ಪಾಲಿಕೆಯ ಮತ್ತೊಂದು ಆ್ಯಪ್ ಫ್ಲಾಪ್
Team Udayavani, Apr 6, 2018, 12:21 PM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಡಿಜಿಟಲ್ ಡೋರ್ ಸಂಖ್ಯೆ ನೀಡಲು ಪಾಲಿಕೆಯಿಂದ ಅಭಿವೃದ್ಧಿಪಡಿಸಿರುವ “ಡಿಜಿ7′ ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಪಾಲಿಕೆಯಿಂದ ನಗರದ ಎಲ್ಲ ಆಸ್ತಿಗಳಿಗೆ ತನ್ನದೇ ಆದ ಶಾಶ್ವತ ಗುರುತಿನ ಸಂಖ್ಯೆ ನೀಡಲಾಗಿದೆ.
ತಮ್ಮ ಆಸ್ತಿಯ ಡಿಜಿಟಲ್ ಸಂಖ್ಯೆ ತಿಳಿಯಲು ಹಾಗೂ ಆ ಸಂಖ್ಯೆ ಬಳಸಿ ಸ್ನೇಹಿತರು ಸುಲಭವಾಗಿ ಮನೆಗೆ ಬರಲು ಅನುಕೂಲ ಮಾಡುವುದು ಡಿಜಿ7 ಆ್ಯಪ್‌ನ ಉದ್ದೇಶ. ಆದರೆ, ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದ ಕಾರಣಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿದ ನಾಗರಿಕರು ತಮ್ಮ ಕಾಮೆಂಟ್‌ಗಳ ಮೂಲಕ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ 19 ಲಕ್ಷ ಆಸ್ತಿಗಳನ್ನು ಜಿಐಎಸ್ ಮ್ಯಾಪಿಂಗ್ ಮೂಲಕ ಗುರುತಿಸಲಾಗಿದ್ದು, ಪ್ರತಿ ಆಸ್ತಿಗೆ ಅಕ್ಷರ ಮತ್ತು ಅಂಕಿಗಳನ್ನು ಒಳಗೊಂಡ 7 ಅಂಕಿಯ ಡಿಜಿಟಲ್ ಸಂಖ್ಯೆ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಆಸ್ತಿಗಳನ್ನು ಗುರುತಿಸಲು ಸುಲಭವಾಗಿದ್ದು, ಆ ಮೂಲಕ ಆಸ್ತಿ ತೆರಿಗೆ ಹೆಚ್ಚಿಸಿಕೊಳ್ಳುವುದು ಪಾಲಿಕೆಯ ಯೋಚನೆಯಾಗಿತ್ತು.
ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಹಲವಾರು ನಾಗರಿಕರು ತಮ್ಮ ಲೊಕೇಷನ್ ಬಳಸಿ ಮನೆಯ ಡಿಜಿಟಲ್ ಸಂಖ್ಯೆ ತಿಳಿಯಲು ಮುಂದಾಗಿದ್ದು, ಈ ವೇಳೆ ಬೇರೆ ಜಾಗದಲ್ಲಿರುವ ಆಸ್ತಿಯನ್ನು ತಮ್ಮ ಆಸ್ತಿ ಎಂದು ತೋರಿಸಿದೆ. ಜತೆಗೆ ತಮ್ಮ ಸ್ನೇಹಿತರಿಗೆ ಆ್ಯಪ್ ಮೂಲಕ ಲೊಕೇಷನ್ ಶೇರ್ ಮಾಡಿದಾಗಲೂ ಅವರನ್ನು ತಪ್ಪು ವಿಳಾಸಕ್ಕೆ ಕೊಂಡೊಯ್ದ ಬಗ್ಗೆ ನಾಗರಿಕರಯ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದೇ ಸಾವಿರ ಡೌನ್‌ಲೋಡ್: ಡಿಜಿ7 ಆ್ಯಪ್‌ಗೆ ಹೆಚ್ಚಿನ ಪ್ರಚಾರ ದೊರೆಯದ ಹಿನ್ನೆಲೆಯಲ್ಲಿ ನಾಗರಿಕರಿಂದ ಆ್ಯಪ್‌ಗೆ ಸ್ಪಂದನೆ ದೊರಕಿಲ್ಲ. ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಸಾವಿರ ಬಾರಿ ಮಾತ್ರ ಡೌನ್‌ಲೋಡ್ ಆಗಿದೆ. 44 ಬಳಕೆದಾರರು ಆ್ಯಪ್ ಕುರಿತು ಅಭಿಪ್ರಾಯ ತಿಳಿಸಿದ್ದು, ಆ ಪೈಕಿ 23 ಮಂದಿ ಕೇವಲ 1 ಅಂಕ ನೀಡಿದ್ದಾರೆ. ಇದೇ ವೇಳೆ “161’ಕ್ಕೆ ಸಂದೇಶ ಕಳುಹಿಸುವ ಮೂಲಕ 900 ಜನ ತಮ್ಮ ಡಿಜಿ ಸಂಖ್ಯೆ ಪಡೆದುಕೊಂಡಿದ್ದಾರೆ.
