಳಿಸುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಆಹಾರ ಇಡುವ ಸಾಹಸ ಬೇಡ :
ಪಕ್ಷಿಗಳಿಗೆ ಶುದ್ಧವಾದ ನೀರನ್ನು ಇಟ್ಟರೆ ಸಾಕಾಗುತ್ತದೆ. ಹೆಚ್ಚಾಗಿ ಆಹಾರ ಧಾನ್ಯಗಳನ್ನು ಇಡಬಾರದು. ಬೇಸಿಗೆ ಕಾಲದಲ್ಲಿ ಎರಡರಿಂದ ಮೂರು ತಿಂಗಳ ಕಾಲ ಆಹಾರಪದಾರ್ಥಗಳನ್ನು ಇಟ್ಟರೆ, ಪಕ್ಷಿಗಳು ನೈಸರ್ಗಿಕವಾಗಿ ಆಹಾರ ಹುಡುಕಿ ತಿನ್ನುವ ಕ್ರಮವನ್ನು ಬಿಡುತ್ತವೆ. ಬಳಿಕ ಜನರ ಮೇಲೆ ಹೆಚ್ಚು ಅವಲಂಬಿತವಾಗುತ್ತವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಪಕ್ಷಿ ಪ್ರಿಯರಿಗೆ ತಜ್ಞರು ಸಲಹೆ ನೀಡಿದ್ದಾರೆ.
ಮಡಿಕೆಯಲ್ಲಿ ಶುದ್ಧ ನೀರಿಡಿ :
ಪಕ್ಷಿಗಳಿಗೆ ನೀರು ಇಡಿ ಎಂದ ಮಾತ್ರಕ್ಕೆ ಜನರು, ಬಕೆಟ್ ಅಥವಾ ಡ್ರಮ್‌ಗಳಲ್ಲಿ ನೀರುಇಡಬಾರದು. ನೀರು ಕುಡಿಯಲು ಹೋಗುವ ಪಕ್ಷಿಗಳುಅದರಲ್ಲಿ ಬಿದ್ದರೆಸಾವನ್ನಪ್ಪುವಸಂಭವವಿರುತ್ತದೆ. ಬದಲಾಗಿ, ಚಿಕ್ಕ ಚಿಕ್ಕ ಮಣ್ಣಿನಮಡಿಕೆಯಲ್ಲಿ ಶುದ್ಧವಾದ ನೀರನ್ನು ಇಡಬೇಕು. ಎರಡುದಿನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು.ಬೇಸಿಗೆಯಲ್ಲಿ ನಾಲ್ಕು ತಿಂಗಳು ನಾಗರಿಕರು ಸಹಕಾರನೀಡಿದರೆ ವನ್ಯಜೀವಿ ಸಂಕುಲ ಉಳಿಯುತ್ತದೆ ಎಂದು ವನ್ಯಜೀವಿ ತಜ್ಞರು ಸಲಹೆ ನೀಡಿದ್ದಾರೆ.
