ಅನಿತಾ ಕುಮಾರಸ್ವಾಮಿ ಆಸ್ತಿ ಮೌಲ್ಯ 167 ಕೋಟಿ
Team Udayavani, Oct 16, 2018, 6:15 AM IST
ಬೆಂಗಳೂರು: ರಾಮನಗರ ವಿಧಾನಸಭೆಯ ಉಪಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಅವರ ಪತಿ ಎಚ್.ಡಿ.ಕುಮಾರಸ್ವಾಮಿ ದಂಪತಿಗಳ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 167 ಕೋಟಿ ರೂ. ಇವರಿಬ್ಬರ ಚರಾಸ್ಥಿ ಮೌಲ್ಯ 102 ಕೋಟಿ 38 ಲಕ್ಷ 2437 ರೂ. ಸ್ಥಿರಾಸ್ತಿ ಮೌಲ್ಯ 65 ಕೋಟಿ 10 ಲಕ್ಷ 26 ಸಾವಿರ ರೂ.
ಅನಿತಾ ಅವರ ವಾರ್ಷಿಕ ಆದಾಯ ಬರೋಬ್ಬರಿ 76 ಲಕ್ಷ 35 ಸಾವಿರ 950 ರೂ. ಇವರ ಪತಿ ಸಿಎಂ ಕುಮಾರಸ್ವಾಮಿ ಅವರ ವಾರ್ಷಿಕ ಆದಾಯ 12 ಲಕ್ಷ 46 ಸಾವಿರದ 600 ರೂ. ಪತಿಗಿಂತ ಪತ್ನಿಯ ಆದಾಯವೇ ಹೆಚ್ಚು. ಸೋಮವಾರ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ವೇಳೆ ತಮ್ಮ ಆದಾಯ ಘೋಷಿಸಿಕೊಂಡಿದ್ದಾರೆ. 2017-18ರಲ್ಲಿ ಅನಿತಾ ತಮ್ಮ ವಾರ್ಷಿಕ ಆದಾಯ 76 ಲಕ್ಷ 35 ಸಾವಿರ 950 ರೂ ಎಂದು ಘೋಷಿಸಿಕೊಂಡಿದ್ದಾರೆ.
ಇನ್ನು ರಾಮನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ 49 ವರ್ಷದ ಎಲ್.ಚಂದ್ರಶೇಖರ್ ಬಳಿ ಇರುವ ಒಟ್ಟು ಸ್ಥಿರಾಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 6.80 ಕೋಟಿ. ಇವರದ್ದು ಕೃಷಿ ಆದಾಯವಾದ್ದರಿಂದ ಆದಾಯ ತೆರಿಗೆಯನ್ನು ಘೋಷಿಸಿಕೊಂಡಿಲ್ಲ.
ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಸಿದ್ದರಾಮಯ್ಯ ಆಸ್ತಿ ವಿವರದಲ್ಲಿ 47,45,584 ರೂ. ಮೌಲ್ಯದ ಚರಾಸ್ತಿ ಹಾಗೂ 12.48 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ 2.56 ಕೋಟಿ ರೂ. ಸಾಲವಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ
ಎಲ್.ಆರ್.ಶಿವರಾಮೇಗೌಡ ಅವರಿಗಿಂತ ಪತ್ನಿ ಸುಧಾ ಶಿವರಾಮೇಗೌಡ ಸಿರಿವಂತೆ. ಪತ್ನಿ 35 ಲಕ್ಷ ರೂ. ಮೌಲ್ಯದ 11.22 ಕೆಜಿ ಚಿನ್ನ ಹಾಗೂ 3 ಕಾರುಗಳ ಒಡತಿಯಾಗಿದ್ದಾರೆ. ಒಟ್ಟು 82.76 ಲಕ್ಷ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ಶಿವರಾಮೇಗೌಡರ ಬಳಿ 1.12 ಕೆಜಿ ಚಿನ್ನವಿದೆ. ಇದರ ಮೌಲ್ಯ 3.50 ಲಕ್ಷ ರೂ. ಉಳಿದಂತೆ 7,54,665 ರೂ.ನ ಮಾರುತಿ ಸ್ವಿಫ್ಟ್, 18.50 ಲಕ್ಷ ರೂ. ಮೌಲ್ಯದ ಇನ್ನೋವಾ ಹಾಗೂ 11.47 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಕಾರುಗಳಿಗೆ ಒಡೆಯರಾಗಿದ್ದು, 44,37,473 ರೂ. ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ.
ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು 63 ಕೋಟಿ ರೂ. ಆಸ್ತಿ ಘೋಷಿಸಿ ಕೊಂಡಿದ್ದಾರೆ. 2017-18ನೇ ಸಾಲಿಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾದ ಮಾಹಿತಿ ಅನ್ವಯ ಇವರು 32. 09 ಕೋಟಿ ರೂ. ಚರ ಹಾಗೂ 30.91 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.