ಕೂಡಿ ಬಾಳಲು ರಾಜಕೀಯವೇ ವಿರೋಧಿ: ನಿಡುಮಾಮಿಡಿ ಶ್ರೀ
Team Udayavani, May 3, 2017, 12:26 PM IST
ಬೆಂಗಳೂರು: ನಕರಾತ್ಮಕ ಸಂಸ್ಕೃತಿ ಮತ್ತು ಏಕಮುಖ ಧರ್ಮ ಪ್ರತಿಪಾದನೆಯಿಂದ ಯಾವುದೇ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯವಿಲ್ಲ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪ್ರಸ್ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಯೋಜಿಸಿದ್ದ “ಹಲವು ಧರ್ಮಗಳು ಒಂದು ಭಾರತ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಬಹುಪಾಲು ಮಂದಿ ಸಾಮರಸ್ಯ ಬಯಸುತ್ತಿದ್ದಾರೆ. ಹಾಗೆಯೇ ಎಲ್ಲ ಧರ್ಮಗಳು ಕೂಡ ಸ್ನೇಹವನ್ನು ಆಹ್ವಾನಿಸುತ್ತಿವೆ. ಆದರೆ, ರಾಜಕೀಯ ನಾಯಕತ್ವ ಕೂಡಿ ಬಾಳುವುದನ್ನು ವಿರೋಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ನಾಯಕತ್ವ ಜನರ ನಡುವಿನ ಸಂಬಂಧಗಳನ್ನು ಬೇರ್ಪಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಇದರ ಬಗ್ಗೆ ಜನಜಾಗೃತಿಗೊಳ್ಳಬೇಕು ಎಂದು ಹೇಳಿದರು. ದೇಶದ ಮೂಲ ನಿವಾಸಿಗಳು ಯಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಭಾರತ ಹಿಂದೂ ಧರ್ಮದಿಂದ ಮಾತ್ರ ರೂಪುಗೊಂಡಿದಲ್ಲ. ಆದರೆ, ಇದೊಂದು ಸರ್ವ ಧರ್ಮಗಳ ಒಕ್ಕೂಟ. ವಿಭಿನ್ನ ಸಂಸ್ಕೃತಿಗಳ, ಭಾಷೆಗಳ ಹಾಗೂ ಸಮುದಾಯಗಳ ಚೌಕಟ್ಟು ಎಂದರು.
ಸಮು ದಾಯಗಳೊಡನೆ ಸಾಮರಸ್ಯದ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು. ಇದೇ ವೇಳೆ ಅಭಿಯಾನದ ಲಾಂಛನ ಬಿಡುಗಡೆ ಮಾಡಲಾಯಿತು. ಸಿಎಸ್ಐ ಚರ್ಚ್ನ ಪಾದ್ರಿ ಮನೋಹರ್ ಚಂದ್ರ ಪ್ರಸಾದ್ ಮಾತನಾಡಿದರು. ನಗರದ ಜಾಮಿಯಾ ಮಸೀದಿಯ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಶ್ರೀಗುರು ಸಿಂಗ್ ಸಭಾದ ಅಧ್ಯಕ್ಷ ಎಸ್.ಪರಾಬ್ ಜೊತ್ ಸಿಂಗ್ ಬಾಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.