ಕಬ್ಬನ್‌ಪಾರ್ಕ್‌ನಲ್ಲಿ ಪ್ರಾಣಿ- ಪಕ್ಷಿಗಳಿಗಿಲ್ಲ ನೀರಿನ ಕೊರತೆ :
ಬೇಸಿಗೆ ಧಗೆಗೆ ಕಾಂಕ್ರೀಟ್ ಕಾಡಾದ ಬೆಂಗಳೂರಿನಲ್ಲಿ ಮನುಷ್ಯರು ಸಾರ್ವಜನಿಕರುಮಾತ್ರವಲ್ಲದೆ, ಪ್ರಾಣಿ-ಪಕ್ಷಿಗಳೂಬಸವಳಿಯುತ್ತಿವೆ. ಮನುಷ್ಯ ತನ್ನಸಮಸ್ಯೆಗಳನು ಹೇಳಿಕೊಳ್ಳುತ್ತಾನೆ. ಆದರೆ,ಪ್ರಾಣಿ-ಪಕ್ಷಿಗಳು ನೀರು, ಆಹಾರ ಬೇಕು ಎಂದು ಹೇಗೆ ತಾನೆ ಕೇಳಲು ಸಾಧ್ಯ? ಅದರಲ್ಲೂ ನಗರದಲ್ಲಿ ಪಕ್ಷಿಗಳಿಗೆ ಆಹಾರವಿರಲಿ,ಶುದ್ಧ ನೀರು ಸಿಗುವುದೂ ದೊಡ್ಡ ಸವಾಲು. ಇದನ್ನು ಮನಗಂಡು ಕಬ್ಬನ್‌ಪಾರ್ಕ್‌ನಲ್ಲಿ ಪಕ್ಷಿ ಪ್ರಿಯರು,ಸಾರ್ವಜನಿಕರು ಇಟ್ಟಿರುವ ಸೀಮೆಂಟ್, ಪ್ಲಾಸ್ಟಿಕ್ ಬಟ್ಟಲುಗಳಿಗೆ ಸಿಬ್ಬಂದಿ ನಿತ್ಯ ನೀರು ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಜನರ ಫ್ಯಾಷನ್‌ಗೆ ವನ್ಯಜೀವಿಗಳು ಬಲಿ :
ಬಿಸಿಲಿನ ತಾಪ ಹೆಚ್ಚಳ ಹಾಗೂ ವನ್ಯಜೀವಿ ಅವನತಿಗೆ ಜನತೆಯ ಫ್ಯಾಷನ್ ಕಾರಣವಾಗುತ್ತಿದೆ.ಮನೆಗಳ ಕಿಟಿಕಿ, ವಾತಾಯನಗಳಿಗೆ ಗ್ಲಾಸ್‌ಗಳನ್ನುಅಳವಡಿಸುವುದು ಬೇರೆ ದೇಶಗಳ ವಾಡಿಕೆ.ಆದರೆ, ನಮ್ಮ ದೇಶ ಹಾಗೂ ನಗರ ಪ್ರದೇಶಗಳಿಗೆ ಗ್ಲಾಸ್ ಅಳವಡಿಕೆ ಅಗತ್ಯವಿಲ್ಲ. ಬೇರೆ ಕಡೆ ತಾಪಮಾನ ತಡೆಯಲು ಬಳಸುತ್ತಾರೆ. ಆದರೆ, ನಗರ ಪ್ರದೇಶದಲ್ಲಿ ಅಲಂಕಾರಕ್ಕಾಗಿ (ಫ್ಯಾಷನ್)ಮನೆ, ಬಿಲ್ಡಿಂಗ್‌ಗಳಿಗೆ ಗ್ಲಾಸ್ ಅಳವಡಿಸುತ್ತಿದ್ದಾರೆ.ಪಕ್ಷಿಗಳು ಕಿಟಿಕಿ ಪಕ್ಕ ಕುಳಿತಾಗ ಗಾಜಿನ ಕಿಟಿಕಿಗಳಶಾಖ ತಗುಲಿ ಅವುಗಳಿಗೆ ಹಾನಿ ಸಂಭವಿಸುವ ಘಟನೆಗಳೂ ಇರುತ್ತವೆ ಎನ್ನುತ್ತಾರೆ ತಜ್ಞರು.
10 ರಿಂದ 15 ದಿನ ಚಿಕಿತ್ಸೆ ಅವಶ್ಯಕ :
ಬಿಸಿಲಿನ ತಾಪ ಹೆಚ್ಚಳದಿಂದ ಪಕ್ಷಿಗಳಿಗೆ ಕುಡಿಯಲು ಶುದ್ಧವಾದ ನೀರು ಸಿಗದೆ ನಿತ್ರಾಣಗೊಂಡು ಕೆಳಗೆ ಬಿಳುತ್ತವೆ. ಯಾವುದೇ ಒಂದು ವನ್ಯಜೀವಿ ಅಸ್ವಸ್ಥವಾಗಿ ಕೆಳಗಡೆ ಬಿದ್ದಿದೆ ಎಂದರೆ ಅದು ಸಾಯುವ ಸ್ಥಿತಿ ತಲುಪಿದೆ ಎಂದರ್ಥ. ಈ ಸಂದರ್ಭದಲ್ಲಿ ಪಕ್ಷಿಗಳಿಗೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. 10 ರಿಂದ 15 ದಿನಗಳ ಕಾಲ ಚಿಕಿತ್ಸೆ,ಆಹಾರ ಹಾಗೂ ವಿಶ್ರಾಂತಿ ಬೇಕಾಗುತ್ತದೆ. ಬಳಿಕ ಅದು ತನ್ನ ಹಿಂದಿನಸ್ಥಿತಿಗೆ ಮರಳುತ್ತದೆ. ಹಾರಾಟ ನಡೆಸಲು ದೇಹ ಸ್ಪಂದಿಸುತ್ತದೆಎಂದು ವನ್ಯಜೀವಿ ಪರಿಪಾಲಕ ಹಾಗೂ ಬಿಬಿಎಂಪಿಸಂರಕ್ಷಣಾ ಕಾರ್ಯಪಡೆ ಮುಖ್ಯಸ್ಥ ಪ್ರಸನ್ನ ಕುಮಾರ್ ಎ. ತಿಳಿಸಿದರು.
