ಉತ್ತರಾಯಣ-2 : GST ಗೊಂದಲಗಳಿಗೆ ಪರಿಹಾರ
Team Udayavani, Jul 5, 2017, 2:18 AM IST
ಚಿಕ್ಕದರ್ಶಿನಿ ಹೊಟೇಲ್‌ವೊಂದಕ್ಕೆ ಹೋಗಿದ್ದೆ. ಮುಂಚೆ ಒಂದು ಪ್ಲೇಟ್ ಇಡ್ಲಿಗೆ 15 ರೂ. ಬಿಲ್ ಮಾಡುತ್ತಿದ್ದರು. ಈಗ ಏಕಾಏಕಿ ಶೇ.12ರಂತೆ 3.50 ರೂ. ಜಾಸ್ತಿ ಮಾಡಿದ್ದಾರೆ. ಅಂದಾಜು 25,000 ರೂ. ವಹಿವಾಟು ಇರುವ ಈ ಹೊಟೇಲ್‌ಗೆ ನಿಜಕ್ಕೂ ಜಿಎಸ್‌ಟಿ ಅಪ್ಲೈ ಆಗುವುದೇ?
ಮಂಜುನಾಥ್, ಬಸವೇಶ್ವರನಗರ
– ವಾಸ್ತವದಲ್ಲಿ ಸಣ್ಣಪುಟ್ಟ ದರ್ಶಿನಿ, ಹೊಟೇಲ್‌ಗಳಲ್ಲಿ ತಿಂಡಿ – ತಿನಿಸಿನ ಬೆಲೆ ಇಳಿಕೆಯಾಗಬೇಕು. ಏಕೆಂದರೆ ಈ ವ್ಯಾಪಾರಿಗಳು ತೆರಿಗೆ ವಿನಾಯಿತಿ ಪ್ರಯೋಜನ ಪಡೆಯುತ್ತಿದ್ದಾರೆ. ವಾರ್ಷಿಕ 20 ಲಕ್ಷ ರೂ.ವರೆಗಿನ ವಹಿವಾಟಿದ್ದರೆ ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ.
ನಾನು ಸೋಮವಾರ ಬೈಕ್‌ಗೆ 10 ಲೀಟರ್ ಪೆಟ್ರೋಲ್ ಪಡೆದಿದ್ದು, ಇದರಲ್ಲಿ ಎಷ್ಟು ಪ್ರಮಾಣದ ಜಿಎಸ್‌ಟಿ ಇದೆ?
ರಾಧಿಕಾ, ಜಯನಗರ
– ಪೆಟ್ರೋಲ್, ಡೀಸೆಲ್‌ಗೆ ಜಿಎಸ್‌ಟಿ ತೆರಿಗೆ ಅನ್ವಯವಾಗುವುದಿಲ್ಲ. ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಪ್ರವೇಶ ತೆರಿಗೆ (ಎಂಟ್ರಿ ಟ್ಯಾಕ್ಸ್) ರದ್ದಾಗಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ದರ 3.26 ರೂ. ಹಾಗೂ ಡೀಸೆಲ್ ದರ 2.89 ರೂ. ಕಡಿಮೆಯಾಗಿದೆ. ಉಳಿದಂತೆ ಕೇಂದ್ರ ಅಬಕಾರಿ, ರಾಜ್ಯ ಮಾರಾಟ ತೆರಿಗೆ ವಿಧಿಸುವುದು ಮುಂದುವರಿಯಲಿದೆ.
– ಬಿ.ವಿ.ಮುರಳಿಕೃಷ್ಣ, ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
►GST ಉತ್ತರಾಯಣ-1: ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ: http://bit.ly/2umBYnd
ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.