ತೆರಿಗೆ ಪಾವತಿಸದ ಮಾಹಿತಿ ಬಹಿರಂಗ: ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಡಿಜಿಟಲ್ ಡೋರ್ ಸಂಖ್ಯೆ ತಂತ್ರಾಂಶ ಹಾಗೂ “ಡಿಜಿ 7 ಮೊಬೈಲ್ ಅಪ್ಲಿಕೇಷನ್’ನ್ನು 83 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್‌ನಲ್ಲಿ ಪಿಐಡಿ ಅಥವಾ ಅಪ್ಲಿಯೇಷನ್ ಸಂಖ್ಯೆ ಹಾಕಿದರೆ, ಆಸ್ತಿಯ ವಿವರ ಸಿಗಲಿದೆ. ಈ ವೇಳೆ ಆಸ್ತಿಯ ಡಿಜಿಟಿಲ್ ಸಂಖ್ಯೆಯೊಂದಿಗೆ ಆಸ್ತಿಯ ಮಾಲೀಕರು ತೆರಿಗೆ ಪಾವತಿಸಿದಿದ್ದರೆ, ಇವರು ಪಾಲಿಕೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡುತ್ತದೆ.
ಇಂದಿರಾ ಕ್ಯಾಂಟೀನ್ ಆ್ಯಪ್ ನಂ.1: ಪಾಲಿಕೆಯಿಂದ ರಸ್ತೆಗುಂಡಿ ಸಮಸ್ಯೆ, ಬೀದಿ ದೀಪ, ಗಿಡ ಹಂಚಿಕೆ, ಕ್ಯಾಂಟೀನ್ ಮಾಹಿತಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಹತ್ತಾರು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಲಾಗಿದೆ.
ಅದರಂತೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಪಾಲಿಕೆಯ ಆ್ಯಪ್‌ಗ್ಳ ಪೈಕಿ ಅತಿಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿರುವ (50 ಸಾವಿರ) ಹಾಗೂ ಹೆಚ್ಚಿನ ರೇಟಿಂಗ್ (4.0) ಪಡೆದಿರುವ ಆ್ಯಪ್ ಎಂಬ ಹೆಗ್ಗಳಿಕೆಗೆ “ಇಂದಿರಾ ಕ್ಯಾಂಟೀನ್’ ಆ್ಯಪ್ ಪಾತ್ರವಾಗಿದೆ. ಇದರೊಂದಿಗೆ ಗಿಡಗಳ ಹಂಚಿಕೆಗೆ ಅಭಿವೃದ್ಧಿಪಡಿಸಿದ “ಬಿಬಿಎಂಪಿ ಗ್ರೀನ್’ ಆ್ಯಪ್‌ಗೂ ಸಹ 4.0 ರೇಟಿಂಗ್ ನೀಡಲಾಗಿದ್ದು, ಪಾಲಿಕೆಯ ಆ್ಯಪ್‌ಗ್ಳ ಪೈಕಿ “ಡಿಜಿ7′ ಆ್ಯಪ್‌ಗೆ ಅತ್ಯಂತ ಕಡಿಮೆ (2.4) ರೇಟಿಂಗ್ ನೀಡಲಾಗಿದೆ.