ಪ್ರಾಣಿ-ಪಕ್ಷಿಗಳ ಕುಡಿಯುವ ನೀರಿಗಾಗಿ ಹೊಂಡ ನಿರ್ಮಾಣ :
ಯಲಹಂಕ: ಮನುಷ್ಯ ಸಕಾಲದಲ್ಲಿ ನೀರು ದೊರೆಯದಿದ್ದರೆ ಪರಿತಪಿಸುತ್ತಾನೆ. ಆದರೆನೀರೇ ಸಿಗದಿದ್ದರೆ ಮೂಕ ಪ್ರಾಣಿ ಪಕ್ಷಿಗಳ ಸ್ಥಿತಿಏನಾಗಬಹುದು? ಈ ಪ್ರಶ್ನೆಯಿಂದತಲ್ಲಣಿಸಿದ ಯುವ ಹೃದಯಗಳು ಇಲ್ಲಿನನಾಲ್ಕೈದು ಜನ ವಾಕಿಂಗ್ ಸ್ನೇಹಿತರು ಸೇರಿ ಕೆರೆಯಲ್ಲಿ ತಾವೇ ಹೊಂಡ ನಿರ್ಮಿಸಿ ನೀರನ್ನು ತುಂಬಿಸಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿಗೆ ಸಮೀಪದ ಅದ್ದಿಗಾನಹಳ್ಳಿಯಲ್ಲಿವಾಸವಾಗಿರುವ ಹುಬ್ಬಳಿ ಮೂಲದ ರಿಟಲ್ ಕಾರ್ಖಾನೆಯ ಉದ್ಯೋಗಿ ಚಂದ್ರಕುಮಾರ್‌ಮತ್ತು ಸ್ನೇಹಿತರು ಕೆರೆಯ ಅಂಗಳದಲ್ಲಿ ಬೆಳಗ್ಗೆಸಂಜೆ ವಾಕ್ ಮಾಡುವಾಗ ಏಳೆಂಟು ಕಿ.ಮೀವ್ಯಾಪ್ತಿಯಲ್ಲಿ ನೀರಿಲ್ಲದಿರುವುದು ಮರಗಳಮೇಲೆ ಇದ್ದ ನವಿಲುಗಳು ಪಕ್ಷಿಗಳು ನೀರಿಗಾಗಿಪರಿತಪಿಸುತ್ತಿರುವುದನ್ನು ಗಮನಿಸಿದ್ದಾರೆ.ಇದರ ಬಗ್ಗೆ ಚರ್ಚಿಸಿ ಬೆಳಗ್ಗೆ 5ಗಂಟೆಗೆಸ್ನೇಹಿತರೆಲ್ಲರೂ ಸೇರಿ ಕೆಸರು ಇರುವಜಾಗದಲ್ಲಿ ಹೊಂಡ ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿದ್ದಾರೆ.
