ಕೋಟ್ಯಂತರ ರೂ. ಆಸ್ತಿ ಬಯಲು
Team Udayavani, Oct 7, 2018, 6:55 AM IST
ಬೆಂಗಳೂರು: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್ ಎನ್.ಜಿ.ಗೌಡಯ್ಯ ಅವರ ಮನೆಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರಕಾರ ಆರೋಪಿತ ಅಧಿಕಾರಿಗಳು ಶೇಕಡ ಪ್ರಮಾಣದಲ್ಲಿ ಆದಾಯಕ್ಕೂ ಮೀರಿ ಆಸ್ತಿಗಳಿಸಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ
ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಐಜಿಪಿ ಚಂದ್ರಶೇಖರ್ ಹೇಳಿದ್ದಾರೆ. ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿ ಬಳಿಕ ಶನಿವಾರ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ಸ್ವಾಮಿ ಮತ್ತು ಗೌಡಯ್ಯ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ಹಾಗೂ ನಗದು ಬಗ್ಗೆ ಸಾರ್ವಜನಿಕರೇ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಆರೋಪಿತ ಅಧಿಕಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಶನಿವಾರ ಸಂಜೆವರೆಗೂ ಪರಿಶೀಲಿಸಲಾಯಿತು. ವಿದೇಶಿ ಕರೆನ್ಸಿ ಸೇರಿ ಕೋಟ್ಯಂತರ ರೂ. ನಗದು ಸಿಕ್ಕಿರುವುದರಿಂದ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಇಬ್ಬರು ಅಧಿಕಾರಿಗಳ ಮನೆಗಳಲ್ಲಿ ಪತ್ತೆಯಾದ ಆಸ್ತಿ ಮತ್ತು ನಗದು ಪ್ರಮಾಣ ಲೆಕ್ಕಪರಿಶೋಧನೆ ವೇಳೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಸ್ವಾಮಿ ಮನೆಯಲ್ಲಿ 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಜಮೀನುಗಳ ದಾಖಲೆಗಳು, 7.5ಕೆ.ಜಿ.ಬೆಳ್ಳಿ ಪತ್ತೆಯಾಗಿದೆ. ಗೌಡಯ್ಯನ ಮನೆಯಲ್ಲಿ 18 ಕೆ.ಜಿ. 200 ಗ್ರಾಂ ಚಿನ್ನ, 77 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿದ್ದ 15 ಲಕ್ಷ ರೂ. ಠೇವಣಿ ಹಣ ಸಿಕ್ಕಿದೆ. ಅಧಿಕಾರಿಗಳ ಮನೆಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ ಎಂದು ವಿವರಿಸಿದರು.
ಆರೋಪಿತ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಒಂದು ವೇಳೆ ತಪ್ಪು ಮಾಹಿತಿ ಕೊಟ್ಟರೆ ತಾಂತ್ರಿಕವಾಗಿಯೂ ವಿಚಾರಣೆ ನಡೆಸಲಾಗುವುದು. ಸ್ವಾಮಿ ಹಾಗೂ ಇವರ ಸಹೋದರಿ ಮನೆಯಿಂದ ಎಸೆದ ದಾಖಲೆ ಮತ್ತು ನಗದು ಇರುವ ಬ್ಯಾಗ್‌ಗಳನ್ನು ಕೊಂಡೊಯ್ಯಲು ಬಂದಿದ್ದ ಆಟೋ ಚಾಲಕನನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ, ಇಬ್ಬರು ಅಧಿಕಾರಿಗಳನ್ನು ಏಕಾಏಕಿ ಬಂಧಿಸಲು ಸಾಧ್ಯವಿಲ್ಲ. ಒಮ್ಮೆ ಅವಕಾಶ ಕೊಡುತ್ತೇವೆ. ಸಿಕ್ಕ ನಗದು, ದಾಖಲೆಗಳ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಹೇಳುತ್ತವೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಅದು ಕೂಡ ಐಪಿಸಿ ಸೆಕ್ಷನ್ ಅಡಿ ಅಪರಾಧವಾಗುತ್ತದೆ. ವಿಚಾರಣೆ ವೇಳೆ ಅವರು ಸ್ಪಷ್ಟ ಮಾಹಿತಿ ನೀಡದಿದ್ದರೆ ಬಂಧಿಸಲಾಗುವುದು ಎಂದು ಹೇಳಿದರು.