ತೆರಿಗೆ ಪಾವತಿಸಿ ಸಂಖ್ಯೆ ಪಡೆಯಿರಿ: ನಾಗರಿಕರಿಗೆ ಸುಲಭವಾಗಿ ಡಿಜಿ ಸಂಖ್ಯೆ ದೊರೆಯುವಂತೆ ಮಾಡಲು ಮುಂದಾಗಿರುವ ಬಿಬಿಎಂಪಿ, ಆಸ್ತಿ ತೆರಿಗೆ ಪಾವತಿಯ ಚಲನ್ ಹಾಗೂ ರಸೀದಿಯಲ್ಲಿ ಡಿಜಿಟಲ್ ಸಂಖ್ಯೆ ನಮೂದಿಸಲು ಯೋಜನೆ ರೂಪಿಸಿದೆ. ಅದರಂತೆ ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಸಲು ಜನರೇಟ್ ಮಾಡುವ ಚಲನ್ ಹಾಗೂ ತೆರಿಗೆ ಪಾವತಿಸಿದ ನಂತರ ದೊರೆಯುವಂತಹ ರಸೀದಿಯಲ್ಲಿ ಆಸ್ತಿಯ ಡಿಜಿಟಲ್ ಸಂಖ್ಯೆ ಮುದ್ರಿತವಾಗಿರುತ್ತದೆ.
ಪಾಲಿಕೆ ಆ್ಯಪ್‌ಗ್ಳ ಸಾಧನೆ ಪಟ್ಟಿ
ಆ್ಯಪ್ ಡೌನ್‌ಲೋಡ್‌ಗಳು ರೇಟಿಂಗ್ ರೇಟಿಂಗ್ ಕೊಟ್ಟವರ ಸಂಖ್ಯೆ
ಬಿಬಿಎಂಪಿ ಸಹಾಯ 10,000+ 2.8 431
ಬಿಬಿಎಂಪಿ ಗ್ರೀನ್ 10,000+ 4.0 232
ಕ್ಲೀನ್ ಬೆಂಗಳೂರು 500+ 3.0 22
ಇಂದಿರಾ ಕ್ಯಾಂಟೀನ್ 50,000+ 4.0 972
ಫಿಕ್ಸ್ ಮೈ ಸ್ಟ್ರೀಟ್ 10,000+ 2.5 342
ಡಿಜಿ7 1,000+ 2.4 44
ಬಳಕೆದಾರರ ಅಭಿಪ್ರಾಯ
ಗೂಗಲ್ ಮ್ಯಾಪ್‌ನಲ್ಲಿ ನಮ್ಮ ಆಸ್ತಿಯ ಲೊಕೇಷನ್ ಸರಿಯಾಗಿ ತೋರಿಸುತ್ತಿದೆ. ಆದರೆ, ಡಿಜಿ7 ಆ್ಯಪ್‌ನಲ್ಲಿ ಬೇರೆ ಯಾವುದೋ ಸ್ಥಳ ತೋರಿಸಿ ಗೊಂದಲ ಮೂಡಿಸುತ್ತಿದೆ. ಹೀಗಾಗಿ ಆ್ಯಪ್‌ನ್ನು ಡಿಲಿಟ್ ಮಾಡುತ್ತಿದ್ದೇನೆ.
-ನಾರಾಯಣ್ ಎಸ್. ಬಾಲಾಜಿ
ಡಿಜಿ ಸಂಖ್ಯೆ ಬಳಸಿ ಸ್ನೇಹಿತನಿಗೆ ನನ್ನ ಲೊಕೇಷನ್ ಶೇರ್ ಮಾಡಿದಾಗ ಬೇರೆ ಯಾವುದೋ ಜಾಗ ತೋರಿಸುತ್ತಿದ್ದು, ಅತ್ಯಂತ ಕೆಟ್ಟ ಆ್ಯಪ್ ಇದಾಗಿದೆ. ಲಾಂಡ್ರಿ ಶಾಪ್ ಹಾಗೂ ಹಾಲು ಮಾರುವವರ ಆ್ಯಪ್ ಇದಕ್ಕಿಂತ ಉತ್ತಮವಾಗಿದೆ.
-ರೂಪೇಶ್
ಅದ್ಭುತವಾದ ಆ್ಯಪ್ ಇದಾಗಿದ್ದು, ನಾಗರಿಕರು ನೀಡುವ ಸಲಹೆಗಳನ್ನು ಸ್ವೀಕರಿಸಿ ಇನ್ನಷ್ಟು ಕೆಲವು ಮಾರ್ಪಾಡುಗಳನ್ನು ಮಾಡಿದರೆ ನಗರದಲ್ಲಿನ ಆಸ್ತಿಗಳನ್ನು ಹುಡುಕಲು ಸುಲಭವಾಗಲಿದೆ.
-ಮಧು ಶೆಟ್ಟಿ
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.