ಬಿಸಿಲಿನ ಝಳ ಪ್ರಾಣಿ-ಪಕ್ಷಿಗಳನ್ನುಹೈರಾಣಾಗಿಸುತ್ತದೆ. ಕೆರೆ ನದಿಗಳಲ್ಲಿ ಒಂದು ಹನಿನೀರಿಲ್ಲ. ಮೂಕ ಪ್ರಾಣಿಗಳ ರೋದನೆ ಅರಿತು ನಾಲ್ಕೈದು ಜನ ಸ್ನೇಹಿತರು ಅವುಗಳ ನೀರಿನ ದಾಹವನ್ನು ನೀಗಿಸಲುಮುಂದಾಗಿದ್ದಾರೆ. ಪ್ರಾಣಿ-ಪಕ್ಷಿಗಳು ನೀರು ಕುಡಿದು ಹೋಗುವ ದೃಶ್ಯ ನೋಡಿ ಸಂತಸವಾಗಿದೆ. – ಶಂಕರಪ್ಪ, ರಾಜಾನುಕುಂಟೆ ಠಾಣೆ ಇನ್ಸ್‌ಪೆಕ್ಟರ್
ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಆಹಾರ ಸಿಗುತ್ತಿಲ್ಲ. ಹಸಿವು ನೀರಡಿಕೆಯಿಂದಜೀವಿಗಳು ಸಾಯುವುದನ್ನು ಕಂಡಿದ್ದೇವೆ. ಇದನ್ನುತಡೆಯಲು ಇದೊಂದು ಸಣ್ಣ ಪ್ರಯತ್ನವಾಗಿದೆ. ಇಲ್ಲಿನವಿಲುಗಳು ಮುಂಗುಸಿ ಪಕ್ಷಿಗಳು ನೀರು ಕುಡಿದು ನೆಮ್ಮದಿಯಿಂದಿದ್ದರೆ ಅಷ್ಟೇ ಸಾಕು. – ಚಂದ್ರಕುಮಾರ್, ರಿಟಲ್ ಕಾರ್ಖಾನೆ ಉದ್ಯೋಗಿ. ಅದ್ದಿಗಾನಹಳ್ಳಿ.
ವನ್ಯಜೀವಿ ಸಂಕುಲ ಉಳಿಸಲು ಸರ್ಕಾರದ ಜತೆಗೆ ನಾಗರಿಕರ ಸಹಕಾರವೂ ಅಗತ್ಯ. ಜನತೆಸರ್ಕಾರ ಮಾಡಲಿ,ಸಂಬಂಧಪಟ್ಟಅಧಿಕಾರಿಗಳುಮಾಡಲಿ ಎಂದುಭಾವಿಸಬಾರದು.ಕೆರೆಗಳು, ಸರೋವರ, ಅರಣ್ಯ, ವನ್ಯಜೀವಿಗಳುಮತ್ತು ಜೀವವಿರುವ ಎಲ್ಲಾ ಜೀವರಾಶಿಗಳಿಗೂ ರಕ್ಷಣೆ ಮತ್ತು ಅನುಕಂಪ ತೋರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ● ಪ್ರಸನ್ನ ಕುಮಾರ್ ಎ, ವನ್ಯಜೀವಿ ಪರಿಪಾಲಕ, ಬೆಂಗಳೂರು ನಗರ ಜಿಲ್ಲೆ
ಬಿಸಿಲಿನ ತಾಪ ಹೆಚ್ಚಳದಿಂದ ಪಕ್ಷಿಗಳುನಿತ್ರಾಣಗೊಳ್ಳುತ್ತವೆ. ಈಸಂದರ್ಭದಲ್ಲಿ ಪಕ್ಷಿಗಳಿಗೆ ಚಿಕಿತ್ಸೆಅತ್ಯವಶ್ಯಕ. ಚಿಕ್ಕ ಪಕ್ಷಿಗಳಾದರೆಚೇತರಿಸಿಕೊಳ್ಳಲು15 ದಿನ ಸಮಯ ಬೇಕಾಗುತ್ತದೆ. ಸೂಕ್ತ ಚಿಕಿತ್ಸೆ ಹಾಗೂವಿಶ್ರಾಂತಿ ಬಳಿಕ ಪಕ್ಷಿಯು ಸಹಜ ಸ್ಥಿತಿಗೆ ಮರಳುತ್ತದೆ. ● ನವಾಜ್ ಷರೀಫ್, ವನ್ಯಜೀವಿ ಪಶುವೈದ್ಯ
– ವಿಕಾಸ್ ಆರ್. ಪಿಟ್ಲಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.