500 ಕರೆ, 70 ಇ-ಮೇಲ್
ಇಬ್ಬರು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರೇ ಎಸಿಬಿಗೆ ಕರೆ ಮತ್ತು ಇ-ಮೇಲ್ ಮೂಲಕ ದೂರು ನೀಡುತ್ತಿದ್ದರು. ಸುಮಾರು 500ಕ್ಕೂ ಹೆಚ್ಚು ಕರೆಗಳು ಹಾಗೂ 70 ಇ-ಮೇಲ್‌ಗಳ ಮೂಲಕ ದೂರು ನೀಡಿದ್ದರು. ಕೆಲವೊಂದು ಆಸ್ತಿಗಳ ಬಗ್ಗೆ ಸಾರ್ವಜನಿಕರೇ ಸ್ಪಷ್ಟ ಮಾಹಿತಿ ನೀಡಿದ್ದರು. ಹೀಗಾಗಿ ದಾಳಿಯ ಯಶಸ್ಸು ನಮಗಿಂತ ಸಾರ್ವಜನಿಕರಿಗೇ ಸಲ್ಲಬೇಕು. ಉತ್ತಮ ಮಾಹಿತಿ ಕೊಟ್ಟ ಸಾರ್ವನಿಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶನಿವಾರ ಕೂಡ ಕರೆಗಳು ಬರುತ್ತಿದ್ದು, ಪರಿಶೀಲನೆ ನಡೆಸಲಾಗಿದೆ. ಇಬ್ಬರು ಅಧಿಕಾರಿಗಳು ಬೆಂಗಳೂರು ನಗರ, ಹೊರವಲಯ ಹಾಗೂ ನೆರೆ ಜಿಲ್ಲೆಗಳಲ್ಲಿ ಬೇನಾಮಿ ಆಸ್ತಿ ಸಂಪಾದಿಸಿರುವ ಮಾಹಿತಿ ಇದೆ ಎಂದರು.
ಎಸಿಬಿಗೆ ಅಭಿನಂದನೆ
ಕೆಐಎಡಿಬಿಯಲ್ಲಿ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದರು. ಇನ್ನು ಗೌಡಯ್ಯ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಇವರ ದೌರ್ಜನ್ಯದಿಂದ ನೊಂದಿದ್ದ ಸಾರ್ವಜನಿಕರೇ ಇವರ ಬಗ್ಗೆ ಮಾಹಿತಿ ಕಲೆ ಹಾಕಿ ಎಸಿಬಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಎಸಿಬಿಯ ಸಹಾಯವಾಣಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಹಿಡಿದ ನಿಮಗೆ ಧನ್ಯವಾದಗಳು ಎಂದು ಸಾರ್ವಜನಿಕರು ನಿಟ್ಟುಸಿರುವ ಬಿಡುತ್ತಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಸಹಾಯವಾಣಿ
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಹೀಗಾಗಿ ಎಸಿಬಿ ಸಹಾಯವಾಣಿ 1064 ಮತ್ತು 080-22342100 ಅಥವಾ 9480806300ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಹಾಗೆಯೇ ಸಾಮಾಜಿಕ ಜಾಲತಾಣ ಫೇಸ್‌ಬುಕ್ anticorruptionbureau.karnataka2016 ಮತ್ತು ಟ್ವಿಟರ್ @acbkarnataka ಎಂಬ ಹೆಸರಿನಲ್ಲಿ ಖತೆಗಳನ್ನು ತೆರೆಯಲಾಗಿದ್ದು, ಈ ಮೂಲಕವೂ ವೈಯಕ್ತಿಕವಾಗಿ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎಸಿಬಿ ಅಧಿಕಾರಿಗಳು ಹೇಳಿದರು.
ಹೆಚ್ಚುವರಿಯಾಗಿ ಪತ್ತೆಯಾದ ನಗದು, ದಾಖಲೆಗಳು
ಸ್ವಾಮಿ ಮನೆಯಲ್ಲಿ 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಜಮೀನುಗಳ ದಾಖಲೆಗಳು, 7.5ಕೆ.ಜಿ.ಬೆಳ್ಳಿ ಪತ್ತೆಯಾಗಿದ್ದು, ಗೌಡಯ್ಯನ ಮನೆಯಲ್ಲಿ 18 ಕೆ.ಜಿ. 200 ಗ್ರಾಂ ಚಿನ್ನ, 77 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿದ್ದ 15 ಲಕ್ಷ ರೂ. ಠೇವಣಿ ಹಣ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.